ETV Bharat / bharat

ಜಮ್ಮು- ಕಾಶ್ಮೀರದ ಝೀವಾನ್​ನಲ್ಲಿ ಉಗ್ರರ ದಾಳಿ.. ಇಬ್ಬರು ಪೊಲೀಸರ ಸಾವು.. 12 ಯೋಧರಿಗೆ ಗಾಯ - 8 ಯೋಧರಿಗೆ ಗಾಯ.. ನಾಲ್ವರು ಗಂಭೀರ

ಜಮ್ಮು- ಕಾಶ್ಮೀರದ ರಂಗ್ರೇತ್​ನಲ್ಲಿ ಇಬ್ಬರು ಉಗ್ರರನ್ನು ಯೋಧರು ಹತ್ಯೆ ಮಾಡಿದ ಬೆನ್ನಲ್ಲೇ, ಶ್ರೀನಗರದ ಝೀವಾನ್ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ, ಇಬ್ಬರು ಪೊಲೀಸರು ಮೃತಪಟ್ಟಿದ್ದು, 12 ಪೊಲೀಸರು ಗಾಯಗೊಂಡಿದ್ದಾರೆ.

militant attack
ಉಗ್ರರ ದಾಳಿ
author img

By

Published : Dec 13, 2021, 7:23 PM IST

Updated : Dec 13, 2021, 9:08 PM IST

ಶ್ರೀನಗರ(ಜಮ್ಮು-ಕಾಶ್ಮೀರ): ಜಮ್ಮು -ಕಾಶ್ಮೀರದ ರಂಗ್ರೇತ್​ನಲ್ಲಿ ಇಬ್ಬರು ಉಗ್ರರನ್ನು ಯೋಧರು ಹತ್ಯೆ ಮಾಡಿದ ಬೆನ್ನಲ್ಲೇ, ಶ್ರೀನಗರದ ಝೀವಾನ್ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸರು ಮೃತಪಟ್ಟಿದ್ದು, 12 ಯೋಧರು ಗಾಯಗೊಂಡ ಘಟನೆ ನಡೆದಿದೆ.

ಝೀವಾನ್​ ಪ್ರದೇಶದ ಪಂಥಾ ಚೌಕ್- ಖೋನ್ಮೋಹ್ ರಸ್ತೆಯಲ್ಲಿ ಸಾಗುತ್ತಿದ್ದ 9 ನೇ ಬೆಟಾಲಿಯನ್​ನ ಭಾರತೀಯ ರಿಸರ್ವ್ ಪೊಲೀಸ್ (IRP) ವಾಹನದ ಮೇಲೆ ಉಗ್ರರು ಏಕಾಏಕಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 14 ಪೊಲೀಸರು ಗಾಯಗೊಂಡಿದ್ದರು. ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು. ಇದೀಗ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು.. ಇಬ್ಬರು ಭಯೋತ್ಪಾದಕರ ಹುಟ್ಟಡಗಿಸಿದ ಭದ್ರತಾ ಪಡೆಗಳು

ಎಲ್ಲ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಗ್ರರ ಗುಂಡಿನ ದಾಳಿಗೆ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ನಡೆದ ಝೀವಾನ್​ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಉಗ್ರರನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Last Updated : Dec 13, 2021, 9:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.