ನವದೆಹಲಿ: ದೇಶದ ವಿವಿಧ ಚರ್ಚ್‌ಗಳಲ್ಲಿ ಭಾನುವಾರದ ಮಧ್ಯರಾತ್ರಿ ಈಸ್ಟರ್ ಪ್ರಾರ್ಥನೆಗಳು ಶಾಂತಿಯುತವಾಗಿ ನಡೆಯಿತು. ಈಸ್ಟರ್ ನ ಪವಿತ್ರ ಸಂದರ್ಭಕ್ಕಾಗಿ ಜನರೆಲ್ಲರೂ ಕ್ಯಾಂಡಲ್ನ ಬೆಳಕಿನಿಂದ ಅಲಂಕರಿಸಿದ ಚರ್ಚ್‌ನಲ್ಲಿ ಒಟ್ಟು ಸೇರಿ ಪ್ರಾರ್ಥನೆಗಳನ್ನು ನೆರವೇರಿಸಿದರು. ಈಸ್ಟರ್ ಅನ್ನು ಯೇಸುಕ್ರಿಸ್ತನ ಅದ್ಭುತ ಪುನರುತ್ಥಾನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಈಸ್ಟರ್ ಹಬ್ಬಕ್ಕಾಗಿ ಈಸ್ಟರ್ ರಾತ್ರಿ ಕೊಚ್ಚಿಯ ಸೈರೋ-ಮಲಬಾರ್ ಚರ್ಚ್‌ನ ಪ್ರಧಾನ ಕಚೇರಿಯಾದ ಮೌಂಟ್ ಸೇಂಟ್ ಥಾಮಸ್‌ನಲ್ಲಿ ಜನರು ಒಟ್ಟುಗೂಡಿದ್ದರು.
ಈಸ್ಟರ್ ರಾತ್ರಿಯ ಹಬ್ಬದ ಜವಬ್ದಾರಿಯನ್ನು ಹೊತ್ತಿದ್ದ ಸಿರೋ-ಮಲಬಾರ್ ಚರ್ಚ್‌ನ ಮೇಜರ್ ಆರ್ಚ್‌ಬಿಷಪ್, ಕಾರ್ಡಿನಲ್ ಜಾರ್ಜ್ ಅಲೆಂಚೇರಿ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು. ಮೆಸ್ಸಿಹ್ (ರಕ್ಷಕನೆಂಬ ಅರ್ಥದಲ್ಲಿ ಜೀಸಸ್) ಮಾನವಕುಲಕ್ಕಾಗಿ ಏರಿದ, ಮೆಸ್ಸೀಯನ ಪುನರುತ್ಥಾನವು ಮಾನವಕುಲದ ವಿಜಯವಾಗಿದೆ. ಭಗವಂತನ ಸೇವೆಯು ಜೀವವನ್ನು ನೀಡುವ ಸೇವೆಯಾಗಿದೆ ಮತ್ತು ಅದನ್ನು ನಾವು ಮುಂದುವರಿಸಬೇಕು ಎಂದರು. ಮುಂದೆ ಶಾಂತಿ ಮತ್ತು ಸೌಹಾರ್ದತೆಗಾಗಿ ಪ್ರಾರ್ಥಿಸುತ್ತ, ಆಲೆಂಚೇರಿ ಅವರು, ನಮಗೆ ಮೆಸ್ಸಿಹ್ ಜೊತೆಗೆ ದೇವರ ಉಡುಗೊರೆ ಬರುತ್ತದೆ, ಕ್ರೈಸ್ತರು ವೈಭವದ ಬಗ್ಗೆ ಯೋಚಿಸಬೇಕು. ನಾವು ಉದ್ದೇಶ ಮತ್ತು ಜೀವನದ ಸಂಸ್ಕೃತಿಯನ್ನು ಬೆಳೆಸಲು ಶಕ್ತರಾಗಿರಬೇಕು. ಚರ್ಚ್‌ನಲ್ಲಿ, ಕುಟುಂಬದಲ್ಲಿ ಮತ್ತು ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಅವರು ಹೇಳಿದರು.
ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ನಲ್ಲಿ. ಕ್ಯಾಥೆಡ್ರಲ್ ಅನ್ನು ಈಸ್ಟರ್ ರಾತ್ರಿಗಾಗಿ ಸಂಪೂರ್ಣವಾಗಿ ಅಲಂಕರಿಸಲಾಗಿತ್ತು. ಇಡೀ ಚರ್ಚ್ ಕಿತ್ತಳೆ ಮತ್ತು ಕೆಂಪು ಬಣ್ಣದಿಂದ ಹೊಳೆಯುತ್ತಿತ್ತು. ಜೀಸಸ್ನ ಭಕ್ತರು ಮೇಣದಬತ್ತಿಗಳನ್ನು ಉರಿಸಿ ಪ್ರಾರ್ಥನೆ ಸಲ್ಲಿಸಿದರು. ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಚರ್ಚ್‌ನಲ್ಲಿಯೂ ಆಚರಣೆಗಳನ್ನು ನಡೆಸಲಾಯಿತು. ಇಲ್ಲಿ ಭಕ್ತರು ಚರ್ಚ್‌ನ ಒಳಗೆ ಕ್ಯಾಂಡಲ್‌ಲೈಟ್ ಹಿಡಿದು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಪವಿತ್ರ ಈಸ್ಟರ್ ಸಲುವಾಗಿ ಮುಂಬೈನ ಚರ್ಚ್‌ನಲ್ಲಿಯೂ ಪ್ರಾರ್ಥನೆ ಸಲ್ಲಿಸಲಾಯಿತು.
ಗೋವಾದ ಚರ್ಚ್‌ನಿಂದ ಫಾದರ್ ವಾಲ್ಟರ್ ಡಿ ಸಾ ಅವರು ಈಸ್ಟರ್ ಮೇಣದಬತ್ತಿಗಳ ಮಹತ್ವವನ್ನು ವಿವರಿಸಿದರು. ನಾವು ಯೇಸುಕ್ರಿಸ್ತನ ಪುನರುತ್ಥಾನವನ್ನು ಆಚರಿಸುತ್ತೇವೆ. ಇದು ತಡರಾತ್ರಿಯಲ್ಲಿ ನಾವು ಆಚರಿಸುವ ಕಾರ್ಯಕ್ರಮವಾಗಿದೆ. ಈ ಮೇಣದ ಬತ್ತಿಯಲ್ಲಿರುವ ಬೆಂಕಿಯು ನಮ್ಮ ಶುದ್ಧೀಕರಣ ಮತ್ತು ಹೊಸತನವನ್ನು ಸಂಕೇತಿಸುತ್ತದೆ. ಈಸ್ಟರ್ಗಾಗಿ ನಾವು ಮೇಣದ ಬತ್ತಿಯನ್ನು ಬೆಳಗಿಸುತ್ತೇವೆ. ಇದು ಭಗವಂತನನ್ನು ಪ್ರತಿನಿಧಿಸುತ್ತದೆ, ಇದು ಪ್ರಪಂಚದ ಬೆಳಕು ಎಂದು ಅವರು ಹೇಳಿದರು. ಈಸ್ಟರ್ ರಾತ್ರಿಯ ದಿನವು ಯೇಸುವಿನ ಪುನರುತ್ಥಾನವನ್ನು ಆಚರಿಸುವುದಾಗಿದೆ. ಬೈಬಲ್ ಪ್ರಕಾರ, ಯೇಸು ಮೃತರೊಳಗಿಂದ ಎದ್ದ ನಂತರ ಶಿಲುಬೆಗೇರಿಸಿದ ಮೂರನೇ ದಿನವನ್ನು ಇದು ಸೂಚಿಸುತ್ತದೆ.
-
Happy Easter! May this special occasion deepen the spirit of harmony in our society. May it inspire people to serve society and help empower the downtrodden. We remember the pious thoughts of Lord Christ on this day.
— Narendra Modi (@narendramodi) April 9, 2023 " class="align-text-top noRightClick twitterSection" data="
">Happy Easter! May this special occasion deepen the spirit of harmony in our society. May it inspire people to serve society and help empower the downtrodden. We remember the pious thoughts of Lord Christ on this day.
— Narendra Modi (@narendramodi) April 9, 2023Happy Easter! May this special occasion deepen the spirit of harmony in our society. May it inspire people to serve society and help empower the downtrodden. We remember the pious thoughts of Lord Christ on this day.
— Narendra Modi (@narendramodi) April 9, 2023
ಪ್ರಧಾನಿ ಮೋದಿಯಿಂದ ಈಸ್ಟರ್ ಹಬ್ಬಕ್ಕೆ ಶುಭಾಶಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಈಸ್ಟರ್ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ್ದಾರೆ ಮತ್ತು ಸಮಾಜದಲ್ಲಿ ಸಾಮರಸ್ಯಕ್ಕಾಗಿ ಹಾರೈಸಿದ್ದಾರೆ. ಈಸ್ಟರ್ ಹಬ್ಬದ ಶುಭಾಶಯಗಳು! ಈ ವಿಶೇಷ ಸಂದರ್ಭವು ನಮ್ಮ ಸಮಾಜದಲ್ಲಿ ಸಾಮರಸ್ಯದ ಮನೋಭಾವವಾಗಿ ಬೇರೂರಲಿ. ಸಮಾಜ ಸೇವೆ ಮಾಡಲು ಇದು ಜನರನ್ನು ಪ್ರೇರೇಪಿಸಲಿ ಮತ್ತು ದೀನದಲಿತರ ಸಬಲೀಕರಣಕ್ಕೆ ಸಹಾಯ ಮಾಡಲಿ. ಈ ದಿನ ನಾವು ಲಾರ್ಡ್ ಕ್ರಿಸ್ತರ ಧಾರ್ಮಿಕ ಆಲೋಚನೆಗಳನ್ನು ನೆನಪಿಸಿಕೊಳ್ಳುತ್ತೇವೆ ಎಂದು ಮೋದಿ ಟ್ವೀಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ರುಚಿಯಾದ ಅಲ್ಫಾನ್ಸೊ ಮಾವು ಖರೀದಿಗೆ EMI ಸೌಲಭ್ಯ: ನೀವೂ ಟ್ರೈ ಮಾಡಿ