ETV Bharat / bharat

Hizbul militants killed: ಕುಲ್ಗಾಂ ಎನ್​ಕೌಂಟರ್​ನಲ್ಲಿ ಮತ್ತೊಬ್ಬ ಹಿಜ್ಬುಲ್ ಉಗ್ರ ಹತ.. - ಜಮ್ಮು ಮತ್ತು ಕಾಶ್ಮೀರ

ಕುಲ್ಗಾಂನ ಚಾವಲ್ಗಾಮ್ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ ಆರಂಭವಾಗಿದ್ದ ಎನ್‌ಕೌಂಟರ್ ಇಂದು ಬೆಳಗ್ಗೆ ಮುಕ್ತಾಯಗೊಂಡಿದ್ದು, ಒಟ್ಟು ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಕುಲ್ಗಾಂ ಎನ್​ಕೌಂಟರ್
ಕುಲ್ಗಾಂ ಎನ್​ಕೌಂಟರ್
author img

By

Published : Nov 12, 2021, 2:15 PM IST

ಕುಲ್ಗಾಂ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಲ್ಗಾಂ ಜಿಲ್ಲೆಯಲ್ಲಿ ನಿನ್ನೆ ಆರಂಭವಾಗಿದ್ದ ಎನ್​​ಕೌಂಟರ್​ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (Hizbul Mujahideen) ಸಂಘಟನೆಗೆ ಸೇರಿದ ಮತ್ತೊಬ್ಬ ಉಗ್ರನನ್ನು ಭದ್ರತಾ ಪಡೆಗಳು ಸದೆ ಬಡಿದಿವೆ

ಕುಲ್ಗಾಂನ ಚಾವಲ್ಗಾಮ್ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ ಆರಂಭವಾಗಿದ್ದ ಎನ್‌ಕೌಂಟರ್ (Kulgam Encounter) ಇಂದು ಬೆಳಗ್ಗೆ ಮುಕ್ತಾಯಗೊಂಡಿದೆ. ಪೊಲೀಸರು ಮತ್ತು ಭಾರತೀಯ ಸೇನೆಯ ಯೋಧರು ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ ನಿನ್ನೆ ಓರ್ವ ಉಗ್ರನನ್ನು ಭದ್ರತಾ ಪಡೆ ಗುಂಡಿಕ್ಕಿ ಕೊಂದಿತ್ತು. ಇಂದು ಬೆಳಗ್ಗೆ ಮತ್ತೊಬ್ಬನನ್ನು ಹೊಡೆದುರುಳಿಸಲಾಗಿದೆ.

ಇದನ್ನೂ ಓದಿ: Kulgam Encounter: ಅಪರಿಚಿತ ಭಯೋತ್ಪಾದಕನ ಸದೆಬಡಿದ ಭದ್ರತಾ ಪಡೆ

ಮೃತ ಉಗ್ರರನ್ನು ಶಿರಾಜ್ ಮೋಲ್ವಿ ಮತ್ತು ಯವರ್ ಭಟ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಜಿಲ್ಲಾ ಕಮಾಂಡರ್​ಗಳಾಗಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು (Kashmir Zone Police) ಮಾಹಿತಿ ನೀಡಿದ್ದಾರೆ.

ಗುಂಡು ಹಾರಿಸುವ ಮುನ್ನ ಭದ್ರತಾ ಪಡೆಗಳು ಉಗ್ರರಿಗೆ ಶರಣಾಗಲು ಸೂಚಿಸಿದ್ದಾರೆ. ಆದರೆ, ಉಗ್ರರು ಶರಣಾಗಲು ನಿರಾಕರಿಸಿದ ಕಾರಣ ಹತೈ ಮಾಡಲಾಗಿದೆ. ಎನ್‌ಕೌಂಟರ್ ಸ್ಥಳದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.