ETV Bharat / bharat

5 ತಿಂಗಳಲ್ಲಿ ಎರಡು ಬಾರಿ ವಧುವಾಗಿ ಮಾರಾಟವಾಗಿದ್ದ ಅಪ್ರಾಪ್ತ ಬಾಲಕಿಯ ರಕ್ಷಣೆ - ಅಪ್ರಾಪ್ತ ಬಾಲಕಿ

ಐದು ತಿಂಗಳ ಹಿಂದೆ ಮಧ್ಯಪ್ರದೇಶದ ಕಟ್ನಿಯಲ್ಲಿರುವ ತನ್ನ ಮನೆಯಿಂದ 10ನೇ ತರಗತಿ ಪರೀಕ್ಷೆ ಬರೆದು, ಪ್ರವಾಸಕ್ಕೆ ಹೊರಟಿದ್ದ ವೇಳೆ ಅಪ್ರಾಪ್ತ ಬಾಲಕಿಗೆ ತೀವ್ರ ತೊಂದರೆಗಳು ಎದುರಾಗಿದ್ದವು.

Rajasthan news
5 ತಿಂಗಳಲ್ಲಿ ಎರಡು ಬಾರಿ ವಧುವಾಗಿ ಮಾರಾಟವಾಗಿದ್ದ ಮಧ್ಯಪ್ರದೇಶದ ಅಪ್ರಾಪ್ತ ಬಾಲಕಿಯ ರಕ್ಷಣೆ
author img

By

Published : May 2, 2023, 11:08 PM IST

ಕೋಟಾ (ರಾಜಸ್ಥಾನ): 10ನೇ ತರಗತಿಯ ಪರೀಕ್ಷೆ ಮುಗಿಸಿ ಪ್ರವಾಸಕ್ಕೆ ತೆರಳಿದ್ದ ಮಧ್ಯಪ್ರದೇಶದ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಎರಡು ಬಾರಿ ವಧುವಿನಂತೆ ಮಾರಾಟ ಮಾಡಲಾಗಿದೆ ಎಂದು ಇಲ್ಲಿನ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು. ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಮನೆಯೊಂದರಲ್ಲಿ ತಿಂಗಳುಗಟ್ಟಲೆ ಕೂಡಿ ಹಾಕಲಾಗಿತ್ತು. ಆಗ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸ್ವಲ್ಪ ಸಮಯದ ನಂತರ, ಕೋಟಾದಲ್ಲಿ ರೈಲ್ವೆ ಪೊಲೀಸರಿಗೆ ಆಕೆ ಸಿಕ್ಕಿದ್ದಾಳೆ ಎಂದು ಸಿಡಬ್ಲ್ಯುಸಿ ಅಧ್ಯಕ್ಷೆ ಕನೀಜ್ ಫಾತಿಮಾ ಮಾಹಿತಿ ನೀಡಿದರು.

ಏನಿದು ಪ್ರಕರಣ?: ''ಐದು ತಿಂಗಳ ಹಿಂದೆ ಮಧ್ಯಪ್ರದೇಶದ ಕಟ್ನಿಯಲ್ಲಿರುವ ತನ್ನ ಮನೆಯಿಂದ 10 ನೇ ತರಗತಿ ಪರೀಕ್ಷೆಯನ್ನು ನೀಡಿದ ನಂತರ ಪ್ರವಾಸಕ್ಕೆಂದು ಹೊರಟಿದ್ದ ವೇಳೆ ಬಾಲಕಿಗೆ ತೀವ್ರ ತೊಂದರೆ ಎದುರಾಯಿತು. ಬಾಲಕಿ ಕಟ್ನಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ, ಕೆಲವು ಯುವಕರು ಅವಳೊಂದಿಗೆ ಜೊತೆಗೆ ಸ್ನೇಹ ಬೆಳೆಸಿದರು. ಹತ್ತಿರದ ಉದ್ಯಾನವನಕ್ಕೆ ಕರೆದೊಯ್ದರು. ಅಲ್ಲಿ ಅವರು ಆಕೆಗೆ ಆಹಾರ ಮತ್ತು ಪಾನೀಯವನ್ನು ನೀಡಿದರು. ಅದನ್ನು ಸೇವಿಸಿದ ನಂತರ ಬಾಲಕಿ ಪ್ರಜ್ಞಾಹೀನಳಾದಳು. ಬಾಲಕಿಗೆ ಪ್ರಜ್ಞೆ ಬಂದಾಗ, ಉಜ್ಜಯಿನಿಯ ಹೋಟೆಲ್ ಕೊಠಡಿಯಲ್ಲಿ ಇಬ್ಬರು ಪುರುಷರು ಮತ್ತು ಮಹಿಳೆ ಕಾಣಿಸಿಕೊಂಡಿದ್ದರು'' ಎಂದು ಕನೀಜ್ ಫಾತಿಮಾ ಹೇಳಿದರು.

ಬಾಲಕಿಯನ್ನು ಎರಡು ಬಾರಿ ಮಾರಾಟ ಮಾಡಿದ ದುರುಳರು: ''ಅವರು ತನಗೆ ಬೆದರಿಕೆ ಹಾಕಿದರು. 27 ವರ್ಷದ ಯುವಕನನ್ನು ಮದುವೆಯಾಗುವಂತೆ ಒತ್ತಾಯಿಸಿದರು ಎಂದು ಸಂತ್ರಸ್ತೆ ಹೇಳಿದ್ದಾರೆ. ಮದುವೆಯಾದ ನಂತರ ಆ ವ್ಯಕ್ತಿಯು, ನಾನು ನಿನ್ನನ್ನು 2 ಲಕ್ಷ ರೂ.ಗೆ ಖರೀದಿಸಿರುವುದಾಗಿ ಬಾಲಕಿಗೆ ತಿಳಿಸಿದ್ದಾನೆ'' ಎಂದು ಕನೀಜ್ ಫಾತಿಮಾ ಹೇಳಿದ್ದಾರೆ.

ಆಕಸ್ಮಿಕವಾಗಿ ಕ್ರಿಮಿನಾಶಕ ಸೇವಿಸಿ ಮದುವೆಯಾದ ನಾಲ್ಕು ತಿಂಗಳ ನಂತರ ಆ ವ್ಯಕ್ತಿ ಮೃತಪಟ್ಟಿದ್ದು, ಆತನ ಕುಟುಂಬಸ್ಥರು ಮದುವೆಯ ನೆಪದಲ್ಲಿ ಬಾಲಕಿಯನ್ನು ಕೋಟಾ ಜಿಲ್ಲೆಯ ಕನ್ವಾಸ್ ಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ತನ್ನ "ಎರಡನೇ ಪತಿ" ತನ್ನನ್ನು 3 ಲಕ್ಷಕ್ಕೆ ಖರೀದಿಸಿದ್ದಾನೆ. ದೈಹಿಕ ಶೋಷಣೆಯನ್ನು ಸಹಿಸಲಾಗದೇ ಬಾಲಕಿ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಆದರೆ, ಅದು ಸಾಧ್ಯವಾಗಲಿಲ್ಲ ಆದ್ದರಿಂದ ಅವಳು ತನ್ನ ಅತ್ತೆಯ ಮನೆಯಿಂದ ಓಡಿಹೋದಳು. ಅವಳು ಸ್ಥಳೀಯ ರೈಲು ನಿಲ್ದಾಣವನ್ನು ತಲುಪಿದಳು ಮತ್ತು ಕೋಟಾ ನಗರಕ್ಕೆ ರೈಲು ಹತ್ತಿದಳು.

ಅಪ್ರಾಪ್ತ ಬಾಲಕಿಯ ರಕ್ಷಣೆ: ಸೋಮವಾರ ಬೆಳಿಗ್ಗೆ ಕೋಟಾ ರೈಲು ನಿಲ್ದಾಣದಲ್ಲಿ ಕುಳಿತಿದ್ದ ಅಪ್ರಾಪ್ತ ಬಾಲಕಿಯನ್ನು ರೈಲ್ವೆ ಪೊಲೀಸ್ ಸಿಬ್ಬಂದಿ ಗಮನಿಸಿದರು. ಬಾಲಕಿಯ ಬಳಿಗೆ ಬಂದು ವಿಚಾರಿಸಿದರು. ಅವರು ಚೈಲ್ಡ್‌ ಹೆಲ್ಫ್​ಲೈನ್ ಮತ್ತು ಸಿಡಬ್ಲ್ಯೂಸಿಗೆ ಮಾಹಿತಿ ನೀಡಿದರು. ನಂತರ ಅಪ್ರಾಪ್ತ ಬಾಲಕಿ ತಮ್ಮ ಸಂಕಟವನ್ನು ನಮ್ಮ ಬಳಿ ಹೆಳಿಕೊಂಡಿದ್ದಾಳೆ ಎಂದು ಸಿಡಬ್ಲ್ಯುಸಿ ಅಧ್ಯಕ್ಷೆ ಫಾತಿಮಾ ಹೇಳಿದರು. ಬಾಲಕಿಯ ಪೋಷಕರನ್ನು ಸಂಪರ್ಕಿಸಲಾಗಿದ್ದು, ಬಾಲಕಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ದೂರು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ. ಪೋಷಕರು ಮತ್ತು ಸ್ಥಳೀಯ ಪೊಲೀಸರು ಬುಧವಾರ ಕೋಟಾ ತಲುಪಲಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಬಿಹಾರದಲ್ಲಿ ಬೆಂಕಿ ಅವಘಡ: ಒಂದೇ ಕುಟುಂಬದ ನಾಲ್ವರು ಬಾಲಕಿಯರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.