ಸೂರತ್ (ಗುಜರಾತ್): ಪುಟಾಣಿಗಳ ನೆಚ್ಚಿನ ಹೀರೋಗಳಾಗಿದ್ದ ಡಿಸ್ನಿ ವರ್ಡ್ನ ಮಿಕ್ಕಿ ಮೌಸ್ ಮತ್ತು ಮಿನ್ನಿ ಮೌಸ್ ಈಗ ಕೋವಿಡ್ ರೋಗಿಗಳ ಮುಖದಲ್ಲಿ ನಗು ತರಿಸುವ ಕಾರ್ಯ ಮಾಡುತ್ತಿವೆ.
ಸೂರತ್ನ ಅಟಲ್ ಜಿ ಕೋವಿಡ್ ಕೇರ್ ಸೆಂಟರ್ಗೆ ಆಗಮಿಸಿದ ಮಿಕ್ಕಿ ಮತ್ತು ಮಿನ್ನಿ ಮೌಸ್ ಅಲ್ಲಿನ ಕೋವಿಡ್ ಸೋಂಕಿತರ ಮುಂದೆ ಸಖತ್ ಸ್ಟೆಪ್ಸ್ ಹಾಕಿ ರಂಜಿಸಿವೆ. ಕೊರೊನಾ ರೋಗಿಗಳ ಮಾನಸಿಕ ಒತ್ತಡ ನಿವಾರಿಸಲು ಪ್ರತಿ ರೋಗಿಯ ಬಳಿ ತೆರಳಿ ನೃತ್ಯ ಮಾಡಿವೆ.
ಹೆಲ್ಪಿಂಗ್ ಹ್ಯಾಂಡ್ಸ್ ಎಂಬ ಸಂಸ್ಥೆಯ ಯುವಕರು ಈ ವಿಭಿನ್ನ ಪ್ರಯತ್ನ ಮಾಡಿದ್ದು, ಕೋವಿಡ್ ರೋಗಿಗಳ ಭಯ ಹೋಗಲಾಡಿಸಿ ಅವರಲ್ಲಿ ನಗು ಮೂಡಿಸಲು ಮುಂದಾಗಿದ್ದಾರೆ. ಇದಿಷ್ಟೇ ಅಲ್ಲ ರೋಗಿಗಳಿಗೆ ಹಣ್ಣು-ಹಂಪಲು ಸಹ ನೀಡಿ ರೋಗಿಗಳ ಸಂತೈಸಿದ್ದಾರೆ.