ಶ್ರೀನಗರ (ಜಮ್ಮು-ಕಾಶ್ಮೀರ): ಇತ್ತೀಚೆಗೆ ಉಗ್ರರ ದಾಳಿಗೆ ಗುರಿಯಾದ ಕಾಶ್ಮೀರ ಪಂಡಿತ ಕುಟುಂಬದ ನಿವಾಸಕ್ಕೆ ತೆರಳಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಗೆ ಶ್ರೀನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಗೃಹ ಬಂಧನ ವಿಧಿಸಲಾಗಿದೆ. ಭದ್ರತಾ ಕಾರಣದಿಂದ ಮುಫ್ತಿ ಪ್ರವಾಸಕ್ಕೆ ತಡೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-
Placed under house arrest today because I wanted to visit the family of the Kashmiri pandit attacked in Shopian. GOI wilfully spreads fake propaganda about Kashmiri mainstream & muslims responsible for pandit exodus & doesn’t want this fake divisive narrative to be exposed. pic.twitter.com/wRPet5cX98
— Mehbooba Mufti (@MehboobaMufti) April 12, 2022 " class="align-text-top noRightClick twitterSection" data="
">Placed under house arrest today because I wanted to visit the family of the Kashmiri pandit attacked in Shopian. GOI wilfully spreads fake propaganda about Kashmiri mainstream & muslims responsible for pandit exodus & doesn’t want this fake divisive narrative to be exposed. pic.twitter.com/wRPet5cX98
— Mehbooba Mufti (@MehboobaMufti) April 12, 2022Placed under house arrest today because I wanted to visit the family of the Kashmiri pandit attacked in Shopian. GOI wilfully spreads fake propaganda about Kashmiri mainstream & muslims responsible for pandit exodus & doesn’t want this fake divisive narrative to be exposed. pic.twitter.com/wRPet5cX98
— Mehbooba Mufti (@MehboobaMufti) April 12, 2022
ಈ ಬಗ್ಗೆ ಟ್ವೀಟ್ ಮಾಡಿರುವ ಮುಫ್ತಿ, 'ಸೋಫಿಯಾನ್ನಲ್ಲಿ ದಾಳಿಗೊಳಗಾದ ಕಾಶ್ಮೀರಿ ಪಂಡಿತ ಕುಟುಂಬವನ್ನು ಭೇಟಿ ಮಾಡಲು ನಾನು ಬಯಸಿದ್ದೆ. ಈ ಕಾರಣಕ್ಕೆ ನನಗೆ ಗೃಹ ಬಂಧನ ವಿಧಿಸಲಾಗಿದೆ. ಕಾಶ್ಮೀರಿ ಪಂಡಿತರ ವಲಸೆಗೆ ಮುಸ್ಲಿಮರು ಕಾರಣವೆಂದು ಭಾರತ ಸರ್ಕಾರ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದೆ. ಇಂತಹ ಒಡೆದು ಆಳುವ ನೀತಿಯನ್ನು ಬಹಿರಂಗಪಡಿಸಲು ಸರ್ಕಾರ ಅವಕಾಶ ನೀಡುತ್ತಿಲ್ಲ' ಎಂದು ಆರೋಪಿಸಿದ್ದಾರೆ.
ಇದೇ ತಿಂಗಳು ಸೋಪಿಯಾನ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ ಕುಟುಂಬದ ಮೇಲೆ ಉಗ್ರರು ದಾಳಿ ಮಾಡಿದ್ದರು. ಇವರ ಕುಟುಂಬವನ್ನು ಭೇಟಿ ಮಾಡಲು ಶ್ರೀನಗರದಿಂದ ಅನಂತ್ನಾಗ್ ಜಿಲ್ಲೆಗೆ ತೆರಳಲು ಮುಫ್ತಿ ಮುಂದಾಗಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಉಗ್ರರ ಗುಂಡಿನ ದಾಳಿ: ಓರ್ವ ಕಾಶ್ಮೀರಿ ಪಂಡಿತನ ಸ್ಥಿತಿ ಗಂಭೀರ