ಸೂರಜ್ಪುರ (ಛತ್ತೀಸ್ಗಢ): ಮಾವಿನ ಹಣ್ಣು ಕೊಡುವುದಾಗಿ ಆಮಿಷವೊಡ್ಡಿ 12 ವರ್ಷದ ಬಾಲಕನೊಬ್ಬ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಛತ್ತೀಸ್ಗಢದ ಸೂರಜ್ಪುರ ಜಿಲ್ಲೆಯಲ್ಲಿ ನಡೆದಿದೆ. ನೊಂದ ಬಾಲಕಿ ಅಳುತ್ತಾ ಮನೆಗೆ ಬಂದಿದ್ದು, ಈ ವೇಳೆ ಆಕೆಯ ಆರೋಗ್ಯ ಸರಿಯಿಲ್ಲ ಎಂದು ತಿಳಿದು ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯು ಮರದಿಂದ ಮಾವಿನ ಕಾಯಿ ಕೀಳಲು ಯತ್ನಿಸುತ್ತಿದ್ದಳು. ಈ ವೇಳೆ, 12 ವರ್ಷದ ಬಾಲಕ ಬಂದು ಆಕೆಗೆ ಮಾವು ಕೊಡುವುದಾಗಿ ಆಮಿಷವೊಡ್ಡಿ ತನ್ನೊಂದಿಗೆ ಮನೆಗೆ ಕರೆದುಕೊಂಡು ಹೋಗಿದ್ದ. ಮನೆಯ ಹಿಂದೆ ದನದ ಕೊಟ್ಟಿಗೆಯ ಸ್ಥಳಕ್ಕೆ ಕರೆದೊಯ್ದು ಆಕೆ ಮೇಲೆ ಬಲತ್ಕಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಸಂತ್ರಸ್ತ ಬಾಲಕಿಯ ಪೋಷಕರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇತ್ತ, ಚೈಲ್ಡ್ ಲೈನ್ ನೆರವಿನ ಆರೋಪಿ ಬಾಲಕನನ್ನು ವಿಚಾರಣೆಗೂ ಒಳಪಡಿಸಿದ್ದಾರೆ.
ಪೋರ್ನ್ ಸೈಟ್ಗಳ ಆತಂಕ: ಮೂರು ತಿಂಗಳ ಹಿಂದೆ ಅಂಬಿಕಾಪುರದ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿಯ ಘಟನೆ ಬೆಳಕಿಗೆ ಬಂದಿತ್ತು. ಬಾಲಕಿಯ ಮೇಲೆ ಆಕೆಯ ಕುಟುಂಬದ 6 ಜನ ಹುಡುಗರು ಅತ್ಯಾಚಾರ ಎಸಗಿದ್ದರು. ಎಲ್ಲ ಅಪ್ರಾಪ್ತ ಆರೋಪಿಗಳು 6 ರಿಂದ 13 ವರ್ಷ ವಯಸ್ಸಿನವರಾಗಿದ್ದರು. ಈ ಪ್ರಕರಣದ ತನಿಖೆಯ ವೇಳೆ ಮೊಬೈಲ್ನಲ್ಲಿ ಪೋರ್ನ್ ಸೈಟ್ಗಳನ್ನು ವೀಕ್ಷಿಸಿ ಈ ಬಾಲಕರು ಕೃತ್ಯ ಎಸಗಿದ್ದರು ಎಂಬ ಅಂಶ ಬಹಿರಂಗವಾಗಿತ್ತು.
ಸದ್ಯ ಈ ಪ್ರಕರಣದಲ್ಲೂ ಪೋರ್ನ್ ವಿಡಿಯೋಗಳನ್ನು ಬಾಲಕ ನೋಡುತ್ತಿದ್ದನೇ ಎಂಬ ಶಂಕೆ ಮೇಲೆಯೂ ಪೊಲೀಸರು ತನಿಖೆ ನಡೆಸುತ್ತಿದ್ದು, ಮೇಲ್ನೋಟಕ್ಕೆ ಇಂತಹ ಯಾವುದೇ ಅಂಶ ಕಂಡು ಬಂದಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: 40ರ ಮಹಿಳೆ ಜೊತೆ ರೂಂಗೆ ಹೋದ ವೃದ್ಧ; ಲೈಂಗಿಕ ಕ್ರಿಯೆಯಲ್ಲಿ ಹಾರಿಹೋಯ್ತು ಪ್ರಾಣ!