ETV Bharat / bharat

Millets Pizza: ನೀವು ಪಿಜ್ಜಾ ಪ್ರಿಯರೇ? ಆರೋಗ್ಯಕರ ಸಿರಿಧಾನ್ಯ ಪಿಜ್ಜಾ ಗೊತ್ತೇ? ಇಲ್ಲಿದೆ ನೋಡಿ

ಬಟಿಂಡಾದಲ್ಲಿ ಮಿಲೆಟ್ಸ್​ ಮ್ಯಾನ್ ಎಂದೇ ಕರೆಯಲ್ಪಡುವ ರಾಕೇಶ್ ನರುಲಾ ಅವರು ಸಿರಿಧಾನ್ಯಗಳಿಂದ ಪಿಜ್ಜಾ ತಯಾರಿಸಿದ್ದಾರೆ.

Healthy Millets Pizza
ಆರೋಗ್ಯಕರ ಸಿರಿಧಾನ್ಯ ಪಿಜ್ಜಾ
author img

By

Published : Jun 26, 2023, 5:44 PM IST

Updated : Jun 26, 2023, 7:45 PM IST

ಆರೋಗ್ಯಕರ ಸಿರಿಧಾನ್ಯ ಪಿಜ್ಜಾ

ಬಟಿಂಡಾ (ಪಂಜಾಬ್​): ಇಂದಿನ ಆಧುನಿಕ ಹಾಗೂ ವೇಗದ ಜೀವನದಲ್ಲಿ ಯಾವುದಕ್ಕೂ ಪುರುಸೊತ್ತೇ ಇಲ್ಲದಂತಾಗಿದೆ. ಹೊಸ ಜಮಾನದವರಿಗೆ ಎಲ್ಲವೂ ಫಾಸ್ಟ್​ ಆ್ಯಂಡ್​ ಕ್ವಿಕ್​ ಆಗಿ ಅಂಗೈಯ್ಯಲ್ಲಿರಬೇಕು. ಹಾಗೆಯೇ ಆಹಾರವೂ ಕೂಡ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಆಹಾರವನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಾರೆ. ಆದರೆ ಕಡಿಮೆ ಸಮಯದಲ್ಲಿ ತಯಾರಿಸುವ ಆಹಾರ ಪದಾರ್ಥಗಳು ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಅಪಾಯಕಾರಿ ಎನ್ನುವ ಅರಿವು ಎಲ್ಲರಿಗೂ ಇಲ್ಲ.

ಇಂದಿನ ನಮ್ಮ ಆಹಾರ ಪದ್ಧತಿ ಬದಲಾಗಿದೆ. ತಿಂಗಳಿಗೊಂದು ಬಾರಿಯೋ ಅಥವಾ ವೀಕೆಂಡ್‌ನಲ್ಲಿ ಹೊರಗಡೆ ತಿನ್ನುವ ಅಭ್ಯಾಸವಿದ್ದ ಕಾಲ ಮುಗಿದು, ವಾರದ ಪ್ರತಿ ದಿನವೂ ಹೊರಗಡೆ ತಿನ್ನುವ ಕಾಲಘಟಕ್ಕೆ ಬಂದು ತಲುಪಿದ್ದೇವೆ. ಅದರಲ್ಲೂ ಹೊರಗಿನ ತಿಂಡಿ ಎಂದರೆ ಪಿಜ್ಜಾ, ಬರ್ಗರ್ ಎಂಬ​ ಕಾಲ ಬಂದಿದೆ. ಹಾಗಾಗಿ ಈಗ ಹೊರಗಡೆ ತಿನ್ನುವ ಪಿಜ್ಜಾ, ಬರ್ಗರ್​ನಲ್ಲೇ ಆರೋಗ್ಯವನ್ನು ತುಂಬಿ ಕೊಡುವ ಕೆಲಸ ಮಾಡುತ್ತಿದ್ದಾರೆ ಪಂಜಾಬ್​ನ ಬಟಿಂಡಾದ ವ್ಯಕ್ತಿ ರಾಕೇಶ್​ ನರುಲಾ.

ಬಟಿಂಡಾದಲ್ಲಿ ಮಿಲೆಟ್ಸ್​ ಮ್ಯಾನ್ ಎಂದೇ ಕರೆಯಲ್ಪಡುವ ರಾಕೇಶ್ ನರುಲಾ ಅವರು ಒರಟು ಧಾನ್ಯಗಳಿಂದ ತ್ವರಿತ ಆಹಾರವನ್ನು ತಯಾರಿಸುವ ವಿಶೇಷ ಯೋಜನೆ ಕೈಗೊಂಡಿದ್ದಾರೆ. ಇವರ ವಿನೂತನ ಪ್ರಯತ್ನದಿಂದಾಗಿ ಜನರು ಫಾಸ್ಟ್​ಫುಡ್‌ ಸೇವನೆಯಿಂದ ದೇಹಕ್ಕೆ ಸೇರುವ ಕೊಬ್ಬು ತೊಡೆದುಹಾಕಿ, ರೋಗಗಳಿಂದ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಬಟಿಂಡಾದ ಮಹೇಶ್ವರಿ ಚೌಕ್​ ಬಳಿಯ ರೆಸ್ಟೋರೆಂಟ್‌ವೊಂದರ ಮಾಲೀಕ ಜಸ್ದೀಪ್ ಸಿಂಗ್ ಗ್ರೆವಾಲ್ ಅವರನ್ನು ಸಂಪರ್ಕಿಸಿದ ರಾಕೇಶ್​ ನರುಲಾ ಸಿರಿಧಾನ್ಯಗಳಿಂದ ಪಿಜ್ಜಾ ಬೇಸ್​ ತಯಾರಿಸಲು ಪ್ರಾರಂಭಿಸಿದ್ದು, ಅವರ ಈ ಪ್ರಯತ್ನ ಯಶಸ್ವಿಯಾಗಿದ್ದು, ಪಿಜ್ಜಾಪ್ರಿಯರಿಂದ ಹೆಚ್ಚು ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಕೊಬ್ಬು ಆರೋಗ್ಯಕ್ಕೆ ಹಾನಿಕಾರಕ: ರಾಕೇಶ್ ನರುಲಾ ಮಾತನಾಡಿ, "ಫಾಸ್ಟ್​ಫುಡ್​ನಲ್ಲಿ ಹೆಚ್ಚಿನ ಕೊಬ್ಬು, ಮೈದಾ ಹಿಟ್ಟು ಬಳಸುವುದರಿಂದ ಮನುಷ್ಯನ ಆರೋಗ್ಯಕ್ಕೆ ನಾನಾ ರೋಗಗಳಿಗೆ ಆಹ್ವಾನ ನೀಡುತ್ತದೆ. ಮೈದಾ ಹಿಟ್ಟು, ಕೊಬ್ಬು ಬಳಸದೆ ಫಾಸ್ಟ್​ ಫುಡ್​ ತಯಾರಿಸಬೇಕು. ಅದು ಜನರ ಆರೋಗ್ಯ ಕಾಪಾಡುವುದರೊಂದಿಗೆ ಆರೋಗ್ಯ ವೃದ್ಧಿಗೂ ಕಾರಣವಾಗಬೇಕು ಎನ್ನುವ ನಿಟ್ಟಿನಲ್ಲಿ ಮಿಲೆಟ್ಸ್​ ಪಿಜ್ಜಾ ತಯಾರಿಸುವ ಯೋಚನೆ ಮಾಡಿದೆ. ನನ್ನ ಯೋಚನೆಗೆ ಸಾಥ್​ ನೀಡಿದವರು ರೆಸ್ಟೋರೆಂಟ್​ ಮಾಲೀಕ ಜಸ್ದೀಪ್​ ಸಿಂಗ್​. ಮಿಲೆಟ್ಸ್​ನಿಂದ ತಯಾರಿಸಿದ ಪಿಜ್ಜಾವನ್ನು ಜನರು ಇಷ್ಟಪಟ್ಟಿದ್ದಾರೆ" ಎಂದರು.

ರೆಸ್ಟೋರೆಂಟ್ ನಡೆಸುತ್ತಿರುವ ಜಸ್ದೀಪ್ ಸಿಂಗ್ ಮಾತನಾಡಿ, "ನಾನು ಈ ರೆಸ್ಟೊರೆಂಟ್ ತೆರೆದಾಗ ಜನರಿಗೆ ಉತ್ತಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು ಎಂದು ಭಾವಿಸಿದ್ದೆವು. ಆದರೆ ಮಾರುಕಟ್ಟೆಯಲ್ಲಿ ಪಿಜ್ಜಾಗಳಿಗೆ ಮೈದಾ ಹಿಟ್ಟಿನಿಂದ ತಯಾರಿಸಿದ ಬೇಸ್ ರೆಡಿಮೇಡ್ ಮಾತ್ರ ಸಿಗುತ್ತಿತ್ತು. ಆದರೆ ನಮ್ಮಲ್ಲಿಗೆ ಬಂದ ರಾಕೇಶ್​ ನರುಲಾ ಅವರು ಈಗ ಮೈದಾ ಹಿಟ್ಟಿಗೆ ಬದಲಿಯಾಗಿ ಸಿರಿಧಾನ್ಯಗಳಿಂದ ಪಿಜ್ಜಾ ಬೇಸ್​ ಮಾಡುವುದನ್ನು ಕಂಡುಹಿಡಿದಿದ್ದಾರೆ. ಮೊದಲ ಸಿರಿಧಾನ್ಯಗಳ ಹಿಟ್ಟಿನ ಪಿಜ್ಜಾ ಬೇಸ್ ರಚಿಸಿದಾಗ, ಇದು ಜನರಿಗೆ ಬಹಳ ಇಷ್ಟವಾಗಿ, ಹೆಚ್ಚು ಜನಪ್ರಿಯವೂ ಆಯಿತು. ಇದು ತಿನ್ನಲು ರುಚಿಕರವಾಗಿರುವುದರ ಜೊತೆಗೆ ಮಾನವನ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ" ಎಂದು ಹೇಳಿದರು.

ನಂತರ ಮಾತನಾಡಿದ ಜಸ್ದೀಪ್ ಸಿಂಗ್, "ಮಿಲೆಟ್ಸ್ ಮ್ಯಾನ್​ ರಾಕೇಶ್ ನರುಲಾ ಜಿ ಅವರ ಸ್ಫೂರ್ತಿಯಿಂದ, ಒರಟಾದ ಧಾನ್ಯಗಳು, ಕಂಗ್ನಿ, ಕೋದ್ರಾ ಮತ್ತು ಬಜ್ರಾ ಮತ್ತು ಫಾರ್ ಬಳಸಿ ಫಾಸ್ಟ್ ಫುಡ್ ತಯಾರಿಸಲು ಮನಸ್ಸು ಮಾಡಿದೆ. ಮೂರು ತಿಂಗಳು ಅವರ ಕಠಿಣ ಪರಿಶ್ರಮದಿಂದ ರಾಕೇಶ್ ನರುಲಾ ಅವರು ಒರಟಾದ ಧಾನ್ಯಗಳೊಂದಿಗೆ ಆರೋಗ್ಯಕರ ಪಿಜ್ಜಾ ಬೇಸ್ ಸಿದ್ಧಪಡಿಸಿದರು. ಪಿಜ್ಜಾ ಬೇಸ್‌ನಿಂದ ತಯಾರಿಸಿದ ಫಾಸ್ಟ್ ಫುಡ್ ಜನರಿಗೆ ಇಷ್ಟವಾಗಿದೆ. ಏಕೆಂದರೆ ಇದನ್ನು ಎಲ್ಲ ತಾಜಾ ವಸ್ತುಗಳ ಬಳಕೆಯಿಂದಾಗಿ ರೆಡಿಮೇಡ್ ಪಿಜ್ಜಾ ಬೇಸ್‌ಗಿಂತ ವಿಭಿನ್ನ ರುಚಿಯೊಂದಿಗೆ ತಯಾರಿಸಲಾಗುತ್ತಿದೆ. ಈ ರುಚಿಯನ್ನು ಜನರೂ ಕೂಡ ಇಷ್ಟಪಟ್ಟು ಮೆಚ್ಚಿಕೊಂಡಿದ್ದಾರೆ" ಎಂದು ವಿವರಿಸಿದರು.

'ಅನೇಕ ರೋಗಗಳಿಗೆ ಮೈದಾ ಹಿಟ್ಟು ಮೂಲ': ಜಸ್ದೀಪ್ ಮಾತನಾಡಿ, "ಜನರು ಸಾಮಾನ್ಯವಾಗಿ ತಿನ್ನುವ ಪಿಜ್ಜಾದಲ್ಲಿ ಮೈದಾ ಹಿಟ್ಟು ಬಳಸಲಾಗುತ್ತದೆ. ಇದು ವಿವಿಧ ರೋಗಗಳನ್ನು ಆಹ್ವಾನ ನೀಡುತ್ತದೆ. ಮೈದಾ ಹಿಟ್ಟಿನಿಂದ ಮಾಡಿದ ವಸ್ತುಗಳಿಂದಾಗಿ ಜನರು ಮೈಗ್ರೇನ್, ಸ್ಥೂಲಕಾಯತೆ ಮತ್ತು ಮಧುಮೇಹದ ಅಪಾಯ ಎದುರಿಸಬೇಕಾಗುತ್ತದೆ. ಆದರೆ ರಾಕೇಶ್​ ನರುಲಾ ಅವರು ತಯಾರಿಸಿದ ಆರೋಗ್ಯಕರ ಪಿಜ್ಜಾಗಳು ಫಾಸ್ಟ್​ ಫುಡ್​ ತಿನ್ನುವ ಜನರ ಬಯಕೆಯನ್ನೂ ಪೂರೈಸುತ್ತದೆ, ಜೊತೆಗೆ ಆರೋಗ್ಯವಾಗಿ ಇಡುತ್ತದೆ. ಭವಿಷ್ಯದಲ್ಲಿ ಇನ್ನಷ್ಟು ರಾಗಿ ಪಿಜ್ಜಾ, ಬರ್ಗರ್‌ಗಳನ್ನು ತಯಾರಿಸುತ್ತೇವೆ" ಎಂದರು.

ಇದನ್ನೂ ಓದಿ: ಮಳೆಗಾಲದ ಮೋಜನ್ನು ಮತ್ತಷ್ಟು ಹೆಚ್ಚಿಸುತ್ತವೆ ಭಾರತದ ಈ ಸ್ನಾಕ್​ಗಳು..

Last Updated : Jun 26, 2023, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.