ETV Bharat / bharat

ನೀರು ಕುಡಿಯಲು ಹೋಗಿದ್ದೇ ತಪ್ಪಾಯ್ತು: ಅಪ್ರಾಪ್ತನ ಮೇಲೆ ಅಮಾನವೀಯ ಹಲ್ಲೆ ನಡೆಸಿದ ವ್ಯಕ್ತಿ!

author img

By

Published : Mar 13, 2021, 3:20 PM IST

ಆಟವಾಡುತ್ತಿದ್ದ ಬಾಲಕನೊಬ್ಬ ನೀರು ಕುಡಿಯಲು ಹೋಗಿದ್ದಾಗ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

Minor boy beaten up
Minor boy beaten up

ಗಾಜಿಯಾಬಾದ್​​: ಅಪ್ರಾಪ್ತನೊಬ್ಬ ನೀರು ಕುಡಿಯಲು ಹೋಗಿದ್ದರಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಇದೀಗ ಅದರ ವಿಡಿಯೋ ವೈರಲ್​ ಆಗಿದೆ.

ಅಪ್ರಾಪ್ತನ ಮೇಲೆ ಅಮಾನವೀಯ ರೀತಿ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಈ ಘಟನೆ ನಡೆದಿದ್ದು, ಬಾಲಕನೊಬ್ಬ ನೀರು ಕುಡಿಯಲು ಹೋಗಿದ್ದಾಗ ಆತನ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದಾನೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಆರೋಪಿಯ ಬಂಧನ ಮಾಡಲಾಗಿದೆ.

Minor boy beaten up
ಆರೋಪಿಯ ಬಂಧಿಸಿದ ಪೊಲೀಸರು

ಇದನ್ನೂ ಓದಿ: ಕೋವಿಡ್​ ಡ್ಯುಟಿ ವೇಳೆ ಲ್ಯಾಬ್​ ಟೆಕ್ನಿಷಿಯನ್​ ಸಾವು: ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಿದ ಕೇಜ್ರಿವಾಲ್​!

ನೀರು ಕುಡಿಯಲು ಬಾಲಕ ಬರುತ್ತಿದ್ದಂತೆ ಆತನ ಹೆಸರು ಕೇಳಿದ್ದಾನೆ. ಆತ ಹೆಸರು ಹೇಳುತ್ತಿದ್ದಂತೆ ಆನತ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಅನ್ಯ ಸಮುದಾಯದ ಯುವಕನೊಬ್ಬ ದೇವಸ್ಥಾನದ ಬಳಿ ಇರುವ ನೀರಿನ ತೊಟ್ಟೆಯಲ್ಲಿ ನೀರು ಕುಡಿಯಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.