ETV Bharat / bharat

ಎನ್‌ಸಿಪಿಯ ನೂತನ ರಾಜ್ಯಾಧ್ಯಕ್ಷರಾಗಿ ಸುನೀಲ್ ತಟ್ಕರೆ, ಮುಖ್ಯ ಸಚೇತಕರಾಗಿ ಅನಿಲ್ ಪಾಟೀಲ್ ನೇಮಕ.. ಅಜಿತ್​ ಪವಾರ್​ ಘೋಷಣೆ - Sunil Tatkare Appointed as new state President

ಎನ್‌ಸಿಪಿಯ ನೂತನ ರಾಜ್ಯಾಧ್ಯಕ್ಷರಾಗಿ ಸುನೀಲ್ ತಟ್ಕರೆ, ಮುಖ್ಯ ಸಚೇತಕರಾಗಿ ಅನಿಲ್ ಪಾಟೀಲ್ ನೇಮಕ ಮಾಡಲಾಗಿದೆ.

Etv Bharat
ಎನ್‌ಸಿಪಿಯ ನೂತನ ರಾಜ್ಯಾಧ್ಯಕ್ಷರಾಗಿ ಸುನೀಲ್ ತಟ್ಕರೆ, ಮುಖ್ಯ ಸಚೇತಕರಾಗಿ ಅನಿಲ್ ಪಾಟೀಲ್ ನೇಮಕ.. ಅಜಿತ್​ ಪವಾರ್​ ಘೋಷಣೆ
author img

By

Published : Jul 3, 2023, 6:07 PM IST

Updated : Jul 3, 2023, 6:30 PM IST

ಮುಂಬೈ (ಮಹಾರಾಷ್ಟ್ರ): ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಎನ್​ಸಿಪಿಯ ನೂತನ ರಾಜ್ಯಾಧ್ಯಕ್ಷರಾಗಿ ಸುನೀಲ್ ತಟ್ಕರೆ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ನಾಯಕ ಪ್ರಫುಲ್ ಪಟೇಲ್ ಘೋಷಣೆ ಮಾಡಿದ್ದಾರೆ. ಪಕ್ಷದಲ್ಲಿ ಸಂಘಟನಾ ಬದಲಾವಣೆ ಮಾಡುವ ಅಧಿಕಾರ ಸುನಿಲ್ ತಟ್ಕರೆ ಅವರಿಗೆ ಇರುತ್ತದೆ ಎಂದು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ.

ಇನ್ನೂ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿಯ ಮುಖ್ಯ ಸಚೇತಕರಾಗಿ ಅನಿಲ್ ಭೈದಾಸ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ನಾಯಕ ಪ್ರಫುಲ್ ಪಟೇಲ್ ತಿಳಿಸಿದ್ದಾರೆ. ಪಕ್ಷವು ಅಜಿತ್ ಪವಾರ್ ಅವರನ್ನು ವಿಧಾನಸಭೆಯ ನಾಯಕರನ್ನಾಗಿ ನೇಮಿಸಲಾಗಿದೆ. ರಾಷ್ಟ್ರೀಯವಾದಿ ಮಹಿಳಾ ಪ್ರಾದೇಶಿಕ ಅಧ್ಯಕ್ಷರಾಗಿ ರೂಪಾಲಿ ಚಾಕಂಕರ್ ಆಯ್ಕೆಯಾಗಿದ್ದಾರೆ.

  • Maharashtra | Sunil Tatkare appointed as new state president of Nationalist Congress Party, announces party leader Praful Patel. pic.twitter.com/GSgHl8zOIN

    — ANI (@ANI) July 3, 2023 " class="align-text-top noRightClick twitterSection" data=" ">

'ರಾಷ್ಟ್ರೀಯ ಅಧ್ಯಕ್ಷರಾಗಿ ಶರದ್ ಪವಾರ್ ಮುಂದುವರೆಯಲಿದ್ದಾರೆ': ಎನ್‌ಸಿಪಿಯ ರಾಜ್ಯಾಧ್ಯಕ್ಷರ ಜವಾಬ್ದಾರಿಯನ್ನು ನಾನು ಸ್ವೀಕರಿಸಿದ್ದೇನೆ ಎಂದು ಸುನೀಲ್ ತಟ್ಕರೆ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಪಕ್ಷವನ್ನು ಬಲಪಡಿಸುತ್ತೇನೆ. ಪಕ್ಷದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಎಲ್ಲ ಶಾಸಕರು ಹಾಗೂ ಜಿಲ್ಲಾ ಪರಿಷತ್ ಮುಖಂಡರ ಸಭೆಯನ್ನೂ ಕರೆದಿದ್ದೇನೆ. ನ್ಯಾಷನಲಿಸ್ಟ್ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಶರದ್ ಪವಾರ್ ಮುಂದುವರಿಯಲಿದ್ದಾರೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಚುನಾವಣಾ ಆಯೋಗವು ಪಕ್ಷದ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.

  • I have taken over as the State president of the Nationalist Congress Party. I will strengthen the party in Maharashtra. I have taken into confidence all leaders of the party. I have also called a meeting of all the legislators and zila parishad leaders: Sunil Tatkare, NCP-Ajit… pic.twitter.com/oeO0rIzoFy

ಜಯಂತ್ ಪಾಟೀಲ್, ಜಿತೇಂದ್ರ ಅವ್ಹಾದ್​ಗೆ ಅನರ್ಹತೆ ಪತ್ರ: ಬಹುತೇಕ ಶಾಸಕರು ನಮ್ಮೊಂದಿಗಿರುವುದರಿಂದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದು ಅಜಿತ್ ಪವಾರ್ ಹೇಳಿದರು. ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಶರದ್ ಪವಾರ್​ಗೆ ಗುರುದಕ್ಷಿಣೆ ನೀಡಿದ್ದೇವೆ. ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಅವ್ಹಾದ್ ಅವರನ್ನು ಅನರ್ಹಗೊಳಿಸಿದ ಪತ್ರವನ್ನು ವಿಧಾನಸಭೆ ಸ್ಪೀಕರ್‌ಗೆ ಒಂಬತ್ತು ಶಾಸಕರ ವಿರುದ್ಧ ಕ್ರಮದ ಹಿನ್ನೆಲೆ ನೀಡಲಾಗಿದೆ ಎಂದು ಅಜಿತ್ ಪವಾರ್ ಈ ವೇಳೆ ಹೇಳಿದರು. ಜುಲೈ 5 ರಂದು ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಗೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಆಗಮಿಸುವಂತೆ ಅಜಿತ್ ಪವಾರ್ ಮನವಿ ಮಾಡಿದ್ದಾರೆ.

'ಬಹುತೇಕ ಶಾಸಕರು ನಮ್ಮೊಂದಿಗಿದ್ದಾರೆ': ಪ್ರಫುಲ್ ಪಟೇಲ್ ಮಾತನಾಡಿ, 'ಅಜಿತ್ ಪವಾರ್ ಅವರ ನಿರ್ಧಾರವನ್ನು ಹಲವು ನಾಯಕರು ಬೆಂಬಲಿಸಿದ್ದಾರೆ. ನಾವು ಪಕ್ಷವಾಗಿರುವುದರಿಂದ ಅಂಕಿ- ಅಂಶಗಳನ್ನು ಹೇಳುವುದಿಲ್ಲ. ಬಹುತೇಕ ಶಾಸಕರು ನಮ್ಮೊಂದಿಗಿದ್ದಾರೆ. ಪಕ್ಷ ಮತ್ತು ನಿರ್ಧಾರದ ಬಗ್ಗೆ ವಾದ ಮಾಡದಿರಲು ಪ್ರಯತ್ನಿಸುತ್ತೇವೆ ಎಂದರು.

ಇನ್ನೊಂದು ಕಡೆ, ಪಕ್ಷ ವಿರೋಧಿ ಚಟುವಟಿಕೆಗಾಗಿ ಸಂಸದರಾದ ಸುನೀಲ್ ತಟ್ಕರೆ ಮತ್ತು ಪ್ರಫುಲ್ ಪಟೇಲ್ ಅವರನ್ನು ಪಕ್ಷದಿಂದ ತೆಗೆದುಹಾಕುವುದಾಗಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಸೋಮವಾರ ಘೋಷಿಸಿದ್ದಾರೆ. ಈ ಘೋಷಣೆ ಬೆನ್ನಲ್ಲೇ ಅಜಿತ್​ ಪವಾರ್​ ಎನ್​ಸಿಪಿಗೆ ಹೊಸ ರಾಜ್ಯಾಧ್ಯಕ್ಷರನ್ನು ಘೋಷಣೆ ಮಾಡಿದ್ದಾರೆ.

ತಟ್ಕರೆ ಮತ್ತು ಪಟೇಲ್ ಅವರನ್ನು ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಿದಾಗಿನಿಂದ ತಮಗೆ ಅಸಮಾಧಾನವಿದೆ ಎಂದು ಪವಾರ್ ಭಾನುವಾರ ಹೇಳಿದ್ದರಿಂದ ಇಬ್ಬರು ನಾಯಕರ ವಿರುದ್ಧ ಕ್ರಮ ನಿರೀಕ್ಷಿಸಲಾಗಿತ್ತು "ಆದರೆ ಅವರು ಪಕ್ಷದ ಅಧ್ಯಕ್ಷರ ಮಾರ್ಗಸೂಚಿಗಳನ್ನು ತ್ಯಜಿಸಿ ತಪ್ಪು ದಾರಿ ಹಿಡಿದಿದ್ದಾರೆ". ಅಜಿತ್ ಮತ್ತು ಇತರ ಎಂಟು ಎನ್‌ಸಿಪಿ ಶಾಸಕರು ಪಕ್ಷಾಂತರಗೊಂಡು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ "ಅವರಿಗೆ ಆ ಸ್ಥಾನದಲ್ಲಿ ಉಳಿಯಲು ಯಾವುದೇ ಹಕ್ಕಿಲ್ಲ" ಎಂದು ಎನ್‌ಸಿಪಿ ಮುಖ್ಯಸ್ಥ ಶರದ್​ ಪವಾರ್​​ ಭಾನುವಾರ ಹೇಳಿದ್ದರು.

ಇಂದು ಮಹಾರಾಷ್ಟ್ರದ ಕರಾಡ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್, ಅಜಿತ್ ಪವಾರ್ ಹೆಸರನ್ನು ಹೇಳದೇ, ಮಹಾರಾಷ್ಟ್ರದ ಜನರು "ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ" ಬಲಿಯಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಅಜಿತ್​​ಗೆ ನನ್ನ ಬೆಂಬಲ ಇದೇ ಎನ್ನುವವರ ತಲೆಕೆಟ್ಟಿದೆ.. ಶರದ್​ ಪವಾರ್​ ಗರಂ.. ಬಿಜೆಪಿ ವಿರುದ್ಧ ವಾಗ್ದಾಳಿ!

Last Updated : Jul 3, 2023, 6:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.