ETV Bharat / bharat

ಶಿಂಧೆ ನೇತೃತ್ವದ ಮಹಾ ಸರ್ಕಾರ 15 ರಿಂದ 20 ದಿನಗಳಲ್ಲಿ ಪತನ: ಸಂಜಯ್ ರಾವತ್

ಸಿಎಂ ಏಕನಾಥ್​ ಶಿಂಧೆ ಸರ್ಕಾರದ ಬಗ್ಗೆ ಶಿವಸೇನೆ ನಾಯಕ ಸಂಜಯ್ ರಾವತ್ ಹೊಸ ಬಾಂಬ್​ ಸಿಡಿಸಿದ್ದಾರೆ.

ಸಂಜಯ್ ರಾವತ್
ಸಂಜಯ್ ರಾವತ್
author img

By

Published : Apr 23, 2023, 5:18 PM IST

ಜಲಗಾಂವ್​ (ಮಹಾರಾಷ್ಟ್ರ): ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮುಂದಿನ 15-20 ದಿನಗಳಲ್ಲಿ ಪತನವಾಗಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಭಾನುವಾರ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ ಅವರು, ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ 16 ಶಿವಸೇನೆಯ (ಶಿಂಧೆ ಪಕ್ಷದ) ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿ ಸೇರಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ರಾಜ್ಯಸಭಾ ಸದಸ್ಯರು ಉಲ್ಲೇಖಿಸಿದ್ದಾರೆ. ತಮ್ಮ ಪಕ್ಷವು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದೆ ಮತ್ತು ನ್ಯಾಯ ಸಿಗುತ್ತದೆ ಎಂದು ನಿರೀಕ್ಷಿಸುತ್ತಿದೆ ಎಂದು ಹೇಳಿದರು. ಅಸ್ತಿತ್ವದಲ್ಲಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ 40 ಶಾಸಕರ ಸರ್ಕಾರ 15-20 ದಿನಗಳಲ್ಲಿ ಪತನವಾಗಲಿದೆ. ಈ ಸರ್ಕಾರದ ಡೆತ್ ವಾರಂಟ್ ಹೊರಡಿಸಲಾಗಿದೆ. ಇದಕ್ಕೆ ಯಾರು ಸಹಿ ಹಾಕುತ್ತಾರೆ ಎಂಬುದನ್ನು ಈಗ ನಿರ್ಧರಿಸಲಾಗುವುದು ಎಂದು ರಾವತ್ ಹೇಳಿದ್ದಾರೆ.

ಫೆಬ್ರವರಿಯಲ್ಲಿ ಶಿಂಧೆ ಸರ್ಕಾರ ಪತನವಾಗಲಿದೆ ಎಂದು ಶಿವಸೇನಾ ನಾಯಕ ಈ ಹಿಂದೆ ಹೇಳಿಕೊಂಡಿದ್ದರು. ಕಳೆದ ವರ್ಷ ಜೂನ್‌ನಲ್ಲಿ ಶಿಂಧೆ ಮತ್ತು 39 ಶಾಸಕರು ಶಿವಸೇನಾ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು. ಇದರ ಪರಿಣಾಮವಾಗಿ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ (ಎನ್‌ಸಿಪಿ ಮತ್ತು ಕಾಂಗ್ರೆಸ್ ಅನ್ನು ಸಹ ಒಳಗೊಂಡಿದೆ) ಪಕ್ಷದ ವಿಭಜನೆ ಮತ್ತು ಪತನಕ್ಕೆ ಕಾರಣವಾಯಿತು.

ಇಂದು ಜಲಗಾಂವ್‌ನಲ್ಲಿ ಉದ್ಧವ್ ಠಾಕ್ರೆ ಸಭೆ.. ಮಾಜಿ ಮುಖ್ಯಮಂತ್ರಿ ಶಿವಸೇನಾ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಇಂದು ಜಲಗಾಂವ್‌ನ ಪಚೋರಾದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದಾರೆ. ಈ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿತ್ತು. ಆದರೆ, ಇಬ್ಬರ ನಡುವಿನ ಜಗಳ ತಾರಕಕ್ಕೇರಿರುವಾಗಲೇ ಎಲ್ಲ ರಾಜಕೀಯ ವಲಯಗಳ ಗಮನ ಠಾಕ್ರೆ ಕಡೆಗೆ ನೆಟ್ಟಿದೆ. ಉದ್ಧವ್ ಠಾಕ್ರೆ ಬೆಳಗ್ಗೆ 11 ಗಂಟೆಗೆ ಮುಂಬೈನಿಂದ ಖಾಸಗಿ ವಿಮಾನದಿಂದ ಜಲಗಾಂವ್‌ಗೆ ತೆರಳಿ ಮಧ್ಯಾಹ್ನ 12 ಗಂಟೆಗೆ ಜಲಗಾಂವ್ ವಿಮಾನ ನಿಲ್ದಾಣ ತಲುಪಿದ್ದಾರೆ. ನಂತರ ಅವರ ವಾಹನವು ಪಚೋರಾಗೆ ತಲುಪಿತು. ಮಧ್ಯಾಹ್ನ ಒಂದು ಗಂಟೆಗೆ ಪಚೋರಾ ಪಟ್ಟಣದ ವರ್ಖೇಡಿ ಫಟಾದಿಂದ ಮಹಾರಾಣಾ ಪ್ರತಾಪ್ ಚೌಕ್ ವರೆಗೆ ಮೋಟಾರ್ ಸೈಕಲ್ ರ್‍ಯಾಲಿ ನಡೆಯಿತು.

ನಿರ್ಮಲ್ ಸೀಡ್ಸ್ ರೆಸ್ಟ್ ಹೌಸ್​ನಲ್ಲಿ ಮಧ್ಯಾಹ್ನ 2 ರಿಂದ 4:30 ರವರೆಗೆ ಊಟ ಮತ್ತು ಶಿವಸೈನಿಕ ಪದಾಧಿಕಾರಿಗಳಿಗೆ ಸಮಯವನ್ನು ಮೀಸಲಿಡಲಾಗಿತ್ತು. ಸಭೆಯ ಪೂರ್ವ ತಂತ್ರವನ್ನು ಈ ಸಮಯದಲ್ಲಿ ನಿರ್ಧರಿಸಲಾಗುತ್ತದೆ. ಸದ್ಯ ಜಲಗಾಂವ್ ಜಿಲ್ಲೆಯ ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಭಾರತದ ಮೊದಲ ಅತ್ಯಾಧುನಿಕ ಪ್ರಯೋಗಾಲಯದ ಉದ್ಘಾಟನೆ ಮತ್ತು ಮಾಜಿ ಶಾಸಕ ಆರ್.ಒ. ಪಾಟೀಲ್ ಅವರ ಪ್ರತಿಮೆಯನ್ನು ಉದ್ಧವ್ ಠಾಕ್ರೆ ಅನಾವರಣಗೊಳಿಸಲಿದ್ದಾರೆ. ಅವರು ಭಾಷಣ ಮಾಡಲು ಸಂಜೆ ಏಳು ಗಂಟೆಗೆ ಸಭೆಯ ಸ್ಥಳಕ್ಕೆ ತಲುಪಲಿದ್ದಾರೆ.

ಇದನ್ನೂ ಓದಿ: ಪಂಜಾಬ್‌ನ ಖಲಿಸ್ತಾನಿ ಬೆಂಬಲಿಗ ಅಮೃತ್‌ಪಾಲ್‌ ಸಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.