ETV Bharat / bharat

ಡಿಆರ್​ಡಿಒ ಅಭಿವೃದ್ಧಿಪಡಿಸಿದ ಕೊರೊನಾ ವ್ಯಾಕ್ಸಿನ್​ ಹಿಂದಿರುವ ಸೂತ್ರಧಾರ ಡಾ. ಅನಿಲ್ ಕುಮಾರ್ ಮಿಶ್ರಾ

author img

By

Published : May 10, 2021, 6:38 PM IST

ಕೊರೊನಾ ಪ್ರಕರಣಗಳ ಮಧ್ಯಮ ಚಿಕಿತ್ಸೆಯಾಗಿ 2-DG ಯ ತುರ್ತು ಬಳಕೆಯನ್ನು ಡಿಸಿಜಿಐ ಅನುಮೋದಿಸಿದ ನಂತರ, ಈ ಔಷಧವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, DRDOನ ಹಿರಿಯ ವಿಜ್ಞಾನಿ ಡಾ. ಅನಿಲ್ ಕುಮಾರ್ ಮಿಶ್ರಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ..

anil
anil

ಬಲಿಯಾ/ಉತ್ತರಪ್ರದೇಶ: ತೀವ್ರಗೊಂಡ ಕೊರೊನಾ ಪ್ರಕರಣಗಳ ಮಧ್ಯಮ ಚಿಕಿತ್ಸೆಯಾಗಿ 2-DG ಯ ತುರ್ತು ಬಳಕೆಯನ್ನು ಡಿಸಿಜಿಐ ಅನುಮೋದಿಸಿದ ನಂತರ, ಈ ಔಷಧವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, DRDOನ ಹಿರಿಯ ವಿಜ್ಞಾನಿ ಡಾ. ಅನಿಲ್ ಕುಮಾರ್ ಮಿಶ್ರಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಡಿಆರ್​ಡಿಒ ಹೇಳಿಕೆ ಪ್ರಕಾರ, 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧದ ಕೋವಿಡ್​ ಚಿಕಿತ್ಸಕ ಅಪ್ಲಿಕೇಶನ್ ಅನ್ನು ಡಿಆರ್‌ಡಿಒ ಸಹಭಾಗಿತ್ವದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (INMAS)ಹೈದರಾಬಾದ್‌ನ ಡಾ. ರೆಡ್ಡಿ ಲ್ಯಾಬ್ಸ್​ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿದೆ.

ಕ್ಲಿನಿಕಲ್ ಪ್ರಯೋಗ ಫಲಿತಾಂಶಗಳು ಈ ಔಷಧಿ ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿಕೊಟ್ಟಿವೆ.

2-ಡಿಜಿ ಚಿಕಿತ್ಸೆ ಪಡೆದ ಹೆಚ್ಚಿನ ರೋಗಿಗಳ ಆರ್​ಟಿಪಿಸಿಆರ್​ ವರದಿ ನೆಗೆಟಿವ್​ ಬಂದಿದೆ. ಅಲ್ಲದೇ ಈ ಔಷಧವು ಮಕ್ಕಳಿಗೂ ಪರಿಣಾಮಕಾರಿಯಾಗಿದ್ದು, ಅವರ ಚೇತರಿಕೆಯ ಪ್ರಮಾಣವನ್ನು ದ್ವಿಗುಣಗೊಳಿಸುತ್ತದೆ ಎಂದು ಡಾ.ಮಿಶ್ರಾ ಹೇಳಿದ್ದಾರೆ.

ಡಾ.ಅನಿಲ್ ಕುಮಾರ್ ಮಿಶ್ರಾ ಯಾರು :

  • ಡಾ.ಅನಿಲ್ ಮಿಶ್ರಾ ಅವರು ಉತ್ತರಪ್ರದೇಶದ ಬಲಿಯಾದ ಸಿಕಂದರ್‌ಪುರ ಪ್ರದೇಶದ ಮಿಸ್ರಿ ಚಕ್ ಗ್ರಾಮದಲ್ಲಿ ವಿಜಯ್ ಶಂಕರ್ ಮಿಶ್ರಾ ಮತ್ತು ಸುಶೀಲಾ ಮಿಶ್ರಾ ದಂಪತಿಯ ಮಗನಾಗಿ ಜನಿಸಿದರು.
  • 1984ರಲ್ಲಿ ಗೋರಖ್‌ಪುರ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಮತ್ತು 1988ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರ ವಿಭಾಗದಿಂದ ಪಿಹೆಚ್‌ಡಿ ಪಡೆದಿದ್ದಾರೆ.
  • ಪ್ರೊಫೆಸರ್ ಸಿಎಫ್ ಮೇಯರ್ಸ್ ಅವರೊಂದಿಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರಲ್ ಸಹವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
  • ಡಾ. ಎ.ಕೆ.ಮಿಶ್ರಾ ಅವರು 1994 ರಿಂದ 1997ರವರೆಗೆ ಫ್ರಾನ್ಸ್‌ನ INSERM ಸಂಶೋಧನಾ ಸಂಸ್ಥೆಯಲ್ಲಿ ಪ್ರೊಫೆಸರ್ ಚಟಾಲ್ ಅವರೊಂದಿಗೆ ಸಂಶೋಧನಾ ವಿಜ್ಞಾನಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
  • ನಂತರ ಅವರು ಡಿಆರ್‌ಡಿಒನ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್‌ಗೆ 1997 ರಲ್ಲಿ ಹಿರಿಯ ವಿಜ್ಞಾನಿಯಾಗಿ ಸೇರಿದರು.
  • 2002 ರಿಂದ 2003 ರವರೆಗೆ INMAS ನ ಮುಖ್ಯಸ್ಥರಾಗಿದ್ದರು. ಡಾ. ಮಿಶ್ರಾ ಪ್ರಸ್ತುತ ಡಿಆರ್‌ಡಿಒದ ಸೈಕ್ಲೋಟ್ರಾನ್ ಮತ್ತು ರೇಡಿಯೊಫಾರ್ಮಾಸ್ಯುಟಿಕಲ್ ಸೈನ್ಸಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ರೇಡಿಯೊಕೆಮಿಸ್ಟ್ರಿ, ನ್ಯೂಕ್ಲಿಯರ್ ಕೆಮಿಸ್ಟ್ರಿ ಮತ್ತು ಸಾವಯವ ರಸಾಯನಶಾಸ್ತ್ರದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.