ಜಮ್ಮು ಮತ್ತು ಕಾಶ್ಮೀರ: ದೇಶದ ಅತ್ಯಂತ ಕಿರಿಯ ಮಹಿಳಾ ಪೈಲಟ್ ಕಾಶ್ಮೀರದ 25 ವರ್ಷದ ಆಯೇಷಾ ಅಜೀಜ್ ಹಲವಾರು ಕಾಶ್ಮೀರಿ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.
2011 ರಲ್ಲಿ, ಆಯೇಶಾ ತನ್ನ 15 ನೇ ವಯಸ್ಸಿನಲ್ಲಿ ಪರವಾನಗಿ ಪಡೆದ ಅತ್ಯಂತ ಕಿರಿಯ ವಿದ್ಯಾರ್ಥಿ ಪೈಲಟ್ ಎನಿಸಿಕೊಂಡರು. ನಂತರ 2012ರಲ್ಲಿ ರಷ್ಯಾದ ಸೊಕೊಲ್ ವಾಯುನೆಲೆಯಲ್ಲಿ ಎಂಐಜಿ -29 ಜೆಟ್ ಹಾರಿಸಲು ತರಬೇತಿ ಪಡೆದರು. ನಂತರ ಅವರು ಬಾಂಬೆ ಫ್ಲೈಯಿಂಗ್ ಕ್ಲಬ್ (ಬಿಎಫ್‌ಸಿ) ಯಿಂದ ವಾಯುಯಾನದಲ್ಲಿ ಪದವಿ ಪಡೆದು, 2017 ರಲ್ಲಿ ವಾಣಿಜ್ಯ ಪರವಾನಗಿ ಪಡೆದರು.
"ನಾನು ವಿಮಾನದಲ್ಲಿ ಪ್ರಯಾಣಿಸುವುದು ಮತ್ತು ಜನರನ್ನು ಭೇಟಿಯಾಗುವುದು ತುಂಬಾ ಇಷ್ಟ. ಈ ಕಾರಣದಿಂದಾಗಿ ನಾನು ಪೈಲಟ್ ಆಗಲು ನಿರ್ಧರಿಸಿದೆ. ಪೈಲಟ್ ಆಗಲು ನೀವು ಮಾನಸಿಕವಾಗಿ ಸದೃಢರಾಗಿರಬೇಕು" ಎಂದು ಅವರು ಹೇಳಿದರು.
ತನ್ನನ್ನು ಬೆಂಬಲಿಸಿದ ಮತ್ತು ಅವಳ ಕನಸುಗಳನ್ನು ಸಾಧಿಸಲು ಅನುವು ಮಾಡಿಕೊಟ್ಟ ತನ್ನ ಹೆತ್ತವರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು. "ಎಲ್ಲದರಲ್ಲೂ ನನ್ನನ್ನು ಬೆಂಬಲಿಸಿದ ಪೋಷಕರು ಸಿಕ್ಕಿದ್ದು ನನ್ನ ಅದೃಷ್ಟ. ಅವರಿಲ್ಲದೆ, ನಾನು ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ವೃತ್ತಿಪರ ಮತ್ತು ವೈಯಕ್ತಿಕ ಮಟ್ಟದಲ್ಲಿ ನಾನು ನಿರಂತರವಾಗಿ ಬೆಳವಣಿಗೆಯನ್ನು ಹುಡುಕುತ್ತಿದ್ದೇನೆ. ನನ್ನ ತಂದೆ ನನ್ನ ಶ್ರೇಷ್ಠ ಆದರ್ಶ" ಎಂದು ಅವರು ಹೇಳಿದರು.