ETV Bharat / bharat

ಈದ್-ಮಿಲಾದ್-ಉನ್-ನಬಿ ಮೆರವಣಿಗೆ ವೇಳೆ ವಿದ್ಯುತ್​ ಸ್ಪರ್ಶಿಸಿ ಯುವಕ ಸಾವು..

author img

By ETV Bharat Karnataka Team

Published : Sep 30, 2023, 7:54 AM IST

Updated : Sep 30, 2023, 10:56 AM IST

ಮಹಾರಾಷ್ಟ್ರದ ಥಾಣೆಯ ಕೋಟರ್ ಗೇಟ್ ಪ್ರದೇಶದಿಂದ ಆರಂಭವಾಗಿದ್ದ ಈದ್ ಮಿಲಾದ್ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ಅಶ್ಫಾಕ್ ಶೇಖ್ (21) ಎಂದು ಗುರುತಿಸಲಾಗಿದೆ. ಅವರು ಮೆರವಣಿಗೆಯಲ್ಲಿ ಎತ್ತರದ ಬಿದಿರಿನ ಮೇಲೆ ಧ್ವಜವನ್ನು ಹಾರಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.

Eid Milad un Nabi procession
ಈದ್-ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ವೇಳೆ ವಿದ್ಯುತ್​ ಸ್ಪರ್ಶಿಸಿ ಯುವಕ ಸಾವು...

ಥಾಣೆ (ಮಹಾರಾಷ್ಟ್ರ): ಪ್ರತಿ ವರ್ಷದಂತೆ ಈದ್ ಮಿಲಾದ್-ಉನ್-ನಬಿಯ ಶುಭ ಸಂದರ್ಭದಲ್ಲಿ ರಝಾ ಅಕಾಡೆಮಿ ಭಿವಂಡಿ ಮತ್ತು ಈದ್ ಮಿಲಾದ್ ಟ್ರಸ್ಟ್ ವತಿಯಿಂದ 19 ನೇ ವಾರ್ಷಿಕ ಮೆರವಣಿಗೆಯನ್ನು ಕೋಟರ್ ಗೇಟ್‌ನಿಂದ ವಿಜೃಂಭಣೆಯಿಂದ ಆರಂಭವಾಗಿಯಿತು. ಆದರೆ, ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಯುವಕನೊಬ್ಬ ಎತ್ತರದ ಬಿದಿರಿನ ಮೇಲೆ ಧ್ವಜವನ್ನು ಹಿಡಿದುಕೊಂಡು ನಿಂತಿದ್ದ. ಅದೇ ಧ್ವಜ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಯುವಕ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಈ ಘಟನೆಯಿಂದಾಗಿ ಯುವಕ ವಾಸಿಸುವ ಪಿರಾನಿ ಪದಾ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಮೃತ ಯುವಕನನ್ನು ಅಶ್ಫಾಕ್ ಶೇಖ್ (21) ಎಂದು ಗುರುತಿಸಲಾಗಿದೆ.

ವರದಿಯ ಪ್ರಕಾರ, ಭಿವಂಡಿ ನಗರದ ಪಿರಾನಿ ಪದಾ ಪ್ರದೇಶದಿಂದ ನೂರಾರು ಯುವಕರು ಈದ್ ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಪಿರಾನಿ ಪದಾದಲ್ಲಿ ವಾಸವಾಗಿರುವ ಅಶ್ಫಾಕ್ ಎಂಬ ಯುವಕ ಕೈಯಲ್ಲಿ ಎತ್ತರದ ಧ್ವಜ ಹಿಡಿದು ಜೋರಾಗಿ ಘೋಷಣೆಗಳನ್ನು ಕೂಗುತ್ತಿದ್ದ. ಅವನ ಕೈಯಲ್ಲಿ ಧ್ವಜವಿತ್ತು. ಮೆರವಣಿಗೆಯಲ್ಲಿ ಪಾಲ್ಗೊಂಡು ಧ್ವಜವನ್ನು ಗಾಳಿಯಲ್ಲಿ ಬೀಸುವಾಗ ಆತನ ಕೈಯಲ್ಲಿದ್ದ ಧ್ವಜ ತಂತಿಗೆ ತಗುಲಿತು. ಇದರಿಂದ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಶೋಕದಲ್ಲಿ ಮುಳುಗಿದ ಮೆರವಣಿಗೆ: ಯುವಕನ ದುರ್ಘಟನೆ ನಡೆದ ತಕ್ಷಣ ಆ ಭಾಗದಲ್ಲಿ ಕೆಲಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಅಶ್ಫಾಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರಿಂದ ಆತನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭಿವಂಡಿಯ ಇಂದಿರಾಗಾಂಧಿ ಉಪಜಿಲಾ ಆಸ್ಪತ್ರೆಗೆ ಅಂಬ್ಯುಲೆನ್ಸ್‌ನಲ್ಲಿ ಕಳುಹಿಸಲಾಗಿತ್ತು. ಈ ಘಟನೆಯ ನಂತರ ಮೆರವಣಿಗೆಯಲ್ಲಿ ಸಂತಾಪ ಸೂಚಿಸಲಾಯಿತು. ಮತ್ತೆ ಕುರಾನ್ ಪಠಣದೊಂದಿಗೆ ಮೆರವಣಿಗೆ ಆರಂಭವಾಯಿತು. ಈ ಮೆರವಣಿಗೆಯಲ್ಲಿ ಭಿವಂಡಿ ನಗರದ ಸುಮಾರು 2ರಿಂದ 3 ಲಕ್ಷ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಶಾಸಕ, ಪೊಲೀಸರೂ ಭಾಗಿ: ಮೆರವಣಿಗೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಕೈಯಲ್ಲಿ ಬಾವುಟ ಹಿಡಿದು ಜೋರಾಗಿ ಘೋಷಣೆಗಳನ್ನು ಕೂಗಿದರು. ಶಾಸಕ ರಯೀಸ್ ಶೇಖ್, ಉಪ ಪೊಲೀಸ್ ಆಯುಕ್ತ ನವನಾಥ ಧವಳೆ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಇದೇ ವೇಳೆ ಹಜರತ್ ಮೌಲಾನಾ ತೌಸಿಫ್ ರಝಾ ಖಾನ್ ಅವರನ್ನು ಭವ್ಯ ಮೆರವಣಿಗೆ ನಡೆಸಿ ಆಶೀರ್ವಾದ ಪಡೆದರು.

ಇದನ್ನೂ ಓದಿ: ಜಂಗ್​ಪುರ ಜ್ಯುವೆಲ್ಲರ್​ನಿಂದ ಚಿನ್ನ ಕಳವು ಪ್ರಕರಣ: ಛತ್ತೀಸ್​ಗಢದ ಮೂವರು ಆರೋಪಿಗಳನ್ನು ಬಂಧಿಸಿದ ದೆಹಲಿ ಪೊಲೀಸರು

Last Updated : Sep 30, 2023, 10:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.