ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಪಂಡಿತರ ಮೇಲಿನ ದೌರ್ಜನ್ಯಗಳಿಗೆ ಎಲ್ಲೆ ಇಲ್ಲವಾಗಿದೆ. ಅವರು ವಾಸಿಸುವ ಶ್ರೀನಗರದ ಕ್ರಲ್ಪೋರಾ ಕಾಲೊನಿಯಲ್ಲಿ ಶನಿವಾರದಂದು ಉಗ್ರರು ಸ್ಫೋಟಕ ಎಸೆದಿದ್ದಾರೆ. ಇದು ಬೆದರಿಸುವ ಅಥವಾ ಹತ್ಯೆ ಸಂಚೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾದರೂ, ಕೆಲವು ಮನೆಗಳ ಕಿಟಕಿಯ ಗಾಜುಗಳು ಒಡೆದಿವೆ.
ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರದ ಕ್ರಾಲ್ಪೋರಾ ಕಾಲೊನಿಯಲ್ಲಿ ಪಂಡಿತರ ಕುಟುಂಬಗಳು ವಾಸಿಸುತ್ತವೆ. ಶನಿವಾರ ಬೆಳಗ್ಗೆ 7.45 ರ ಸುಮಾರಿನಲ್ಲಿ ಕಾಲೊನಿಯಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಹಳೆಯ ಶೆಲ್ ಸ್ಫೋಟಗೊಂಡಿರಬಹುದು ಎನ್ನಲಾಗಿದೆ. ಹಳೆಯ ಕಟ್ಟಡದ ಸಾಮಗ್ರಿಗಳಲ್ಲಿ ಕೆಲವು ಸ್ಫೋಟಗೊಳ್ಳದ ಹಳೆಯ ಶೆಲ್ಗಳು ಹಾಗೆಯೇ ಉಳಿದುಕೊಂಡು, ರಾಶಿ ಬಿದ್ದ ವಸ್ತುಗಳಲ್ಲಿ ಇದು ಸ್ಫೋಟಗೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಅಂದಾಜಿಸಲಾಗಿದೆ.
ಇದನ್ನೂ ಓದಿ: ಮನಸೋಇಚ್ಛೆ ಗುಂಡು ಹಾರಿಸಿದ ಆಗಂತುಕ; ಅಮೆರಿಕದ ಓಹಿಯೋದಲ್ಲಿ ನಾಲ್ವರು ಸಾವು