ETV Bharat / bharat

'ಇಸ್ಲಾಂ ಪ್ರಕಾರ ನಿಕಾಹ್ ನಡೆಯದಿದ್ದರೆ ದಂಡ': ಜಾರ್ಖಂಡ್‌ ಮೌಲಾನಾ ಎಚ್ಚರಿಕೆ - ಅವಾಮ್‌

ಇಸ್ಲಾಂ ಧರ್ಮದ ಪ್ರಕಾರ ನಿಕಾಹ್ ನಡೆಯಲಿದೆ. ಬ್ಯಾಂಡ್ ಬಾರಿಸುವುದು ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ನಿಕಾಹ್ ಮತ್ತು ನಿಕಾಹ್ ರಾತ್ರಿ 11 ಗಂಟೆಯೊಳಗೆ ಮಾಡಬೇಕು ಎಂದು ನಿರ್ಸಾದಲ್ಲಿರುವ ಶಿವಲಿಬಾರಿ ಜಾಮಾ ಮಸೀದಿಯಲ್ಲಿ ಮೌಲಾನಾ ಮಸೂದ್ ಅಖ್ತರ್ ಖಾದ್ರಿ ಅವರು ಹೇಳಿದ್ದಾರೆ.

ಮೌಲಾನಾ ಮಸೂದ್ ಅಖ್ತರ್ ಖಾದ್ರಿ
ಮೌಲಾನಾ ಮಸೂದ್ ಅಖ್ತರ್ ಖಾದ್ರಿ
author img

By

Published : Nov 28, 2022, 6:03 PM IST

ಜಾರ್ಖಂಡ್​(ಧನ್ಬಾದ್​): ಸಮಾರಂಭದಲ್ಲಿ ಬ್ಯಾಂಡ್ ಬಾರಿಸಿದರೆ, ಡಿಜೆ ಹಾಕಿದರೆ, ಪಟಾಕಿ ಸಿಡಿಸಿದರೆ ಮದುವೆ ಆಗುವುದಿಲ್ಲ ಎಂದು ಇಲ್ಲಿನ ಮೌಲಾನಾ ಮಸೂದ್ ಅಖ್ತರ್ ಖಾದ್ರಿ ಹೇಳಿದ್ದಾರೆ. ನಿರ್ಸಾದಲ್ಲಿರುವ ಶಿವಲಿಬಾರಿ ಜಾಮಾ ಮಸೀದಿಯಲ್ಲಿ ಭಾನುವಾರ ನಡೆದ ಸಮಿತಿಯ ಸಭೆಯಲ್ಲಿ ಮೌಲಾನಾ ಈ ವಿಷಯಗಳನ್ನು ಪ್ರಸ್ತಾಪಿಸಿದರು. ಈ ಸಭೆಯಲ್ಲಿ ಪ್ರದೇಶದ ಎಲ್ಲಾ ಇಮಾಮ್‌ಗಳು ಮತ್ತು ಅವಾಮ್‌ಗಳು ಭಾಗವಹಿಸಿದ್ದರು.

ಇಸ್ಲಾಂ ಧರ್ಮದಲ್ಲಿ ನಿಕಾಹ್ ವೇಳೆ ಬ್ಯಾಂಡ್ ಬಾರಿಸುವುದು ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ನಿಕಾಹ್ ಮತ್ತು ನಿಕಾಹ್ ರಾತ್ರಿ 11 ಗಂಟೆಯೊಳಗೆ ಮಾಡಬೇಕು. ಈ ಕಾನೂನನ್ನು ಪಾಲಿಸದಿದ್ದಲ್ಲಿ ತಪ್ಪಿತಸ್ಥರು ಎಂದು ಕಂಡುಬಂದರೆ ಸಮಿತಿಯಿಂದ 5100 ರೂಪಾಯಿ ದಂಡ ವಿಧಿಸಲಾಗುವುದು ಮತ್ತು ಸಮಿತಿಯೊಂದಿಗೆ ಕ್ಷಮೆಯಾಚಿಸಬೇಕು ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಇಂದಿನ ಫ್ಯಾಶನ್ ಯುಗದಲ್ಲಿ ಜನರು ಮದುವೆಗಳ ಅದ್ಧೂರಿತನಕ್ಕೆ ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚು ಮಾಡುತ್ತಾರೆ ಮತ್ತು ನಮ್ಮ ಇಸ್ಲಾಂ ಮದುವೆಗಳಲ್ಲಿ ಬ್ಯಾಂಡ್ ಬಾಜಾ ಮತ್ತು ಪಟಾಕಿಗಳಿಗೆ ದುಂದು ವೆಚ್ಚ ಮಾಡಬೇಕೆಂದು ಎಂದೂ ಹೇಳುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಜಾಮಾ ಮಸೀದಿಗೆ ಹುಡುಗಿಯರ ಏಕಾಂಗಿ ಪ್ರವೇಶಕ್ಕೆ ನಿರ್ಬಂಧ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.