ETV Bharat / bharat

ಸರ್ಕಾರಿ ಶಾಲೆಗಳಲ್ಲಿ ಇಂಟರ್​ನೆಟ್​​ ಸೌಲಭ್ಯ: ಯಾವ ರಾಜ್ಯದಲ್ಲಿ ಎಷ್ಟಿದೆ ಗೊತ್ತಾ? - ಕೇಂದ್ರ ಶಿಕ್ಷಣ ಸಚಿವಾಲಯದ ಅಂಕಿ-ಅಂಶ

ಸರ್ಕಾರಿ ಶಾಲೆಗಳಲ್ಲಿ ಇಂಟರ್​ನೆಟ್​ ಸೌಲಭ್ಯ ಬಗ್ಗೆ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಖಾತೆ ಸಚಿವೆ ಅನ್ನಪೂರ್ಣ ದೇವಿ ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಶನ್ (ಯುಡಿಎಸ್ಇ)ನ 2019-20ರ ವರದಿ ಪ್ರಕಾರ ಅಂಕಿ - ಅಂಶವನ್ನು ನೀಡಿದ್ದಾರೆ.

internet in schools
internet in schools
author img

By

Published : Mar 15, 2022, 9:58 AM IST

ನವದೆಹಲಿ: ಸರ್ಕಾರಿ ಶಾಲೆಗಳಲ್ಲಿ ಇಂಟರ್​​ನೆಟ್​ ಸೌಲಭ್ಯ ಕುರಿತಂತೆ ಕೇಂದ್ರ ಶಿಕ್ಷಣ ಸಚಿವಾಲಯವು ಅಂಕಿ - ಅಂಶಗಳನ್ನು ನೀಡಿದ್ದು, 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಶೇ.10ಕ್ಕಿಂತಲೂ ಕಡಿಮೆ ಶಾಲೆಗಳು ಇಂಟರ್​​ನೆಟ್​ ಸೌಕರ್ಯ ಹೊಂದಿವೆ. ಇದರಲ್ಲಿ ಕರ್ನಾಟಕ ರಾಜ್ಯವೂ ಒಂದಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಇಂಟರ್​​ನೆಟ್​ ವ್ಯವಸ್ಥೆ ಕುರಿತ ಲಿಖಿತ ಪ್ರಶ್ನೆಗೆ ಶಿಕ್ಷಣ ಇಲಾಖೆಯ ರಾಜ್ಯ ಖಾತೆ ಸಚಿವೆ ಅನ್ನಪೂರ್ಣ ದೇವಿ ಈ ಮಾಹಿತಿ ನೀಡಿದ್ದಾರೆ. ಚಂಡೀಗಢದಲ್ಲಿ ಶೇ.100ಕ್ಕೆ 100ರಷ್ಟು ಸರ್ಕಾರಿ ಶಾಲೆಗಳು ಇಂಟರ್​ನೆಟ್​ ವ್ಯವಸ್ಥೆ ಹೊಂದುವ ಮೂಲಕ ಅಗ್ರ ಸ್ಥಾನದಲ್ಲಿ ಇದೆ. ನಂತರ ಲಕ್ಷದ್ವೀಪ - ಶೇ.93.33, ದೆಹಲಿ-ಶೇ.88.18 ಮತ್ತು ಕೇರಳದಲ್ಲಿ ಶೇ.87.16ರಷ್ಟು ಸರ್ಕಾರಿ ಶಾಲೆಗಳು ಅಂತರ್ಜಾಲ ಸೌಕರ್ಯ ಪಡೆದಿದೆ.

ಆದರೆ, ಬಹುಪಾಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಶೇ.10ಕ್ಕಿಂತಲೂ ಕಡಿಮೆ ಶಾಲೆಗಳು ಇಂಟರ್​​ನೆಟ್​ ವ್ಯವಸ್ಥೆ ಹೊಂದಿವೆ. ಕರ್ನಾಟಕದಲ್ಲಿ ಶೇ.7.75ರಷ್ಟು ಸರ್ಕಾರಿ ಶಾಲೆಗಳಲ್ಲಿ ಇಂಟರ್​​ನೆಟ್​ ಸೌಕರ್ಯ ಇದೆ. ಆಂಧ್ರಪ್ರದೇಶ-ಶೇ.9.10, ಅರುಣಾಚಲ ಪ್ರದೇಶ-ಶೇ.3.44, ಅಸ್ಸೋಂ - 4.32, ಬಿಹಾರ-ಶೇ. 2.05, ಛತ್ತೀಸ್​ಗಢ​​-ಶೇ.3.35, ಗೋವಾ-ಶೇ.8.46, ಜಮ್ಮು-ಕಾಶ್ಮೀರ-ಶೇ.7.75, ಲಡಾಖ್​-ಶೇ.1.86, ಮಧ್ಯಪ್ರದೇಶದಲ್ಲಿ ಕೇವಲ ಶೇ.3.44ರಷ್ಟು ಮಾತ್ರ ಸರ್ಕಾರಿ ಶಾಲೆಗಳಲ್ಲಿ ಇಂಟರ್​ನೆಟ್​ ಇದೆ.

ಅದೇ ರೀತಿಯಾಗಿ ಮಣಿಪುರ - ಶೇ.2.36, ಮೇಘಾಲಯ-ಶೇ.1,27, ಮಿಜೋರಾಂ-ಶೇ.2.35, ನಾಗಾಲ್ಯಾಂಡ್​-ಶೇ.3.03, ಒಡಿಶಾ-ಶೇ.2.72, ತೆಲಂಗಾಣ-ಶೇ.8.03, ತ್ರಿಪುರ-ಶೇ.1.61, ಉತ್ತರ ಪ್ರದೇಶ-2.94, ಉತ್ತರಾಖಂಡ್​​-6.40 ಹಾಗೂ ಪಶ್ಚಿಮ ಬಂಗಾಳದಲ್ಲಿ 9.65ರಷ್ಟು ಸರ್ಕಾರಿ ಶಾಲೆಗಳು ಶಾಲೆಗಳು ಅಂತರ್ಜಾಲ ಸೌಲಭ್ಯ ಹೊಂದಿವೆ. ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಷನ್ (ಯುಡಿಎಸ್ಇ)ನ 2019-20ರ ವರದಿ ಪ್ರಕಾರ ಈ ಅಂಕಿ - ಅಂಶವನ್ನು ನೀಡಲಾಗಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಹಿಜಾಬ್​ ವಿವಾದದ ಬಗ್ಗೆ ಇಂದು ಮಹತ್ವದ ತೀರ್ಪು ಪ್ರಕಟಿಸಲಿರುವ ರಾಜ್ಯದ ಹೈಕೋರ್ಟ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.