ETV Bharat / bharat

ಅಮರಾವತಿಯ ಬಿಹಾಲಿ ಹಳ್ಳಿಯಲ್ಲಿ ಮನೆ ಮನೆಯಲ್ಲೂ ಬಿದಿರು ತಯಾರಿಕೆ - Melghat Tiger Reserve

ಮಹಾರಾಷ್ಟ್ರದ ಬಿಹಾಲಿಯ ಹಳ್ಳಿಯಲ್ಲಿ ಮನೆ ಮನೆಯಲ್ಲೂ ಬಿದಿರು ತಯಾರಿಕೆ ನಡೆಯುತ್ತಿದೆ.

ಅಮರಾವತಿಯ ಬಿಹಾಲಿ ಹಳ್ಳಿಯಲ್ಲಿ ಮನೆ ಮನೆಯಲ್ಲೂ ಬಿದಿರು ತಯಾರಿಕೆ

author img

By

Published : May 17, 2023, 9:28 PM IST

ಮಹಾರಾಷ್ಟ್ರ : ಇಲ್ಲಿನ ಚಿಕಲ್ದಾರ ತಾಲೂಕಿನ ಬಿಹಾಲಿ ಹಳ್ಳಿಯು ಬಿದಿರಿನ ಉತ್ಪನ್ನಗಳ ತಯಾರಿಕೆಯ ಗ್ರಾಮವೆಂದು ಪ್ರಸಿದ್ಧವಾಗಿದೆ. ಬಿದಿರಿನಿಂದ ಬುಟ್ಟಿಗಳು ಹಾಗೂ ಅನೇಕ ಸಣ್ಣ ಮತ್ತು ಆಕರ್ಷಕ ವಸ್ತುಗಳು ಇಲ್ಲಿ ತಯಾರಿಕೆ ನಡೆಸುವುದು ಕಂಡು ಬರುತ್ತವೆ.

ಮೆಲ್ಘಾಟ್ ಅಮರಾವತಿಯ 'ಬಿಹಾಲಿ' ಹಳ್ಳಿಯ ಪ್ರತೀಕ್ ಎಂಬುವವರ ಮನೆಯಲ್ಲಿ ಬಿದಿರಿನಿಂದ ಮಾಡಿದ ಸೂಪ್ ಬಟ್ಟಲುಗಳು ಮತ್ತು ಬುಟ್ಟಿಗಳು ಸೇರಿದಂತೆ ಅನೇಕ ಸಣ್ಣ ಮತ್ತು ಆಕರ್ಷಕವಾದ ವಸ್ತುಗಳು ಕಂಡುಬರುತ್ತವೆ. ಒಟ್ಟು ಸುಮಾರು 170 ಮನೆಗಳನ್ನು ಹೊಂದಿರುವ ಈ ಗ್ರಾಮದಲ್ಲಿ ಒಟ್ಟು 100 ಮನೆಗಳಲ್ಲಿ ಆಕರ್ಷಕ ಬಿದಿರು ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ.

ಬುರಾದ್ ಸಮುದಾಯದಿಂದ ಬೆಳೆದು ಬಂದ ಕಲೆ : ಬುರಾದ್ ಸಮುದಾಯವು ಅನೇಕ ವರ್ಷಗಳಿಂದ ಸಂಪ್ರದಾಯದಂತೆ ಬಿದಿರಿನಿಂದ ಬುಟ್ಟಿ ಮತ್ತು ಇತರ ವಸ್ತುಗಳನ್ನು ತಯಾರಿಸುತ್ತಿದೆ. ಮೆಲ್ಘಾಟ್‌ನಲ್ಲಿ ಬಿಹಾಲಿ ಮತ್ತು ಬುರಾದ್‌ಘಾಟ್‌ನ ಎರಡು ಗ್ರಾಮಗಳಿವೆ. ಅಲ್ಲಿ ಬುರಾದ್ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅಮರಾವತಿ ಧರಣಿ ಮಾರ್ಗದ ಮೊದಲ ಗ್ರಾಮವಾದ ಬಿಹಾಲಿಯಲ್ಲಿ ಬುರುದ್ ಸಮಾಜ ಸಹೋದರರ ಎಲ್ಲಾ 49 ಮನೆಗಳಲ್ಲಿ ಬಿದಿರಿನ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ: ವಿಶ್ವ ಬಿದಿರು ದಿನ: ಬಿದಿರಿನ ಮಹತ್ವ ಹೀಗಿದೆ ತಜ್ಞರ ಅಭಿಮತ

ಮನೆಯ ಸದಸ್ಯರೆಲ್ಲರೂ ಈ ಕೆಲಸದಲ್ಲಿ ನಿರತರು : ಈ ಗ್ರಾಮದಲ್ಲಿ ಬಿದಿರಿನಿಂದ ನಾನಾ ಸಾಮಗ್ರಿಗಳನ್ನು ತಯಾರಿಸುವ ಕೆಲಸ ಮನೆ ಮನೆಯಲ್ಲೂ ನಡೆಯುತ್ತಿರುವುದರಿಂದ ಮನೆಯ ಸದಸ್ಯರೆಲ್ಲರೂ ಈ ಕೆಲಸದಲ್ಲಿ ನಿರತರಾಗಿದ್ದಾರಂತೆ . ಮೆಲ್ಘಾಟ್‌ನ ಕಾಡುಗಳಲ್ಲಿ ಹೇರಳವಾಗಿರುವ ಬಿದಿರನ್ನು ಒಂದಕ್ಕೆ ನಲವತ್ತು ರೂಪಾಯಿಗೆ ಖರೀದಿಸಲಾಗುತ್ತದೆ. ಸಣ್ಣ ಬಿದಿರಿನ ವಸ್ತುಗಳನ್ನು ಪತ್ರವಾಡದ ಹತ್ತಿರದ ವಾರದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

1200 ರೂ ಆದಾಯಗಳಿಸುವ ಬುಟ್ಟಿ ತಯಾರಕರು: ಸಮೀಪದ ಸಣ್ಣ ಮತ್ತು ದೊಡ್ಡ ಹಳ್ಳಿಗಳಲ್ಲಿಯೂ ಈ ವಸ್ತುಗಳಿಗೆ ಬೇಡಿಕೆಯಿದೆ. ಈ ಸಾಮಗ್ರಿಗಳನ್ನು ಮಾರಾಟ ಮಾಡುವುದರಿಂದ ಮನೆಯ ಸದಸ್ಯರೊಬ್ಬರು ವಾರಕ್ಕೆ ಸಾವಿರದಿಂದ ಸಾವಿರದ ಇನ್ನೂರು ರೂಪಾಯಿ ಗಳಿಸುತ್ತಾರೆ.

ಇದನ್ನೂ ಓದಿ: ಆಧುನಿಕ ತಂತ್ರಜ್ಞಾನದ ದಾಳಿಗೆ ಕೊಚ್ಚಿ ಹೋದ ಬಿದಿರು ಉತ್ಪನ್ನ!

ಬಿದಿರು ಖರೀದಿಸಲು ತೊಂದರೆ : ಮೇಲುಘಟ್ಟದಲ್ಲಿ ಬಿದಿರಿನ ದೊಡ್ಡ ಅರಣ್ಯವಿದ್ದರೂ ಈ ಬಿದಿರು ಮೆಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಅದನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಇದರಿಂದ ಬಿದಿರು ಸಿಗದೇ ಪರದಾಡುವಂತಾಗಿದೆ. ಮೆಲ್ಘಾಟ್‌ನಲ್ಲಿ ಕೆಲವು ಸಂಸ್ಥೆಗಳ ಮೂಲಕ ಬಿದಿರಿನ ವಸ್ತುಗಳನ್ನು ಖರೀದಿಸಲಾಗುತ್ತದೆ. ಆದರೆ, ಅವುಗಳ ದರ ಕೈಗೆಟುಕುತ್ತಿಲ್ಲ.

ತೋಟದ ಮನೆ, ಹೋಟೆಲ್​ಗಳಲ್ಲಿ ಬಿದಿರಿನ ಇಂಟೀರಿಯರ್ ವರ್ಕ್​ಗೆ ಬೇಡಿಕೆ: ಈಗ ಹಲವು ಹೋಟೆಲ್, ಬಾರ್​ಗಳಲ್ಲಿ ಬಿದಿರಿನ ಇಂಟೀರಿಯರ್ ಡಿಸೈನಿಂಗ್ ಮಹತ್ವ ಪಡೆದುಕೊಂಡಿದೆ. ಇದರಿಂದ ಗ್ರಾಮದಲ್ಲಿ ಸಿಗುವ ಉದ್ಯೋಗಕ್ಕಿಂತ ಹೆಚ್ಚಿನ ಹಣ ಸಿಗುತ್ತಿದೆ ಎಂದು ರಮೇಶ್ ವಿಜಯ್ಕರ್ ‘ಈಟಿವಿ ಭಾರತ್​' ಜತೆ ಮಾತನಾಡುತ್ತ ಹೇಳಿದರು.

ಇದನ್ನೂ ಓದಿ: ವೈರಾಣು ನಿರೋಧಕ ಶಕ್ತಿ ವೃದ್ಧಿಸಲು ಹಾಪ್‌ಕಾಮ್ಸ್‌ನಲ್ಲಿ ಬಿದಿರಿನ ಹಣ್ಣಿನ ಬುಟ್ಟಿ ಮಾರಾಟ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.