ETV Bharat / bharat

ಸಂಗೀತದ ಮೂಲಕ ಸಿಖ್ ಕೀರ್ತನೆಗಳ ಸಾರಿದ ಕರ್ತಾರ್ ಸಿಂಗ್..ಇಳಿ ವಯಸ್ಸಿನಲ್ಲೂ ಸಂಗೀತ ಬಿಡದ ಮಹಾನ್ ತಪಸ್ವಿ..!

93 ವರ್ಷದ ಕರ್ತಾರ್ ಸಿಂಗ್ ಅಚ್ಚಳಿಯದ ಸಾಧನೆ ಮಾಡಿದ್ದಾರೆ. ಸಂಗೀತ ಲೋಕಕ್ಕೆ ಅವರ ಸೇವೆ ಪರಿಗಣಿಸಿ, ಟ್ಯಾಗೋರ್ ರತ್ನ ಪ್ರಶಸ್ತಿ, ಭಾರತೀಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಪದ್ಮಶ್ರೀ ಗೌರವಗಳು ಸಂದಿವೆ. ಈಗ ವೃದ್ಧಾಪ್ಯದಲ್ಲಿ ರಾಗಗಳ ಸಂಯೋಜನೆ ಕಾರ್ಯ ಮಾಡುತ್ತಾ ಕೇಳುಗರಿಗೆ ಮೋಡಿ ಮಾಡುತ್ತಿದ್ದಾರೆ.

Meet 93 years old Kartar Singh, Musician and King of Ragas
ಸಂಗೀತದ ಮೂಲಕ ಸಿಖ್ ಕೀರ್ತನೆಗಳ ಸಾರಿದ ಕರ್ತಾರ್ ಸಿಂಗ್
author img

By

Published : Apr 16, 2021, 6:07 AM IST

ಪಂಜಾಬ್​: ಸಿಖ್ ಧರ್ಮದ ಕೀರ್ತನೆಗಳನ್ನು ಹಾಡುವಲ್ಲಿ ಪ್ರಿನ್ಸಿಪಾಲ್​ ಕರ್ತಾರ್ ಸಿಂಗ್ ಅವರದ್ದು ಎತ್ತಿದ ಕೈ, ಹಲವು ದಶಕಗಳಿಂದ ಕೀರ್ತನೆಗಳ ಹಾಡಿ ರಂಜಿಸಿರುವ ಇವರು ಸಂಗೀತ ಲೋಕದ ದಿಗ್ಗಜ ಅಂತಲೇ ಕರೆಸಿಕೊಂಡಿದ್ದಾರೆ. ಸಿಖ್ ಧರ್ಮದ ಸಾರವನ್ನು ಸಂಗೀತದ ಹಿನ್ನೆಲೆಯಲ್ಲಿ ಹಾಡುವ ಕಲೆಗೆ ಗುರ್ಮತ್ ಸಂಗೀತ್ ಅಂತ ಕರೆಯಲಾಗುತ್ತೆ.

ಇದೇ ಗುರ್ಮತ್ ಸಂಗೀತದಲ್ಲಿ 93 ವರ್ಷದ ಕರ್ತಾರ್ ಸಿಂಗ್ ಅಚ್ಚಳಿಯದ ಸಾಧನೆ ಮಾಡಿದ್ದಾರೆ. ಸಂಗೀತ ಲೋಕಕ್ಕೆ ಅವರ ಸೇವೆ ಪರಿಗಣಿಸಿ, ಟ್ಯಾಗೋರ್​ ರತ್ನ ಪ್ರಶಸ್ತಿ, ಭಾರತೀಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಪದ್ಮಶ್ರೀ ಗೌರವಗಳು ಸಂದಿದೆ. ಈಗ ವೃದ್ಧಾಪ್ಯದಲ್ಲಿ ರಾಗಗಳ ಸಂಯೋಜನೆ ಕಾರ್ಯ ಮಾಡುತ್ತಾ ಕೇಳುಗರಿಗೆ ಮೋಡಿ ಮಾಡುತ್ತಿದ್ದಾರೆ ಈ ಸಂಗೀತ ಮಾಂತ್ರಿಕ.

ಸಂಗೀತದ ಮೂಲಕ ಸಿಖ್ ಕೀರ್ತನೆಗಳ ಸಾರಿದ ಕರ್ತಾರ್ ಸಿಂಗ್

ಇದಿಷ್ಟೇ ಅಲ್ಲ ಗುರುನಾನಕ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾಗ ಸಂಗೀತ ಕುರಿತಾಗಿ ಪುಸ್ತಕವನ್ನೇ ಬರೆದಿದ್ದರು. ಈವರೆಗೂ ಈ ಪುಸ್ತಕದ ಸುಮಾರು 42 ಸಾವಿರ ಪ್ರತಿಗಳು ಮುದ್ರಣಗೊಂಡು ಮಾರಾಟವಾಗಿವೆ. ಅವರ ಮನೆಯ ಒಂದು ಕೋಣೆ ಸಂಪೂರ್ಣವಾಗಿ ಪ್ರಶಸ್ತಿ - ಪುರಸ್ಕಾರಗಳಿಂದಲೇ ತುಂಬಿದೆ.

ಕರ್ತಾರ್ ಸಿಂಗ್ ತಮ್ಮ ಸಂಗೀತದ ಮೂಲಕ ಮಾತ್ರ ಮನೆ ಮಾತಾಗಿಲ್ಲ ಅವರ ವಿಶಿಷ್ಟ ವ್ಯಕ್ತಿತ್ವದಿಂದಾಗಿಯೂ ವಿಶ್ವಪ್ರಸಿದ್ಧಿ ಪಡೆದವರು. ಅವರ ವಿಭಿನ್ನ ವ್ಯಕ್ತಿತ್ವವೇ ಸಂಗೀತ ಲೋಕದಲ್ಲಿ ಹೆಗ್ಗುರುತಾಗಿದೆ. ಅವರು ಕೇವಲ ಗುರ್ಮತ್ ಸಂಗೀತ ಮಾತ್ರವಲ್ಲದೇ ಸಂಗೀತದ ಬೇರೆಲ್ಲಾ ಮಾದರಿಗಳನ್ನು ಪ್ರೋತ್ಸಾಹಿಸಿ, ಸಂಗೀತ ಪರಂಪರೆ ಉಳಿಸಲು ಹೋರಾಡಿದ್ದಾರೆ.

ಪ್ರಿನ್ಸಿಪಾಲ್ ಕರ್ತಾರ್ ಸಿಂಗ್ ಇಳಿ ವಯಸ್ಸಿನಲ್ಲೂ ಸಂಗೀತ ಅಂದರೆ ಸಕ್ರಿಯರಾಗುತ್ತಾರೆ. ಈಗಲೂ ಸಂಗೀತದೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದಾರೆ ಅಂತ ಅವರ ಸೊಸೆ ಅಮರ್​​​​ಜೀತ್ ಕೌರ್​​ ಅಭಿಪ್ರಾಯಪಟ್ಟಿದ್ದಾರೆ. ಕರ್ತಾರ್ ಸಿಂಗ್ ಈವರೆಗೆ ನೂರಾರು ವಿದ್ಯಾರ್ಥಿಗಳಿಗೆ ತಮ್ಮ ಸಂಗೀತ ಜ್ಞಾನ ಧಾರೆ ಎರೆದಿದ್ದಾರೆ. ಅವರೆಲ್ಲಾ ವಿಶ್ವದಾದ್ಯಂತ ಗುರ್ಮತ್ ಸಂಗೀತವನ್ನು ಹರಡುವ ಕೆಲಸ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.