ನವದೆಹಲಿ: ಹರಿಯಾಣದ ಝಜ್ಜಾರನಲ್ಲಿ ಲಘು ಭೂಕಂಪ ಸಂಭವಿಸಿದೆ. ಹಾಗೆಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಗಿದೆ. ದೆಹಲಿ, ಗುರುಗ್ರಾಮ ಮತ್ತು ಎನ್ಸಿಆರ್ ಕೆಲ ಭಾಗಗಳಲ್ಲಿ ಸೋಮವಾರ ರಾತ್ರಿ 10.40ರ ಸುಮಾರಿಗೆ ಭೂಮಿ ನಡುಗಿದೆ.
ಝಜ್ಜಾರದಲ್ಲಿ ಲಘು ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲಾಗಿದೆ ಎಂದು ಎನ್ಸಿಎಸ್ ಮಾಹಿತಿ ನೀಡಿದೆ. ಹಾಗೆಯೇ ರಾತ್ರಿ 8.20ಕ್ಕೆ ಮಣಿಪುರದ ಥೋಬಲ್ನಲ್ಲಿ 2.8 ತೀವ್ರತೆಯ ಭೂಕಂಪ ದಾಖಲಾಗಿತ್ತು.
ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿಲ್ಲ.