ETV Bharat / bharat

ಮರ್ಯಾದಾಗೇಡು ಹತ್ಯೆ ಪ್ರಕರಣ: ಅಂತರಧರ್ಮೀಯ ಪ್ರೇಮ ವಿವಾಹವಾಗಿದ್ದಕ್ಕೆ ಜೋಡಿ ಕೊಲೆ, ಮೂವರು ಆರೋಪಿಗಳು ಅರೆಸ್ಟ್​... - ವರ್ಷದ ಹಿಂದೆ ಪ್ರೇಮ ವಿವಾಹ

Case of Honor Killing: ಮಗನ ಸಹಾಯದಿಂದ ತಂದೆಯೇ ಪುತ್ರಿ ಹಾಗೂ ಅಳಿಯನನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮುಂಬೈನ ಗೋವಂಡಿಯಲ್ಲಿ ಬೆಳಕಿಗೆ ಬಂದಿದೆ. ವರ್ಷದ ಹಿಂದೆ ಪ್ರೇಮ ವಿವಾಹವಾಗಿದ್ದ ಯುವಕ - ಯವತಿಯ ಜೋಡಿ ಕೊಲೆ ಪ್ರಕರಣ ಸಂಚಲನ ಮೂಡಿಸಿದೆ.

Case of Honor Killing
ಮರ್ಯಾದಾಗೇಡು ಹತ್ಯೆ ಪ್ರಕರಣ
author img

By ETV Bharat Karnataka Team

Published : Oct 18, 2023, 1:17 PM IST

ಮುಂಬೈ (ಮಹಾರಾಷ್ಟ್ರ): ಪ್ರೇಮ ವಿವಾಹವಾಗಿದ್ದಕ್ಕೆ ಕೋಪಗೊಂಡ ತಂದೆಯೊಬ್ಬ ಮಗನ ನೆರವಿನಿಂದ ತನ್ನ ಪುತ್ರಿ ಹಾಗೂ ಅಳಿಯನನ್ನು ಕೊಂದು ಹಾಕಿರುವ ಘಟನೆ ಭಾರಿ ಸಂಚಲನ ಮೂಡಿಸಿದೆ. ಈ ಮರ್ಯಾದಾಗೇಡು ಹತ್ಯೆಯ ಘಟನೆ ಮುಂಬೈನ ಗೋವಂಡಿ ಪ್ರದೇಶದಲ್ಲಿ ನಡೆದಿತ್ತು. ಪ್ರೇಮ ವಿವಾಹದ ಹಿನ್ನೆಲೆ ನಡೆದ ಜೋಡಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ಕರಣ್ ರಮೇಶ್ಚಂದ್ರ ಎಂಬ ಹುಡುಗ ಉತ್ತರ ಪ್ರದೇಶದವನು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಹೇಮರಾಜ್ ರಜಪೂತ್ ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ತನಿಖೆಯಿಂದ ಮಾಹಿತಿ ಬಹಿರಂಗ: ಗೋವಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 14ರಂದು ಸುಮಾರು 20 ರಿಂದ 22 ವರ್ಷ ವಯಸ್ಸಿನ ಅಪರಿಚಿತ ಶವ ಪತ್ತೆಯಾಗಿತ್ತು. ಈ ಸಂಬಂಧ ಗೋವಂಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 302, 201ರ ಅಡಿ ಪ್ರಕರಣ ದಾಖಲಾಗಿತ್ತು. ಉಪ ಪೊಲೀಸ್ ಆಯುಕ್ತ ಹೇಮರಾಜ್ ರಜಪೂತ್ ಅವರ ಮಾರ್ಗದರ್ಶನದಲ್ಲಿ ಗೋವಂಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್​ಸ್ಪೆಕ್ಟರ್ ಸುದರ್ಶನ್ ಹೊನ್ವಾಡ್ಕರ್ ತಂಡವು ಈ ಪ್ರಕರಣದ ತನಿಖೆ ನಡೆಸುತ್ತಿದೆ. ತನಿಖೆ ವೇಳೆ, ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೇಮ ವಿವಾಹದ ಹಿನ್ನೆಲೆ ಉತ್ತರ ಪ್ರದೇಶದ ಯುವಕ ಕರಣ್ ರಮೇಶ್ಚಂದ್ರ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದಿದೆ.

ಅಂತರ ಧರ್ಮೀಯ ವಿವಾಹದ ಹಿನ್ನೆಲೆ ಜೋಡಿ ಕೊಲೆ: ''ಅಂತರ ಧರ್ಮೀಯ ವಿವಾಹವಾಗಿದ್ದ ಕಾರಣಕ್ಕೆ ಯುವಕ ಕರಣ್​ ಹಾಗೂ ಯುವತಿ ಗುಲ್ನಾಜ್​ ಅವರನ್ನು ಮಗ ಹಾಗೂ ಆತನ ಸ್ನೇಹಿತರ ಸಹಾಯದಿಂದ ಕೊಲೆ ಮಾಡಿರುವುದಾಗಿ ಆಕೆಯ ತಂದೆ ಒಪ್ಪಿಕೊಂಡಿದ್ದಾನೆ. ತಂದೆಯು ತನ್ನ ಪುತ್ರಿಯನ್ನು ಕೊಂದು ಹಾಕಿ, ಶವ ಮುಚ್ಚಿಟ್ಟಿದ್ದ ಸ್ಥಳವನ್ನು ತೋರಿಸಿದ್ದಾನೆ. ಪೊಲೀಸರು ಯುವತಿಯ ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ'' ಎಂದು ಉಪ ಪೊಲೀಸ್ ಆಯುಕ್ತ ಹೇಮರಾಜ್ ರಜಪೂತ್ ತಿಳಿಸಿದ್ದಾರೆ.

ಅಕ್ಟೋಬರ್ 27ರವರೆಗೆ ಪೊಲೀಸ್ ಕಸ್ಟಡಿಗೆ: ಮರ್ಯಾದಾಗೇಡು ಹತ್ಯೆ ಪ್ರಕರಣದಿಂದ ಮುಂಬೈನಲ್ಲಿ ಆತಂಕ ಮೂಡಿಸಿದೆ. ಈ ಪ್ರಕರಣದಲ್ಲಿ ಕೊಲೆ ಆರೋಪಿ ತಂದೆ ಗೋರಾ ಇಮುದ್ದೀನ್ ಖಾನ್, ಆತನ ಪುತ್ರ ಸಲ್ಮಾನ್ ಖಾನ್ ಹಾಗೂ ಸಲ್ಮಾನ್​ನ ಸ್ನೇಹಿತ ಮೊಹಮ್ಮದ್ ಕೈಫ್ ನೌಶಾದ್ ಖಾನ್ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ಅಕ್ಟೋಬರ್ 27 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಉಪ ಪೊಲೀಸ್ ಆಯುಕ್ತ ಹೇಮರಾಜ್ ರಜಪೂತ್ ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ನಿರೀಕ್ಷಕರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಗಂಡನ ಮನೆಯಲ್ಲಿ ಕಿರುಕುಳ.. ಸಂಗೀತ ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಮಗಳನ್ನು ತವರಿಗೆ ಕರೆತಂದ ತಂದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.