ಕೋಲ್ಕತ್ತಾ(ಪಚ್ಚಿಮ ಬಂಗಾಳ): ಕಳೆದ ವರ್ಷ ಮಾರ್ಚ್ನಲ್ಲಿ ದೇಶ ವ್ಯಾಪಿ ಸುದ್ದಿಯಲ್ಲಿದ್ದ ರಾಮ್‌ಪುರಹತ್‌ನ ಬೊಗ್ಟುಯಿ ಗ್ರಾಮ, ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ, ಬೊಗ್ಟುಯಿ ಘಟನೆಯ ಸಂತ್ರಸ್ತರ ಕುಟುಂಬಗಳಿಗೆ ನೀಡಿದ ಪರಿಹಾರದ ಹಣದ ಬಗ್ಗೆ ಬಂಗಾಳದ ಆಡಳಿತ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷದ ನಡುವೆ ಜಟಾಪಟಿ ನಡೆಯುತ್ತಿದೆ. ಬೊಗ್ಟುಯಿ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಿದ ಪರಿಹಾರವು, ಕೇಂದ್ರ ಸರ್ಕಾರ ಅಕ್ಷರ ದಾಸೋಹ ನಿಧಿಗೆ ಮೀಸಲಿಟ್ಟ ಹಣವನ್ನು, ರಾಜ್ಯ ಸರ್ಕಾರ ಖರ್ಚು ಮಾಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಈ ಬಗ್ಗೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರಶ್ನಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಬಿಜೆಪಿಯ ಬಿರ್ಭುಮ್ ಜಿಲ್ಲಾಧ್ಯಕ್ಷ ಧ್ರುವ ಸಾಹಾ ಅವರು ಬೊಗ್ಟುಯಿ ಘಟನೆಯಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಸುಮಾರು 67 ಲಕ್ಷ ಹಣವನ್ನು ಅಕ್ಷರ ದಾಸೋಹ ನಿಧಿಯಿಂದ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
-
CM @MamataOfficial paid compensation to the victims' kin; burnt alive in the Bogtui carnage at Birbhum District, from the Mid Day Meal funds.
— Suvendu Adhikari • শুভেন্দু অধিকারী (@SuvenduWB) January 28, 2023 " class="align-text-top noRightClick twitterSection" data="
Doing charity for photo op, that too by misusing Central Govt funds meant for food & nutrition of schoolchildren !
It's a financial crime. pic.twitter.com/OdrkbgsHJS
">CM @MamataOfficial paid compensation to the victims' kin; burnt alive in the Bogtui carnage at Birbhum District, from the Mid Day Meal funds.
— Suvendu Adhikari • শুভেন্দু অধিকারী (@SuvenduWB) January 28, 2023
Doing charity for photo op, that too by misusing Central Govt funds meant for food & nutrition of schoolchildren !
It's a financial crime. pic.twitter.com/OdrkbgsHJSCM @MamataOfficial paid compensation to the victims' kin; burnt alive in the Bogtui carnage at Birbhum District, from the Mid Day Meal funds.
— Suvendu Adhikari • শুভেন্দু অধিকারী (@SuvenduWB) January 28, 2023
Doing charity for photo op, that too by misusing Central Govt funds meant for food & nutrition of schoolchildren !
It's a financial crime. pic.twitter.com/OdrkbgsHJS
ಭದು ಶೇಖ್ ಹತ್ಯೆ ಪ್ರಕರಣ: ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಸ್ಥಳೀಯ ಪಂಚಾಯತ್‌ನ ಉಪ ಮುಖ್ಯಸ್ಥ ಭದು ಶೇಖ್ ಅವರನ್ನು ಮಾರ್ಚ್ 21 ರಂದು ಬಿರ್ಭೂಮ್‌ನ ರಾಮ್‌ಪುರಹತ್‌ನ ಬೊಗ್ಟುಯಿ ಗ್ರಾಮದಲ್ಲಿ ಹತ್ಯೆ ಮಾಡಲಾಗಿತ್ತು. ಆ ಘಟನೆಯ ನಡೆದ ಕೆಲವು ಗಂಟೆಗಳ ನಂತರ, ಬೊಗ್ಟುಯಿ ಗ್ರಾಮದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು, ಆ ಬೆಂಕಿಯಲ್ಲಿ ಹತ್ತು ಜನರು ಸಾವನ್ನಪ್ಪಿದ್ದರು.
ಭದು ಶೇಖ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಆ ಹತ್ತು ಮಂದಿಯನ್ನು ಸುಟ್ಟು ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಘಟನೆಯ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೊಗ್ಟುಯಿ ಗ್ರಾಮಕ್ಕೆ ತೆರಳಿ ಸಂತ್ರಸ್ತರ ಕುಟುಂಬಗಳಿಗೆ 7 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದರು. ಇದಾದ ಕೆಲವೇ ದಿನಗಳಲ್ಲಿ, ರಾಮ್‌ಪುರಹತ್ ನಂ.ಒನ್ ಬಿಡಿಒ ದೀಪಾನ್ವಿತಾ ಬರ್ಮನ್ ಸಹಿ ಮಾಡಿದ ಚೆಕ್ ಅನ್ನು ಬೊಗ್ಟುಯಿ ಘಟನೆಯ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು.
ಇದಲ್ಲದೇ, ರಾಮ್‌ಪುರಹತ್‌ನ ಪರ್ಕಂಡಿಯ ಏಳು ಕೃಷಿ ಕಾರ್ಮಿಕರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಗ ಮೃತರ ಕುಟುಂಬಕ್ಕೆ 2 ಲಕ್ಷ ರೂ.ಧನ ಸಹಾಯ ನೀಡಲಾಗಿತ್ತು. ರಾಜ್ಯ ಸರ್ಕಾರ ಈ ಪರಿಹಾರವನ್ನು ಅಕ್ಷರ ದಾಸೋಹ ನಿಧಿಯಿಂದ ನೀಡಿದೆ ಎಂದು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಆರೋಪಿಸುತ್ತಿವೆ.
ಅಕ್ಷರ ದಾಸೋಹ ಹಣದಲ್ಲಿ ಆರ್ಥಿಕ ನೆರವು: ಅಕ್ಷರ ದಾಸೋಹಕ್ಕೆ ಮೀಸಲಿಟ್ಟ ಹಣದಲ್ಲಿಯೇ ಪರಿಹಾರವನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರಾಜ್ಯ ಸರ್ಕಾರ ಅಕ್ಷರ ದಾಸೋಹದ ಹಣವನ್ನು ಸರಿಯಾದ ಲೆಕ್ಕಪತ್ರವಿಲ್ಲದೇ ಬೇರೆ ಕ್ಷೇತ್ರಗಳಿಗೆ ಖರ್ಚು ಮಾಡುತ್ತಿದೆ ಎಂಬ ಆರೋಪವನ್ನು ಧ್ರುವ ಸಾಹಾ ಮಾಡಿದ್ದರು. ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಜೂತೆಗೆ ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ನಾಲ್ಕು ಟ್ವೀಟ್‌ಗಳನ್ನು ಮಾಡಿರುವ ಸುವೆಂದು ಅಧಿಕಾರಿ: ಮೊದಲ ಟ್ವೀಟ್‌ನಲ್ಲಿ ಮಮತಾ ಬ್ಯಾನರ್ಜಿ ಚೆಕ್ ಹಸ್ತಾಂತರಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರ ಜೂತೆ ಚೆಕ್‌ನ ಫೋಟೋವನ್ನು ಲಗತ್ತಿಸಿದ್ದಾರೆ. ಆ ಟ್ವೀಟ್‌ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೋಗ್ಟುಯಿ ಹತ್ಯೆಯ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಅಕ್ಷರ ದಾಸೋಹದ ನಿಧಿಯಿಂದ ಹಣವನ್ನು ನೀಡಿದ್ದಾರೆ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. ಇದು ಆರ್ಥಿಕ ಅಪರಾಧ ಎಂದು ಅವರು ಟೀಕಿಸಿದ್ದಾರೆ.
ಎರಡನೇ ಟ್ವೀಟ್‌ನಲ್ಲಿ, ಅವರು ಮುಖ್ಯಮಂತ್ರಿ ಚೆಕ್ ಹಸ್ತಾಂತರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಪಶ್ಚಿಮ ಬಂಗಾಳ ಸರ್ಕಾರವು ದಿವಾಳಿಯಾಗಿದೆ ಎಂದು ಅವರು ಬರೆದಿದ್ದಾರೆ. ತುರ್ತು ನಿಧಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಹಣವಿಲ್ಲ. ಅದರ ಹೊರತಾಗಿಯೂ ಭ್ರಷ್ಟಾಚಾರ ನಡೆಯುತ್ತಿದೆ. ಮೂರನೇ ಟ್ವೀಟ್‌ನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಈ ಕುರಿತು ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಜೂತೆಗೆ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ನಾಲ್ಕನೇ ಟ್ವೀಟ್‌ನಲ್ಲಿ ಅವರು ಪ್ರಧಾನಿ ಕಾರ್ಯಾಲಯ ಮತ್ತು ಶಿಕ್ಷಣ ಸಚಿವಾಲಯದ ಟ್ವಿಟರ್ ಹ್ಯಾಂಡಲ್ ಅನ್ನು ಉಲ್ಲೇಖಿಸಿದ್ದಾರೆ. ಬೊಗ್ಟುಯಿ ಘಟನೆಯ ಸಂತ್ರಸ್ತರ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಮಿಹಿಲಾಲ್ ಶೇಖ್ ಅವರು ಯಾವ ಮೂಲದಿಂದ ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕರ್ನಾಟಕದಲ್ಲಿ ಬಿಜೆಪಿ ಹಿಡಿತ ಕಳೆದುಕೊಳ್ಳುತ್ತಿದೆ: ಶರದ್ ಪವಾರ್ ಭವಿಷ್ಯ