ETV Bharat / bharat

ಮುಂಬೈ ಮೇಲೆ ಉಗ್ರರ ದಾಳಿಯ ಎಚ್ಚರಿಕೆ: ಟ್ವಿಟರ್​​​​​ನಲ್ಲಿ ಬೆದರಿಕೆ ಸಂದೇಶ.. ಪೊಲೀಸರು ಹೇಳಿದ್ದಿಷ್ಟು!

author img

By

Published : Feb 4, 2023, 5:31 PM IST

Updated : Feb 4, 2023, 9:43 PM IST

ಮುಂಬೈನಲ್ಲಿ 26/11 ರೀತಿಯಲ್ಲಿ ಭಯೋತ್ಪಾದಕ ದಾಳಿ ನಡೆಸುವ ಬೆದರಿಕೆ ಹಾಕಲಾಗಿದೆ. ಮುಂಬೈ ಪೊಲೀಸರಿಂದ ಆರಂಭವಾದ ತನಿಖೆ.

A threat message warning terrorist attack
ಮುಂಬೈ ಪೊಲೀಸರಿಂದ ಆರಂಭವಾದ ತನಿಖೆ

ಮುಂಬೈ: ಮುಂಬೈನಲ್ಲಿ 26/11 ರೀತಿಯ ಭಯೋತ್ಪಾದಕ ದಾಳಿ ನಡೆಸುವ ಕುರಿತು ಟ್ವಿಟರ್ ಮೂಲಕ ಶುಕ್ರವಾರ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಭಯೋತ್ಪಾದಕ ದಾಳಿ ಬೆದರಿಕೆಯೊಡ್ಡಿರುವ ಈ ಟ್ವೀಟ್‌ ಖಾತೆಯೂ ಗುಜರಾತ್‌ನಲ್ಲಿರುವ ವ್ಯಕ್ತಿ ಹೆಸರಿನಲ್ಲಿದೆ. ಆ ವ್ಯಕ್ತಿ ಹೆಸರು ಹಾಗೂ ವಿಳಾಸವನ್ನು ಪೊಲೀಸರು ಕಲೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಹುಸಿ ಬೆದರಿಕೆಯಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಗುರುವಾರ ಕೂಡ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಇ - ಮೇಲ್​ವೊಂದು ಬಂದಿದ್ದು, ತಾಲಿಬಾನ್‌ನೊಂದಿಗೆ ಸಂಬಂಧ ಹೊಂದಿರುವವರು ಮುಂಬೈ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಬೆದರಿಕೆ ಬಂದಿತ್ತು. ಇದೀಗ ಮುಂಬೈ ಮೇಲೆ 26-11ರಂತೆ ದಾಳಿ ನಡೆಯಲಿದೆ ಎಂದು ಟ್ವಿಟರ್ ಖಾತೆಯಲ್ಲಿ ಟ್ವೀಟ್ ಬಂದಿದೆ. ಈ ಬಗ್ಗೆ ಅಪರಾಧ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂಬೈ ಜನತೆ ಗಾಬರಿಯಾಗಬಾರದು: ರಾಷ್ಟ್ರೀಯ ತನಿಖಾ ಸಂಸ್ಥೆಗೆ ಅನಾಮಧೇಯ ಇ-ಮೇಲ್ ಬಂದಿತ್ತು. ಮುಂಬೈ ಮೇಲೆ ಬಾಂಬ್ ದಾಳಿಯ ಬೆದರಿಕೆ ಇತ್ತು. ಒಬ್ಬರು ತಾಲಿಬಾನ್ ಎಂದು ಹೇಳಿಕೊಂಡು ಮುಂಬೈ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಎನ್ಐಎ ಮುಂಬೈ ಪೊಲೀಸರಿಗೆ ಈ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಿದೆ. ಈ ಬೆದರಿಕೆಯ ನಂತರ, ಪೊಲೀಸರು ಅಲರ್ಟ್ ಆಗಿದ್ದಾರೆ. ಮುಂಬೈಗೆ ಯಾವುದೇ ರೀತಿಯ ಅಪಾಯವಿಲ್ಲ. ಮುಂಬೈ ಜನತೆ ಗಾಬರಿಯಾಗಬಾರದು ಎಂದು ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಜನರಲ್ಲಿ ಧೈರ್ಯ ತುಂಬಿದ್ದಾರೆ.

ಪೊಲೀಸರಿಗೆ ಇಂತಹ ಬೆದರಿಕೆಗಳು ಬರುತ್ತಲೇ ಇರುತ್ತವೆ. ನಾವು ಸದಾ ಜಾಗೃತರಾಗಿದ್ದೇವೆ. ಬೆದರಿಕೆಗಳು ಬಂದಾಗ ನಾವು ತನಿಖೆ ಮಾಡುತ್ತೇವೆ. ಯಾವುದೇ ಅಪಾಯವಿಲ್ಲ. ಜನರು ಯಾವುದೇ ರೀತಿ ಭಯಪಡಬೇಡಿ. ಆದ್ರೆ ನಿವಾಸಿಗಳು ಜಾಗರೂಕರಾಗಿರಬೇಕು. ಅಪರಿಚಿತ ಹಾಗೂ ಅನುಮಾನಾಸ್ಪದ ವಸ್ತುಗಳು ಕಂಡುಬಂದಲ್ಲಿ ಮುಂಬೈ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ತಿಳಿಸಿದರು.

ನಿನ್ನೆಯೂ ಬಂದಿತ್ತು ಭಯೋತ್ಪಾದಕ ದಾಳಿ ಬೆದರಿಕೆ: ತಾಲಿಬಾನ್​ನಿಂದ ಮುಂಬೈ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಬಂದಿತ್ತು. ಮುಂಬೈ ಪೊಲೀಸರ ಪ್ರಕಾರ, ಈ ಬೆದರಿಕೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಇ-ಮೇಲ್ ಮೂಲಕ ನೀಡಲಾಗಿತ್ತು. ಮುಂಬೈನ ಎನ್‌ಐಎ ಕಚೇರಿಗೆ ಗುರುವಾರ ಈ ಇಮೇಲ್ ಬಂದಿದೆ. ಇದರ ಆಧಾರದ ಮೇಲೆ ಮುಂಬೈ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ಎಚ್ಚರಿಕೆ ಕೊಡಲಾಗಿತ್ತು.

ತಾಲಿಬಾನ್‌ನೊಂದಿಗೆ ನಂಟು ಹೊಂದಿರುವ ಯಾರಾದರೂ ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸುತ್ತಾರೆ ಎಂದು ಮೇಲ್‌ನಲ್ಲಿ ತಿಳಿಸಲಾಗಿತ್ತು. ಈ ಮೇಲ್‌ನ ಐಪಿ (ಇಂಟರ್ನೆಟ್ ಪ್ರೋಟೋಕಾಲ್) ವಿಳಾಸವನ್ನು ಪಾಕಿಸ್ತಾನದ ಕರಾಚಿ ನಗರದ ಬಗ್ಗೆ ಹೇಳಲಾಗುತ್ತಿದೆ. ಕಳೆದ ತಿಂಗಳು ಕೂಡ ಎನ್‌ಐಎಗೆ ಇದೇ ರೀತಿಯ ಮೇಲ್ ಬಂದಿತ್ತು. ಆಗಲೂ ಪೊಲೀಸರು ತನಿಖೆ ನಡೆಸಿದ್ದರು. ಆದರೆ, ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಮುಂಬೈ ಈ ಹಿಂದೆ ಹಲವು ಬಾರಿ ಭಯೋತ್ಪಾದಕ ದಾಳಿಗೆ ಒಳಗಾಗಿದೆ. ಹೀಗಾಗಿ ಅಲ್ಲಿನ ಜನ ತುಸು ಭೀತಿಗೊಳಗಾಗಿರುವುದಂತೂ ನಿಜ

ಹಾಜಿ ಆಲಿ ದರ್ಗಾಕ್ಕೆ ಬಿಗಿ ಭದ್ರತೆ ನೀಡಲಾಗಿತ್ತು: ಕೆಲವು ದಿನಗಳ ಹಿಂದೆ ಮುಂಬೈ ದಾಳಿ ಮಾದರಿ ಮತ್ತೊಂದು ದಾಳಿ ನಡೆಸುವ ಬೆದರಿಕೆ ಕರೆ ಬಂದ ಬೆನ್ನಲ್ಲೇ ಅಂಬಾನಿ ಕೊಲ್ಲುವ ಬೆದರಿಕೆಯೂ ಬಂದಿತ್ತು. ಹಾಜಿ ಅಲಿ ದರ್ಗಾದ ಮೇಲೆ ದಾಳಿ ನಡೆಸುವ ಬೆದರಿಕೆ ಕರೆ ಕೂಡಾ ಬಂದಿತ್ತು. ಈ ಕರೆ ಬಂದಾಕ್ಷಣ ಪೊಲೀಸರು ಮತ್ತು ಬಿಡಿಡಿಎಸ್​ ಅಲರ್ಟ್​ ಆಗಿದ್ದರು. ಕಂಟ್ರೋಲ್ ರೂಂನಿಂದ ಆದೇಶ ಬಂದ ತಕ್ಷಣ ಕಾನ್ವೆಂಟ್ ವ್ಯಾನ್ ಕೂಡ ಕರೆಸಲಾಗಿತ್ತು. ಹಾಜಿ ಅಲಿ ದರ್ಗಾ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಎರಡು ಬಾರಿ ಈ ಫೋನ್​ ಕರೆ ಬಂದಿತ್ತು. ಇದರ ಪರಿಶೀಲನೆಗೆ ಮುಂದೆ ಆದಾಗ ಈ ಫೋನ್​ ಸ್ವಿಚ್ಡ್​​ ​​ ಆಫ್​ ಆಗಿತ್ತು.

ಈ ವರ್ಷದ ಆರಂಭದಲ್ಲಿ ಕೂಡಾ ಮುಂಬೈನಲ್ಲಿರು ಧೀರೂಬಾಯಿ ಅಂಬಾನಿ ಇಂಟರ್​ನ್ಯಾಷನಲ್​ ಸ್ಕೂಲ್​ಗೆ ಕೂಡ ಬೆದರಿಕೆ ಕರೆ ಬಂದಿತ್ತು. ಅಪರಿಚಿತ ಬೆದರಿಕೆ ಕರೆಯಿಂದ ಶಾಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮುಂಬೈ ಪೊಲೀಸರು ಮಾಹಿತಿ ಪ್ರಕಾರ, ಶಾಲಾ ಲ್ಯಾಂಡ್​ಲೈನ್​ಗೆ ಸಂಜೆ 4.30ರ ಸುಮಾರಿಗೆ ಕರೆ ಬಂದಿತ್ತು. ಇದೇ ರೀತಿಯ ಕರೆಯನ್ನು ಕಳೆದ ಅಕ್ಟೋಬರ್​ನಲ್ಲಿ ಕೂಡ ಮುಂಬೈ ನಗರ ಪೊಲೀಸರು ಪಡೆದಿದ್ದರು.

ನಗರದ ಏಳು ಪ್ರಮುಖ ಸ್ಥಳಗಳಲ್ಲಿ ಬಾಂಬ್​ ಇಟ್ಟಿರುವ ಕುರಿತು ಅನುಮಾನಾಸ್ಪದ ಕರೆಯನ್ನು ಪಡೆದ ಬಳಿಕ ಎಲ್ಲೆಡೆ ಪರಿಶೀಲನೆ ನಡೆಸಲಾಗಿತ್ತು. ಬಳಿಕ ಇದೊಂದು ಹುಸಿ ಬಾಂಬ್​ ಬೆದರಿಕೆ ಎಂಬುದು ಪತ್ತೆಯಾಗಿತ್ತು.

ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಅಪಘಾತ: ಮಂಗಳೂರಿನ ಮೂವರು ಸಾವು

Last Updated : Feb 4, 2023, 9:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.