ETV Bharat / bharat

ವಿದೇಶಿ ಮಹಿಳಾ ಡಿಜೆ ಮೇಲೆ ಅತ್ಯಾಚಾರ, ಲೈಂಗಿಕ ಶೋಷಣೆ ಆರೋಪ: ಮ್ಯೂಸಿಕ್ ಕಂಪನಿ ಮಾಲೀಕ ಬಂಧನ - Etv Bharat Kannada

Raped on Mexico female DJ in Mumbai: ಮುಂಬೈನ ಮ್ಯೂಸಿಕ್ ಈವೆಂಟ್ ಕಂಪನಿ ಮಾಲೀಕನೊಬ್ಬನ ವಿರುದ್ಧ ಮೆಕ್ಸಿಕೋ​ ಮೂಲದ ವಿದೇಶಿ ಮಹಿಳೆ ಅತ್ಯಾಚಾರ ಹಾಗೂ ಲೈಂಗಿಕ ಶೋಷಣೆ ಆರೋಪ ಮಾಡಿದ್ಧಾರೆ.

Mexican Woman DJ In Mumbai Accuses Music Company Owner Of Rape
ವಿದೇಶಿ ಮಹಿಳಾ ಡಿಜೆ ಮೇಲೆ ಅತ್ಯಾಚಾರ, ಲೈಂಗಿಕ ಶೋಷಣೆ ಆರೋಪ: ಮ್ಯೂಸಿಕ್ ಕಂಪನಿ ಮಾಲೀಕ ಬಂಧನ
author img

By ETV Bharat Karnataka Team

Published : Dec 1, 2023, 4:25 PM IST

ಮುಂಬೈ (ಮಹಾರಾಷ್ಟ್ರ): ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ವಿದೇಶಿ ಮಹಿಳಾ ಡಿಜೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಹಾರಾಷ್ಟ್ರದ ಮುಂಬೈನ ಮ್ಯೂಸಿಕ್ ಈವೆಂಟ್ ಕಂಪನಿ ಮಾಲೀಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯೋಗ ನೀಡುವ ನೆಪದಲ್ಲಿ ಮೆಕ್ಸಿಕೋ​ ಪ್ರಜೆ ಮೇಲೆ ದೈಹಿಕವಾಗಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ಮ್ಯೂಸಿಕ್ ಈವೆಂಟ್ ಕಂಪನಿಯಾದ ಸ್ಲಿಕ್ ಎಂಟರ್‌ಟೈನ್‌ಮೆಂಟ್ ಮಾಲೀಕ ಪ್ರತೀಕ್ ಪಾಂಡೆ ಎಂಬಾತನೇ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದು, 2020ರಲ್ಲಿ ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಇದೀಗ ವಿದೇಶಿ ಮಹಿಳೆ ನೀಡಿದ ದೂರಿನಡಿ ಬಾಂದ್ರಾ ಠಾಣೆಯಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ ಪೊಲೀಸರು, ಈಗಾಗಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಡಿಸೆಂಬರ್ 2ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್​ ಸಂಜಯ್ ಮೋಹಿತೆ ತಿಳಿಸಿದ್ದಾರೆ.

ಮೆಕ್ಸಿಕನ್ ಮಹಿಳೆ ಡಿಜೆಯೊಬ್ಬರು ಮಾಡೆಲ್ ಆಗಲು ಮುಂಬೈಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಪ್ರತೀಕ್​ ಪಾಂಡೆ ಸಂಪರ್ಕಕ್ಕೆ ಬಂದಿದ್ದ. ಆಗ 2019ರಲ್ಲಿ ಮೊದಲಿಗೆ ಆಕೆಯ ಮೊಬೈಲ್​ ನಂಬರ್‌ಗೆ ಆರೋಪಿ ಜೋಕ್ ಕಳುಹಿಸುವ ಮೂಲಕ ಸಲುಗೆ ಬೆಳೆಸಿಕೊಂಡಿದ್ದ. ನಂತರ ಬಾಂದ್ರಾದ ತಮ್ಮ ಮನೆಗೆ ಕರೆಸಿಕೊಂಡು ಉದ್ಯೋಗ ನೀಡುವ ನೆಪದಲ್ಲಿ ದೈಹಿಕವಾಗಿ ಕಿರುಕುಳ ನೀಡಿದ್ದ ಎಂದು ಆರೋಪಿಸಿ ಮಹಿಳೆಯು ಪೊಲೀಸರಿಗೆ ಮೂರು ಪ್ರತ್ಯೇಕ ದೂರುಗಳನ್ನು ನೀಡಿದ್ದಾರೆ.

ಬೆಂಗಳೂರು ಸೇರಿ ಇತರೆಡೆಯೂ ದೌರ್ಜನ್ಯ ಆರೋಪ: ಅಲ್ಲದೇ, ಆರೋಪಿಯು ಉದ್ಯೋಗ ನೀಡುವ ಬದಲಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಒಮ್ಮೆ ಚಲಿಸುತ್ತಿದ್ದ ಆಟೋದಲ್ಲಿ ತನ್ನ ಖಾಸಗಿ ಅಂಗವನ್ನು ಮುಟ್ಟುವಂತೆ ಹೇಳಿ ಕಿರುಕುಳ ಕೊಟ್ಟಿದ್ದ. ಇಷ್ಟೇ ಅಲ್ಲ, ಕೋಲ್ಕತ್ತಾ, ಬೆಂಗಳೂರು, ಇಂದೋರ್ ಮತ್ತು ಅಂತಾರಾಷ್ಟ್ರೀಯ ಸಂಗೀತೋತ್ಸವದಲ್ಲೂ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ದೂರುಗಳಲ್ಲಿ ಹೇಳಲಾಗಿದೆ.

ಆರೋಪಿ ಪ್ರತೀಕ್ ಪಾಂಡೆ ಸಂತ್ರಸ್ತೆಯ ಸ್ನೇಹಿತನಿಗೂ ಕೊಲೆ ಬೆದರಿಕೆ ಹಾಕಿದ್ದ. ಅಸ್ವಾಭಾವಿಕ ಲೈಂಗಿಕ ಕ್ರಿಯೆಗೂ ಆಕೆಯನ್ನು ಒತ್ತಾಯಿಸುತ್ತಿದ್ದ. ಆಕೆಯ ಆಕ್ಷೇಪಾರ್ಹ ಪೋಟೋಗಳನ್ನು ತೆಗೆಯುವುದರೊಂದಿಗೆ ಅಶ್ಲೀಲ ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಸಂತ್ರಸ್ತೆಯ ಪರ ವಕೀಲರು ಹೇಳಿದ್ದಾರೆ.

ವಿದೇಶಿ ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ, ಲೈಂಗಿಕ ಕಿರುಕುಳ, ಹಿಂಬಾಲಿಸುವುದು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್​ಗಳಲ್ಲಿ ಬಾಂದ್ರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಇಸ್ರೇಲಿ ಮಹಿಳೆ ಸಾವು; ಲಿವ್​ಇನ್​ ಪಾರ್ಟ್ನರ್‌ ಆಸ್ಪತ್ರೆಗೆ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.