ಪುಣೆ (ಮಹಾರಾಷ್ಟ್ರ): ಲೋನಾವಾಲಾ ಬಳಿಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಮೇಲ್ಸೇತುವೆಯಲ್ಲಿ ತೈಲ ಟ್ಯಾಂಕರ್ ಅಪಘಾತಕ್ಕೀಡಾಗಿ (Oil Tanker Fire) ಬೆಂಕಿ ಹೊತ್ತಿಕೊಂಡ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ಸೇತುವೆಯ ಕೆಳಗಿನ ಭಾಗದಲ್ಲೂ ಅಪಘಾತಗಳು ಸಂಭವಿಸಿವೆ ಎಂಬ ಮಾಹಿತಿ ಹೊರಬೀಳುತ್ತಿದೆ. ಈ ಅಪಘಾತದಲ್ಲಿ 12 ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ಅಗ್ನಿ ಅವಘಡದಿಂದಾಗಿ ರಕ್ಷಣಾ ಕಾರ್ಯಾಚರಣೆಯು ಯುದ್ಧೋಪಾದಿಯಲ್ಲಿ ನಡೆಯುತ್ತಿದ್ದು, ಸದ್ಯ ಲೋನಾವಾಲಾ ನಗರದಿಂದ ವಾಹನ ಸಂಚಾರವನ್ನು ಬದಲಿಸಲಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಬಹುದು. ಆದ್ದರಿಂದ ರಕ್ಷಣಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ.
ಸೇತುವೆ ಕೆಳಗೆ ಮತ್ತೊಂದು ಅಪಘಾತ: ಮಂಗಳವಾರ ಮೇಲ್ಸೇತುವೆ ಆಯಿಲ್ ಟ್ಯಾಂಕರ್ವೊಂದು ರಸ್ತೆಯ ಮೇಲೆ ಉರುಳಿ ಬಿದ್ದಿದೆ. ಈ ವೇಳೆ ಆಯಿಲ್ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡಿದೆ. ವಾಹನದಲ್ಲಿ ಆಯಿಲ್ ಇದ್ದ ಕಾರಣ ಬೆಂಕಿ ಜ್ವಾಲೆ ರಸ್ತೆ ತುಂಬೆಲ್ಲ ಹರಿಡಿತ್ತು. ಅಷ್ಟೇ ಅಲ್ಲ, ವಾಹನದಲ್ಲಿದ್ದ ಆಯಿಲ್ ಸೇತುವೆ ಮೇಲಿಂದ ಕೆಳ ರಸ್ತೆಯುದ್ದಕ್ಕೂ ಹರಡಿದೆ. ಹೀಗಾಗಿ ಕೆಳ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಮಧ್ಯೆ ಅಪಘಾತ ಸಂಭವಿಸಿರಬಹುದೆಂಬ ಅನುಮಾನ ಮೂಡಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ಬಳಿಕವೇ ಅಪಘಾತದ ನಿಖರ ಕಾರಣ ತಿಳಿದು ಬರಲಿದೆ.