ETV Bharat / bharat

ಮಗುವನ್ನು ಕೊಂದ ಮಾನಸಿಕ ಅಸ್ವಸ್ಥ: ರೊಚ್ಚಿಗೆದ್ದು ಆರೋಪಿಯನ್ನು ಸಾಯಿಸಿ ಬೆಂಕಿಹಚ್ಚಿದ್ರು ಜನ! - villagers lynched a person and burnt him in Assams Dibrugarh

ಮಾನಸಿಕ ಅಸ್ವಸ್ಥನೋರ್ವ ಮಗುವನ್ನು ಕೊಂದಿದ್ದು, ಇದರಿಂದ ಕುಪಿತರಾದ ಸ್ಥಳೀಯರು ಆರೋಪಿಯನ್ನು ಹೊಡೆದು ಕೊಂದು ಬಳಿಕ ಬೆಂಕಿಹಚ್ಚಿದ್ದಾರೆ.

ಮಗುವನ್ನು ಕೊಂದ ಮಾನಸಿಕ ಅಸ್ವಸ್ಥ
ಮಗುವನ್ನು ಕೊಂದ ಮಾನಸಿಕ ಅಸ್ವಸ್ಥ
author img

By

Published : Mar 13, 2022, 3:45 PM IST

Updated : Mar 13, 2022, 5:16 PM IST

ಮೊರನ್ (ಅಸ್ಸೋಂ) : ಅಸ್ಸೋಂನ ದಿಬ್ರುಗಢ ಜಿಲ್ಲೆಯಲ್ಲಿ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ. ಗ್ರಾಮಸ್ಥರು ವ್ಯಕ್ತಿಯೊಬ್ಬನನ್ನು ಹತ್ಯೆಗೈದು ಬಳಿಕ ಸುಟ್ಟು ಹಾಕಿದ್ದಾರೆ. ಜಿಲ್ಲೆಯ ರಹಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಧಲಜನ್ ಟೀ ಎಸ್ಟೇಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಗುವನ್ನು ಕೊಂದ ಮಾನಸಿಕ ಅಸ್ವಸ್ಥ: ರೊಚ್ಚಿಗೆದ್ದು ಆರೋಪಿಯನ್ನು ಸಾಯಿಸಿ ಬೆಂಕಿಹಚ್ಚಿದ್ರು ಜನ!

ಪ್ರಕರಣ ಹಿನ್ನೆಲೆ:

ಸ್ಥಳೀಯರ ಪ್ರಕಾರ ಸೋನಿತ್ ತಂತಿ ಎಂಬಾತ ನಾಲ್ಕು ವರ್ಷದ ಮಗು ಆಟವಾಡುತ್ತಿದ್ದಾಗ ಕೊಂದಿದ್ದಾನೆ. ಈ ಘಟನೆ ಬಗ್ಗೆ ಎಲ್ಲರಿಗೂ ತಿಳಿದು ಮಾನಸಿಕ ಅಸ್ವಸ್ಥನಾದ ಆತನನ್ನು ಹಿಡಿದು ಥಳಿಸಿದ್ದಾರೆ. ಇದಾದ ನಂತರ ಸಾವಿಗೀಡಾದ ಆತನನ್ನು ಆಕ್ರೋಶದಿಂದ ಸುಟ್ಟು ಹಾಕಿದ್ದಾರೆ.

ಇದನ್ನೂ ಓದಿ: ಎದೆ ಝಲ್​ ಎನ್ನಿಸುವ ದೃಶ್ಯ : ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿದ ಯುವಕ

ಮಗುವಿನ ಕುಟುಂಬದವರು ಸೋನಿತ್ ತಂತಿ ವಿರುದ್ಧ ದಿಬ್ರುಗಢ್ ಜಿಲ್ಲೆಯ ರಹ್ಮರಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

Last Updated : Mar 13, 2022, 5:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.