ETV Bharat / bharat

ಗುಜರಾತ್​ ಚುನಾವಣಾ ಕಣ: ಬಿಜೆಪಿಯ 60, ಕಾಂಗ್ರೆಸ್​ನ 35 ಅಭ್ಯರ್ಥಿಗಳು ಕೋಟ್ಯಧಿಪತಿಗಳು - ಕಾಂಗ್ರೆಸ್​ನ ಕೋಟ್ಯಾಧೀಶ ಅಭ್ಯರ್ಥಿಗಳು

ಗುಜರಾತ್​ ಚುನಾವಣಾ ಕಣದಲ್ಲಿ ಕೋಟ್ಯಧಿಪತಿ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಅತಿ ಹೆಚ್ಚು ಶ್ರೀಮಂತರು ಬಿಜೆಪಿಯ ಅಭ್ಯರ್ಥಿಗಳೇ ಆಗಿದ್ದಾರೆ.

millionaires-candidates-over-60-from-bjp-and-35-from-congress
ಗುಜರಾತ್​ ಚುನಾವಣಾ ಕಣ: ಬಿಜೆಪಿಯ 60, ಕಾಂಗ್ರೆಸ್​ನ 35 ಅಭ್ಯರ್ಥಿಗಳು ಕೋಟ್ಯಾಧಿಪತಿಗಳು
author img

By

Published : Nov 19, 2022, 8:11 PM IST

ಅಹಮದಾಬಾದ್ (ಗುಜರಾತ್): ಗುಜರಾತ್ ವಿಧಾನಸಭೆ ಚುನಾವಣೆಗೆ ಇನ್ನೂ ದಿನಗಳು ಬಾಕಿ ಇವೆ. ಮೊದಲ ಹಂತದ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಅವಧಿ ಮುಗಿದಿದೆ. ಕೋಟ್ಯಧಿಪತಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಕೋಟ್ಯಧಿಪತಿಗಳಲ್ಲಿ 60 ಜನ ಬಿಜೆಪಿ ಅಭ್ಯರ್ಥಿಗಳು, ಕಾಂಗ್ರೆಸ್‌ನ 35ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಗೂ ಆಮ್ ಆದ್ಮಿ ಪಕ್ಷದ ಏಳು ಅಭ್ಯರ್ಥಿಗಳು ಇದ್ದಾರೆ. ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಮಾಹಿತಿಯನ್ನು ಬಹಿರಂಗ ಪಡಿಸಲಾಗಿದೆ.

ಕಾಂಗ್ರೆಸ್​ನ ಇಂದ್ರನೀಲ್ ರಾಜುಗುರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು, ಇವರು 159.84 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ದ್ವಾರಕಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಬುಭಾ ಮಾಣೆಕ್ ಎರಡನೇ ಶ್ರೀಮಂತ ಅಭ್ಯರ್ಥಿಯಾಗಿದ್ದು, 115.58 ಕೋಟಿ ಆಸ್ತಿಯನ್ನು ಘೋಷಿಸಿದ್ದಾರೆ.

ಅಲ್ಲದೇ, ಬಿಜೆಪಿಯ ಏಳು ಅಭ್ಯರ್ಥಿಗಳು 30 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಅತ್ಯಂತ ಕಿರಿಯ ಗೃಹ ಸಚಿವ ಖ್ಯಾತಿಯ ಹರ್ಷ ಸಾಂಘ್ವಿ ಸಂಪತ್ತಿನಲ್ಲಿ 17 ಪಟ್ಟು ಏರಿಕೆಯಾಗಿದೆ. 2017ರಲ್ಲಿ 1.77 ಕೋಟಿ ಆಸ್ತಿಯನ್ನು ಹರ್ಷ ಸಾಂಘ್ವಿ ಘೋಷಿಸಿದ್ದರು. ಈಗ ಪ್ರಸಕ್ತ ವರ್ಷ 17.14 ಕೋಟಿಗೆ ಅವರ ಆಸ್ತಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಬಿಜೆಪಿಯ ಕೋಟ್ಯಧಿಪತಿ ಅಭ್ಯರ್ಥಿಗಳು: ಬಿಜೆಪಿಯ ಅಭ್ಯರ್ಥಿ ಪಬುಭಾ ಮಾಣೆಕ್ 115.58 ಕೋಟಿ ರೂಪಾಯಿ ಹೊಂದಿದ್ದರೆ, ಅಮ್ರೇಲಿಯ ಹೀರಾ ಸೋಲಂಕಿ 53.50 ಕೋಟಿ ರೂ. ಹೊಂದುವ ಮೂಲಕ ಎರಡನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಉಳಿದಂತೆ ಪರಶೋತ್ತಮ ಸೋಲಂಕಿ (53.39 ಕೋಟಿ), ಕಾಂತಿ ಬಾಲಾರ್ (52.14 ಕೋಟಿ), ರಿವಾಬಾ ಜಡೇಜಾ ( 35.62 ಕೋಟಿ), ಜಯೇಶ್ ರಾಡಾಡಿಯಾ (33.10 ಕೋಟಿ), ಪ್ರಫುಲ್ ಪನ್ಸೇರಿಯಾ (32.05 ಕೋಟಿ), ಅರುಣ್ ಸಿಂಗ್ ರಾಣಾ 26.81 ಕೋಟಿ ರೂ. ಆಸ್ತಿಯನ್ನು ಪ್ರಕಟಿಸಿದ್ದಾರೆ.

ಅಲ್ಲದೇ, ಬಾಬು ಬೊಖಾರಿಯಾ (21 ಕೋಟಿ), ರಮೇಶ್ ಮಿಸ್ತ್ರಿ (18.16 ಕೋಟಿ), ಹರ್ಷ ಸಾಂಘ್ವಿ (17.14 ಕೋಟಿ), ಪ್ರಕಾಶ್ ವರ್ಮೊರ (16.96 ಕೋಟಿ), ಉದಯ್ ಕಾಂಗಡ (13.08 ಕೋಟಿ), ಭಗವಾಂಜಿ ಬರಾದ್ (12.47 ಕೋಟಿ), ಕಾಂತಿಲಾಲ್ ಅಮೃತಿ (12.11 ಕೋಟಿ), ಜವಾಹರ್ ಚಾವ್ಡಾ (11.98 ಕೋಟಿ) ಹಾಗೂ ಹರ್ಷದ್ ರಿಬಾಡಿಯಾ 10.81 ಕೋಟಿ ಆಸ್ತಿಯನ್ನು ಘೋಷಿಸಿದ್ದಾರೆ.

ಕಾಂಗ್ರೆಸ್​ನ ಕೋಟ್ಯಧೀಶ ಅಭ್ಯರ್ಥಿಗಳು: ಕಾಂಗ್ರೆಸ್​ ಅಭ್ಯರ್ಥಿಯಾದ ಇಂದ್ರನೀಲ್ ರಾಜ್ಯುಗುರು (159.84 ಕೋಟಿ), ರಾಪರ್ತಿ ಭಚುಭಾಯಿ ಆರತಿ (98.48 ಕೋಟಿ), ಮುಲೋಭಾ ಕಂಡೋರಿಯಾ (85.41 ಕೋಟಿ), ಪ್ರತಾಪ್ ದುದತ್ (18.93 ಕೋಟಿ), ವೀರ್ಜಿ ತುಮ್ಮರ್ (11.37 ಕೋಟಿ), ಅಂಬರೀಶ್ ದೇರ್ (11.16 ಕೋಟಿ), ನೌಷಾದ್ ಸೌಲಂಕಿ (10.84 ಕೋಟಿ) ಲಲಿತ ಕಾಗಠಾರ 8.57 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಆಮ್ ಆದ್ಮಿ ಪಕ್ಷದ ಕೋಟ್ಯಧಿಪತಿ ಅಭ್ಯರ್ಥಿಗಳು: ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಕೂಡ ಕೋಟ್ಯಧಿಪತಿಗಳಾಗಿದ್ದಾರೆ. ಪ್ರಕಾಶ್ (13.21 ಕೋಟಿ), ಜಿನಾಭಾಯಿ ಖೇಣಿ (8.90 ಕೋಟಿ), ರಾಮ್ ಧದುಕ್ (1.01 ಕೋಟಿ). ಮನೋಜ್ ಸೊರ್ತಿಯಾ (1.86 ಕೋಟಿ), ಲಭುಬೆನ್ ಚೌಹಾಣ್ (1.80 ಕೋಟಿ). ಹಮೀರ್ ರಾಥೋಡ್ (2.20 ಕೋಟಿ) ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಇಶುದನ್ ಗಧ್ವಿ ಕೂಡ ರೂ. 1.10 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಗುಜರಾತ್ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ: ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.