ETV Bharat / bharat

ರೈಲಿನಲ್ಲಿ ಆದ ಕೆಟ್ಟ ಅನುಭವ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡ ಮಹಿಳೆ​.. ನಿಜವಾಗಿ ಆಗಿದ್ದೇನು? - etv bharat kannada

ತಮಿಳುನಾಡಿನಿಂದ ಉತ್ತರ ಭಾರತದ ರಾಜ್ಯಗಳಿಗೆ ತೆರಳಲು ಅನುಕೂಲವಾಗುವಂತೆ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ವಲಸೆ ಕಾರ್ಮಿಕರು ಆಗ್ರಹಿಸಿದ್ದಾರೆ.

Etv Bharatmigrant-workers-struggling-to-move-to-their-states-due-to-lack-of-trains
ರೈಲ್ವೆ ಸ್ಟೇಷನ್​ಗಳಲ್ಲಿ ಕಿಕ್ಕಿರಿದ ಜನ: ತಮ್ಮ ರಾಜ್ಯಗಳಿಗೆ ತೆರಳಲು ಹರಸಾಹಸ ಪಡುತ್ತಿರುವ ವಲಸೆ ಕಾರ್ಮಿಕರು
author img

By ETV Bharat Karnataka Team

Published : Nov 15, 2023, 10:59 PM IST

ತಿರುಪುರ್(ತಮಿಳುನಾಡು): ಸೇಲಂನಿಂದ ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸಿದ ಮಹಿಳೆಯೊಬ್ಬಳು "ಆ ಕೆಲವು ಗಂಟೆಗಳಲ್ಲಿ ಎಷ್ಟು ಕಣ್ಣುಗಳು ನನ್ನನ್ನು ನೋಡಿವೆ ಎಂದು ನನಗೆ ತಿಳಿದಿಲ್ಲ" ಎಂದು ಅವರು ನವೆಂಬರ್ 5 ರಂದು ರೈಲು ಪ್ರಯಾಣ ಮಾಡುವಾಗ ತಮ್ಮಗಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೊಚುವೇಲಿಯಿಂದ ಗೋರಖ್​ಪುರಕ್ಕೆ ತೆರಳುವ ರೈಲು ಹತ್ತಿಲು ಬಂದಿದ್ದ ಮಹಿಳೆಗೆ ಆಘಾತ ಕಾದಿತ್ತು. ರೈಲ್ವೆ ಸ್ಟೇಷನ್​ನಲ್ಲಿ ಈ ರೈಲನಲ್ಲಿ ಪ್ರಯಾಣಿಸಲು ನೂರಾರು ಅಲ್ಲ, ಸಾವಿರಾರು ಜನರು ಕಾಯುತ್ತಿದ್ದರು.

ಹೀಗೆ ಹರಸಾಹಸಪಟ್ಟು ರೈಲನ್ನು ಹತ್ತಿದ ಅವರು ಪ್ರತಿ ನಿಮಿಷವೂ ನರಕಯಾತನೆ ಅನುಭವಿಸಿದ್ದಾರೆ. ಮಹಿಳೆ ತನ್ನ ಪತಿ ಮತ್ತು ಇನ್ನೊಬ್ಬ ಸ್ನೇಹಿತನೊಂದಿಗೆ ರೈಲನ್ನು ಹತ್ತಿದ್ದರು, ಈ ವೇಳೆ ಅವರ ಸುತ್ತಲೂ ನಿಂತಿದ್ದ ಪುರುಷರು ತನಗೆ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಬರೆದು, ಅಳಲು ತೋಡಿಕೊಂಡಿದ್ದಾರೆ.

ಸಮಸ್ಯೆಗೆ ಕಾರಣವೇನು?: ತಿರುಪುರ್ ರೈಲ್ವೆ ನಿಲ್ದಾಣದಲ್ಲಿ ದೀಪಾವಳಿಯ ಬಳಿಕವೂ ತುಂಬಿ ತುಳುಕುತ್ತಿವೆ. ಕಾರಣ ಉತ್ತರ ಭಾರತದಲ್ಲಿ ಆಚರಿಸುವ ದೀಪಾವಳಿ ನಂತರದ ಕೆಲ ಹಬ್ಬಗಳು. ಈ ಹಬ್ಬಗಳಲ್ಲಿ ಪಾಲ್ಗೊಳ್ಳಲು ತಮ್ಮ ಕೈಗಳಲ್ಲಿ ಮತ್ತು ತಲೆಗಳ ಮೇಲೆ ಬ್ಯಾಗ್​, ಲಗೇಜ್​ಗಳನ್ನು ಹೊತ್ತುಕೊಂಡು ಇರುವೆಗಳಂತೆ ರೈಲು ಬೋಗಿಗಳಿಗೆ ಪ್ರಯಾಣಕರು ನುಗ್ಗುತ್ತಿದ್ದಾರೆ. ರೈಲಿಗಾಗಿ ಪ್ರಯಾಣಿಕರು ಹಳಿಗಳ ಮೇಲೆ ಅಪಾಯಕಾರಿಯಾಗಿ ಓಡುವ ದೃಶ್ಯವೂ ಕಂಡುಬಂದಿದೆ.

ತಮಿಳುನಾಡಿನ ಕೈಗಾರಿಕೆಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಜವಳಿ, ಕಟ್ಟಡ ನಿರ್ಮಾಣ, ಹೋಟೆಲ್​ಗಳಲ್ಲಿ ಹೆಚ್ಚು ಉತ್ತರದ ಭಾರತದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಕೊಯಮತ್ತೂರು, ತಿರುಪುರ್, ಸೇಲಂ ಸೇರಿದಂತೆ ಹಲವು ನಗರಗಳಲ್ಲಿನ ಕೈಗಾರಿಕೆಗಳಲ್ಲಿ ಉತ್ತರ ಭಾರತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ತಮಿಳುನಾಡಿನ ಕೈಗಾರಿಕೆಗಳಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ ವಲಸೆ ಕಾರ್ಮಿಕರು: ತಮಿಳುನಾಡಿನ ಕೈಗಾರಿಕಾ ನಗರಗಳಿಂದ ಉತ್ತರ ಭಾರತದ ರಾಜ್ಯಗಳಿಗೆ ವಾರಕ್ಕೊಮ್ಮೆ ಮಾತ್ರ ರೈಲುಗಳು ಇರುವುದರಿಂದ ಟಿಕೆಟ್ ಪಡೆಯುವುದು ತುಂಬಾ ಕಷ್ಟ. ವಲಸೆ ಕಾರ್ಮಿಕರು ಕೂಡ ಟಿಕೆಟ್‌ ಕಾಯ್ದಿರಿಸಿ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಸೀಟು ಸಿಗಲಿಲ್ಲ ಎಂದರೆ ಟಿಕೆಟ್ ಕಾಯ್ದಿರಿಸಿದವರಿಗೆ ಇರುವ ಕಂಪಾರ್ಟ್ ಮೆಂಟ್​ಗಳಲ್ಲಿನ ಸೀಟು, ಕಾರಿಡಾರ್, ಶೌಚಾಲಯಗಳಲ್ಲಿ ಕುಳಿತು ಪ್ರಯಾಣ ಮಾಡುತ್ತಾರೆ. ಜವಳಿ ಕೇಂದ್ರವಾದ ತಿರುಪುರವೊಂದರಲ್ಲೇ ಉಡುಪು ತಯಾರಿಕಾ ಕೈಗಾರಿಕೆಗಳಲ್ಲಿ ಶೇ.35ರಿಂದ 40ರಷ್ಟು ಮಂದಿ ವಲಸೆ ಕಾರ್ಮಿಕರೇ ಇದ್ದಾರೆ. ಅಂದರೆ, ಉತ್ತರದ ಭಾರತದ ರಾಜ್ಯಗಳಲ್ಲಿ ಎರಡೂವರೆ ಲಕ್ಷ ವಲಸೆ ಕಾರ್ಮಿಕರು ತಿರುಪುರ್ ಜವಳಿ ಕೈಗಾರಿಕೆಗಳಲ್ಲಿ ವಿವಿಧ ಕೆಲಸಗಳನ್ನು ತೊಡಗಿದ್ದಾರೆ.

ವಿಶೇಷವಾಗಿ ತಮಿಳುನಾಡಿನ ಕೊಯಮತ್ತೂರು, ತಿರುಪುರ್, ಈರೋಡ್ ಮತ್ತು ಕರೂರ್ ನಗರಗಳಲ್ಲಿ ಮತ್ತು ಕೇರಳದ ಕೊಚ್ಚಿ ಮತ್ತು ತಿರುವನಂತಪುರಂನಂತಹ ನಗರಗಳಲ್ಲಿ ಉತ್ತರ ರಾಜ್ಯದ ವಲಸೆ ಕಾರ್ಮಿಕರು ಸಾಕಷ್ಟು ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ನಗರಗಳಿಂದ ಉತ್ತರ ಭಾರತದ ರಾಜ್ಯಗಳಿಗೆ ಹೋಗುವ ರೈಲುಗಳ ಸಂಖ್ಯೆ ತೀರಾ ಕಡಿಮೆ. ದೀಪಾವಳಿ ಮತ್ತು ಸತ್ಪೂಜಾ ಹಬ್ಬಕ್ಕಾಗಿ ತಿರುಪುರವೊಂದರಲ್ಲೇ ಒಂದೂವರೆ ಲಕ್ಷ ಕಾರ್ಮಿಕರು ತಮ್ಮ ಊರುಗಳಿಗೆ ಪ್ರಯಾಣಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಆದರೆ, ತಿರುಪುರದಿಂದ ವಲಸೆ ಕಾರ್ಮಿಕರಿಗೆ ಇರುವುದು ಕೇವಲ ಮೂರು ವಿಶೇಷ ರೈಲುಗಳು ಮಾತ್ರ. ಅವುಗಳಲ್ಲಿ ಒಂದು ಲಕ್ಷ ಜನರು ಹೇಗೆ ಪ್ರಯಾಣಿಸುತ್ತಾರೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಈ ವರ್ಷದ ದೀಪಾವಳಿಗಾಗಿ, ತಿರುಪುರ್ ಮೂಲಕ ಉತ್ತರದ ರಾಜ್ಯಗಳಿಗೆ ಹೋಗುವ ರೈಲುಗಳನ್ನು ಹತ್ತಲು ಸಾವಿರಾರು ಕಾರ್ಮಿಕರು ಕಾಯುತ್ತಿದ್ದರು. ಆದರೆ ಈ ಎಲ್ಲಾ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ, ರೈಲ್ವೆ ಆಡಳಿತವು ವಲಸೆ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಉತ್ತರ ಭಾರತದ ವಲಸೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ರೈಲುಗಳ ಸೇವೆ ಅಗತ್ಯ: ಈ ಬಗ್ಗೆ ವಲಸೆ ಕಾರ್ಮಿಕರೊಬ್ಬರು ಮಾತನಾಡಿ, "ಉತ್ತರದ ಅನೇಕ ರಾಜ್ಯಗಳಿಂದ ಕಾರ್ಮಿಕರು ತಿರುಪುರಕ್ಕೆ ಬಂದು ಕೆಲಸ ಮಾಡುತ್ತಾರೆ. ಆದ್ದರಿಂದ ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಕ್ಕೆ ಹೆಚ್ಚುವರಿಯಾಗಿ ವಾರದ ರೈಲುಗಳನ್ನು ಬಿಡಬೇಕು" ಎಂದು ಒತ್ತಾಯಿಸಿದರು.

"ಈಗಿರುವ ರೈಲುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದರೂ ಪ್ರಯಾಣಿಕರಿಗೆ ಸಾಕಾಗುವುದಿಲ್ಲ. ಎಷ್ಟೋ ಜನ ನಿತ್ಯ ಇಲ್ಲಿಗೆ ಬರುತ್ತಾರೆ. ದೀಪಾವಳಿಯಂತಹ ಹಬ್ಬದ ದಿನಗಳಲ್ಲಿ ಸಾವಿರಾರು ವಲಸೆ ಕಾರ್ಮಿಕರು ಪ್ರಯಾಣಿಸುತ್ತಾರೆ. ದೀಪಾವಳಿಗೆ ಒಂದು ವಾರ ಮೊದಲು ಮತ್ತು ನಂತರ ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಯುಪಿ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಿಗೆ ಪ್ರತಿದಿನ ವಿಶೇಷ ರೈಲುಗಳನ್ನು ಬಿಡಬೇಕು '' ಎಂದು ಅವರು ರೈಲ್ವೆ ಆಡಳಿತಕ್ಕೆ ವಲಸೆ ಕಾರ್ಮಿಕರು ಮನವಿ ಮಾಡಿದ್ದಾರೆ.

ಸಾರಿಗೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ: ತಿರುಪುರ್​ನ ಬಟ್ಟೆ ರಫ್ತುದಾರರ ಮತ್ತು ಉತ್ಪಾದಕರ ಸಂಘದ ಅಧ್ಯಕ್ಷ ಮುತ್ತು ರತ್ನಂ ಮಾತನಾಡಿ, "ಉತ್ತರ ಭಾರತದ ಕಾರ್ಮಿಕರು ಹಬ್ಬಕ್ಕೆ ಹೋದರೆ 10 ದಿನಗಳ ನಂತರ ವಾಪಸ್ ಬರುತ್ತಾರೆ. ಹೀಗಾಗಿ ಅವರ ಸಂಖ್ಯೆಗೆ ಅನುಗುಣವಾಗಿ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಬೇಕು. ಮುಂದಿನ ಸೋಮವಾರದಿಂದ ಬಟ್ಟೆ ಕೈಗಾರಿಕೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಉತ್ತರ ಭಾರತದ ಕಾರ್ಮಿಕರಿಗೆ ಸಾರಿಗೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ಕೇರಳ ಸರ್ಕಾರಿ ಬಸ್​ಗಳಿಗಿಲ್ಲ ವಿಮಾ ರಕ್ಷಣೆ: 'ಈಟಿವಿ ಭಾರತ್​' ತನಿಖಾ ವರದಿಯಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.