ETV Bharat / bharat

25 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಯಿತು ಸ್ಕೈವಾಕರ್: ಇದು ಯಾವೆಲ್ಲ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ ಗೊತ್ತಾ? - ಹೈದರಾಬಾದ್​ ಸ್ಕೈವಾಕರ್​

ಉಪ್ಪಲ್ ಜಂಕ್ಷನ್​ನಲ್ಲಿ ಪಾದಚಾರಿಗಳಿಗಾಗಿ ಸ್ಕೈವಾಕರ್​ ನಿರ್ಮಾಣ ಮಾಡಲಾಗಿದ್ದು, ಸಚಿವ ಕೆಟಿಆರ್​ ಉದ್ಘಾಟಿಸಲಿದ್ದಾರೆ.

ಸ್ಕೈವಾಕರ್
ಸ್ಕೈವಾಕರ್
author img

By

Published : Jun 26, 2023, 8:56 AM IST

Updated : Jun 26, 2023, 1:02 PM IST

ಉಪ್ಪಲ್​ ಜಂಕ್ಷನ್​ ಸ್ಕೈವಾಕರ್​

ಹೈದರಾಬಾದ್​: ಹೈದರಾಬಾದ್​ ನಗರದ ಜನದಟ್ಟಣೆಯ ಪ್ರಮುಖ ಪ್ರದೇಶಗಳಲ್ಲಿ ಪಾದಚಾರಿಗಳಿಗಾಗಿ ಸ್ಕೈವಾಕರ್​ಗಳನ್ನು ತೆಲಂಗಾಣ ಸರ್ಕಾರ ನಿರ್ಮಿಸುತ್ತಿದೆ. ಇದರ ಭಾಗವಾಗಿ ಉಪ್ಪಲ್ ಜಂಕ್ಷನ್​ನಲ್ಲಿ ಸ್ಕೈವಾಕರ್​ ನಿರ್ಮಾಣ ಗೊಂಡಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಐಟಿ ಮತ್ತು ಪೌರಾಡಳಿತ ಸಚಿವ ಕೆ.ಟಿ.ರಾಮರಾವ್​ ​ಉದ್ಘಾಟನೆ ಮಾಡಲಿದ್ದಾರೆ.

ಜನ ದಟ್ಟಣೆ ಪ್ರದೇಶವಾದ ಉಪ್ಪಲ್​ ನಗರದಲ್ಲಿ ವಾಹನಗಳ ದಟ್ಟಣೆಯೂ ಹೆಚ್ಚಾಗಿದ್ದು, ಇದರಿಂದ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡಬೇಕಾಗುತ್ತಿತ್ತು. ಇದೀಗ ಈ ಸ್ಕೈವಾಕರ್​ ನಿರ್ಮಾಣಗೊಂಡಿದ್ದರಿಂದ ಪಾದಚಾರಿಗಳು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಸುಲಭವಾಗಿ ಹೋಗಬಹುದಾಗಿದೆ.

660 ಮೀಟರ್ ಉದ್ದದ ಉಪ್ಪಲ್ ಸ್ಕೈವಾಕ್ ನಿರ್ಮಾಣಕ್ಕೆ ರೂ.25 ಕೋಟಿ ವೆಚ್ಚ ತಗುಲಿದೆ. ಈ ಪಾದಚಾರಿ ಸೇತುವೆ ಉಪ್ಪಲ್, ಸಿಕಂದರಾಬಾದ್, ಎಲ್​ಬಿ ನಗರ, ರಾಮಂತಪುರ ಮತ್ತು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಿದೆ. ನಾಲ್ಕು ಸ್ಥಳಗಳಿಂದ ನೇರವಾಗಿ ಮೆಟ್ರೊ ನಿಲ್ದಾಣ ತಲುಪಬಹುದಾಗಿದೆ.

​ಮೆಟ್ಟಿಲುಗಳ ಹತ್ತಲು ಸಾಧ್ಯವಾಗದ ವೃದ್ಧರು, ಗರ್ಭಿಣಿಯರು ಸ್ಕೈವಾಕ್‌ಗೆ ತೆರಳಲು ಅತ್ಯಾಧುನಿಕ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಉಪ್ಪಲ್​ ಸ್ಕೈವಾಕ್‌ 660 ಮೀಟರ್ ಉದ್ದ, 4 ಮೀಟರ್ ಅಗಲ ಇದೆ. ಇದರಲ್ಲಿ 8 ಲಿಫ್ಟ್‌ಗಳು, 12 ಎಸ್ಕಲೇಟರ್‌ಗಳು, 4 ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ. ರಾಮಂತಪುರ ರಸ್ತೆ, ನಾಗೋಲು ರಸ್ತೆ, ಜಿಎಚ್‌ಎಂಸಿ ಥೀಮ್ ಪಾರ್ಕ್, ವರಂಗಲ್ ಬಸ್ ನಿಲ್ದಾಣ, ಉಪ್ಪಲ್ ಪೊಲೀಸ್ ಠಾಣೆ, ಎಂಎಂಎಆರ್‌ಒ ಕಚೇರಿ, ಉಪ್ಪಲ್ ಉಪ ನಿಲ್ದಾಣ, ಉಪ್ಪಲ್ ಜಂಕ್ಷನ್​ಗಳಲ್ಲೂ ಸ್ಕೈವಾಕರ್​ ಪ್ರವೇಶ ನಿರ್ಗಮನ ಇರಲಿದೆ. ಪಾದಚಾರಿ ಸೇತುವೆ ಸುಂದರವಾಗಿ ಕಾಣಲೆಂದು ಶೇ.40ರಷ್ಟು ಮೇಲ್ಛಾವಣಿ ಮಾತ್ರ ನಿರ್ಮಿಸಲಾಗಿದೆ.

ಉಪ್ಪಲ್​ ಮೆಟ್ರೋ ರೈಲು ನಿಲ್ದಾಣದ ಮೂಲಕ ಪ್ರತಿದಿನ ಸುಮಾರು 25 ರಿಂದ 30 ಸಾವಿರ ಜನ ಪ್ರಯಾಣಿಸುತ್ತಾರೆ. ಈ ಪಾದಚಾರಿ ಸೇತುವೆಯಿಂದ ಉಪ್ಪಲ್​ ಜಂಕ್ಷನ್ ಪ್ರದೇಶದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದ್ದು, ವಾಹನಗಳ ಓಡಾಟ ಸುಗಮವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಗ್ರೀನ್ ಆಪಲ್ ಪ್ರಶಸ್ತಿ: ಕೆಲ ದಿನಗಳ ಹಿಂದಷ್ಟೆ ತೆಲಂಗಾಣದಲ್ಲಿ ರಾಜ್ಯ ಸರ್ಕಾರವು ನಿರ್ಮಿಸಿದ 4 ಕಟ್ಟಡ ಮತ್ತು ಒಂದು ಸೇತುವೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭೀಸಿತ್ತು. ಇವುಗಳು ಇಂಟರ್ನ್ಯಾಷನಲ್ ಬ್ಯೂಟಿಫುಲ್ ಬಿಲ್ಡಿಂಗ್ಸ್ ಗ್ರೀನ್ ಆಪಲ್ ಪ್ರಶಸ್ತಿಗಳನ್ನು ಪಡೆದಿವೆ. ಲಂಡನ್ ಮೂಲದ ಗ್ರೀನ್ ಆರ್ಗನೈಸೇಶನ್ ಪ್ರಶಸ್ತಿಗಳನ್ನು ಪ್ರಕಟಿಸಿತ್ತು. ಅದರಲ್ಲಿ ದುರ್ಗಂ ಚೆರುವು ಕೇಬಲ್ ಸೇತುವೆ, ಬಿ.ಆರ್.ಅಂಬೇಡ್ಕರ್ ಸಚಿವಾಲಯ, ಪೊಲೀಸ್ ಕಮಾಂಡ್ ಕಂಟ್ರೋಲ್ ಸೆಂಟರ್, ಯಾದಾದ್ರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಮತ್ತು ಮೊಜಂಜಾಹಿ ಮಾರುಕಟ್ಟೆಗೆ ಗ್ರೀನ್ ಆಪಲ್ ಪ್ರಶಸ್ತಿಗಳು ಲಭಿಸಿವೆ.

ಇದನ್ನೂ ಓದಿ: ಹೊಸ ಸಂಸತ್‌ ಭವನ ಹೇಗಿದೆ ಗೊತ್ತಾ? ವಿಡಿಯೋ ನೋಡಿ

Last Updated : Jun 26, 2023, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.