ವಾರಂಗಲ್ (ತೆಲಂಗಾಣ): ಜ್ಞಾನ ದೀವಿಗೆಯಾಗಿರುವ ಗ್ರಂಥಾಲಯಕ್ಕೆ ಹೆಚ್ಚೆಚ್ಚು ಜನರು ಆಗಮನಿಸಲು ತೆಲಂಗಾಣದ ಗ್ರೇಟರ್ ವಾರಂಗಲ್ ಮಹಾನಗರ ಪಾಲಿಕೆಯು ಹೊಸ ಪ್ರಯತ್ನವೊಂದನ್ನು ಮಾಡಿದೆ.
ನವ ರೂಪ ಪಡೆದ ಗ್ರಂಥಾಲಯವನ್ನ ನೋಡಿ ತೆಲಂಗಾಣ ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮ ರಾವ್ ಫಿದಾ ಆಗಿದ್ದಾರೆ.
ವಾರಂಗಲ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಾದೇಶಿಕ ಗ್ರಂಥಾಲಯವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆಲ ವರ್ಷಗಳಿಂದ ಓದುಗರಿಲ್ಲದೆ, ಸರಿಯಾದ ವ್ಯವಸ್ಥೆಯಿಲ್ಲದೆ ಪಾಳು ಬಿದ್ದಂತಾಗಿತ್ತು. 'ಸ್ಮಾರ್ಟ್ ಸಿಟಿ ಮಿಷನ್' ಅಡಿಯಲ್ಲಿ ಪಾಲಿಕೆಯು 2.90 ಕೋಟಿ ರೂ. ವೆಚ್ಚದಲ್ಲಿ ಗ್ರಂಥಾಲಯವನ್ನು ಪುನರ್ ನಿರ್ಮಿಸಲಾಗಿದೆ.
ಲೈಬ್ರರಿಯ ಗೋಡೆಗಳನ್ನು ಪುಸ್ತಕದ ಕಪಾಟಿನಿಂದ ಅಲಂಕರಿಸಲಾಗಿದೆ. ಕಟ್ಟಡದ ಮುಂಭಾಗ ಹಾಗೂ ಒಳಗಡೆ ಅದ್ಭುತ ಚಿತ್ರಗಳನ್ನು ಪೇಂಟ್ ಮಾಡಲಾಗಿದೆ. ಬಾಲಕಿಯೊಬ್ಬಳು ಪುಸ್ತಕವನ್ನು ಓದುತ್ತಿರುವ ಚಿತ್ರಕಲೆಯು ಎಲ್ಲರ ಗಮನ ಸೆಳೆದಿದೆ. ಗ್ರಂಥಾಲಯದ ಒಳಗಡೆಯೂ ಓದುಗರಿಗೆ ಸಕಲ ವ್ಯವಸ್ಥೆ ಮಾಡಲಾಗಿದ್ದು, 500 ಜನರು ಕುಳಿತು ಓದಲು ಆಸನದ ವ್ಯವಸ್ಥೆ ಮಾಡಲಾಗಿದೆ.
-
Loved the revamped look of the regional library of Warangal 👇
— KTR (@KTRTRS) June 9, 2021 " class="align-text-top noRightClick twitterSection" data="
My compliments to @MC_GWMC and team on a great job 👏 pic.twitter.com/AN2zG3FJsu
">Loved the revamped look of the regional library of Warangal 👇
— KTR (@KTRTRS) June 9, 2021
My compliments to @MC_GWMC and team on a great job 👏 pic.twitter.com/AN2zG3FJsuLoved the revamped look of the regional library of Warangal 👇
— KTR (@KTRTRS) June 9, 2021
My compliments to @MC_GWMC and team on a great job 👏 pic.twitter.com/AN2zG3FJsu
ಈ ಲೈಬ್ರರಿ ಮರುವಿನ್ಯಾಸದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಚಿವ ಕೆಟಿಆರ್, ಟ್ವೀಟ್ ಮಾಡಿ ವಾರಂಗಲ್ ಮಹಾನಗರ ಪಾಲಿಕೆ ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.