ETV Bharat / bharat

ಗುಜರಾತ್ ಚುನಾವಣೆ: ಮೊದಲ ಬಾರಿಗೆ ಮತ ಚಲಾಯಿಸಿದ ಸಿದ್ಧಿ ಬುಡಕಟ್ಟು ಸಮುದಾಯ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಂಬೂರ್ ಗ್ರಾಮದ ನಿವಾಸಿಗಳು ಮೊದಲ ಬಾರಿಗೆ ಮತದಾನ ಮಾಡಿದ್ದಾರೆ.

mini-african-village-will-vote-in-its-special-tribal-booth-for-the-first-time
ಗುಜರಾತ್ ಚುನಾವಣೆ: ಮೊದಲ ಬಾರಿಗೆ ಮತ ಚಲಾಯಿಸಿದ ಸಿದ್ಧಿ ಬುಡಕಟ್ಟು ಸಮುದಾಯ
author img

By

Published : Dec 1, 2022, 4:06 PM IST

Updated : Dec 1, 2022, 5:00 PM IST

ಜಂಬೂರ್​(ಗುಜರಾತ್): ಮಿನಿ ಆಫ್ರಿಕಾ ಎಂದೇ ಕರೆಯಲ್ಪಡುವ ಜಂಬೂರ್​​ ಗ್ರಾಮದ ನಿವಾಸಿಗಳು ಮೊದಲ ಬಾರಿಗೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಇದಕ್ಕಾಗಿ ಜಂಬೂರ್​ ನಿವಾಸಿಗಳು ಮತದಾನ ಪ್ರಕ್ರಿಯೆಯ ಭಾಗವಾಗಲು ಅವಕಾಶ ನೀಡಿದ್ದಕ್ಕೆ ಭಾರತೀಯ ಚುನಾವಣಾ ಆಯೋಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಗುಜರಾತ್ ಚುನಾವಣೆ: ಮೊದಲ ಬಾರಿಗೆ ಮತ ಚಲಾಯಿಸಿದ ಸಿದ್ಧಿ ಬುಡಕಟ್ಟು ಸಮುದಾಯ

ಜಂಬೂರ್​ ನಿವಾಸಿಗಳು ಮೂಲತಃ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದವರು. ಸಿದ್ಧಿ ಬುಡಕಟ್ಟು ಸಮುದಾಯ ಎಂದೇ ಗುರುತಿಸಿಕೊಂಡ ಇವರಿಗೆ ಇಲ್ಲಿಯವರೆಗೂ ಯಾವುದೇ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. ಇದು ಆ ಸಮುದಾಯದಲ್ಲಿ ಭಾರಿ ಸಂತಸ ತಂದಿದೆ.

ಇದನ್ನೂ ಓದಿ: ಗುಜರಾತ್ ವಿಧಾನಸಭಾ ಚುನಾವಣೆ: ಈವರೆಗೆ ಶೇ 19.13 ರಷ್ಟು ಮತದಾನ

Last Updated : Dec 1, 2022, 5:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.