ಶ್ರೀನಗರ (ಜಮ್ಮು ಕಾಶ್ಮೀರ): ಪಕ್ಷದಲ್ಲಿನ ಬಿಕ್ಕಟ್ಟಿನ ಮಧ್ಯೆಯೇ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ತನ್ನ ಅಧ್ಯಕ್ಷೆ ಮೆಹಬೂಬಾ ಮುಫ್ತಿಯನ್ನು ಮೂರನೇ ಬಾರಿಗೆ ಪಕ್ಷದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ.
ಪಿಡಿಪಿ ವಕ್ತಾರ ಸುಹೇಲ್ ಬುಖಾರಿ ಇ ಬಗ್ಗೆ ಮಾಹಿತಿ ನೀಡಿ, ಮೆಹಬೂಬಾ ಮುಫ್ತಿ ಮೂರು ವರ್ಷಗಳ ಅವಧಿಗೆ ಪಕ್ಷದ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಶ್ರೀನಗರದ ಗುಪ್ಕರ್ ಪ್ರದೇಶದ ಮೆಹಬೂಬಾ ಮುಫ್ತಿಯ ಫೇರ್ ವ್ಯೂ ಸರ್ಕಾರಿ ನಿವಾಸದಲ್ಲಿ ಚುನಾವಣೆ ನಡೆಯಿತು.
ಪಕ್ಷದ ಅಧ್ಯಕ್ಷರಾಗಿ ಮೆಹಬೂಬಾ ಅವರ ಮೂರು ವರ್ಷಗಳ ಅವಧಿ ಕಳೆದ ವರ್ಷ ಅಕ್ಟೋಬರ್ 31 ರಂದು ಕೊನೆಗೊಂಡಿತ್ತು. COVID-19 ಸಾಂಕ್ರಾಮಿಕ ರೋಗದಿಂದಾಗಿ ಈವರೆಗೆ ಚುನಾವಣೆಗಳು ನಡೆದಿರಲಿಲ್ಲ.
2016 ರ ಜನವರಿಯಲ್ಲಿ ನಿಧನರಾದ ಅವರ ತಂದೆ ಮುಫ್ತಿ ಮುಹಮ್ಮದ್ ಸಯೀದ್ ಅವರ ನಂತರ ಮೆಹಬೂಬಾ ಅವರು 2016 ರಿಂದ ಪಕ್ಷದ ಅಧ್ಯಕ್ಷರಾಗಿ ಮುಂದುವರೆದುಕೊಂಡು ಬರುತ್ತಿದ್ದಾರೆ.