ETV Bharat / bharat

ಕಣ್ಣುಮುಚ್ಚಿ ಕ್ಷಣಮಾತ್ರದಲ್ಲಿ ರೂಬಿಕ್​ ಸಮಸ್ಯೆ ಬಗೆಹರಿಸಬಲ್ಲ.. 'ಕ್ರಿಕೆಟ್​ ದೇವರು' ಮೆಚ್ಚಿದ ಸಾಧಕನಿವನು! - ಸಚಿನ್ ತೆಂಡೂಲ್ಕರ್​

ಮುಂಬೈನ ಕಫ್ ಪೆರೇಡ್ ಪ್ರದೇಶದ 16 ವರ್ಷದ ಬಾಲಕ ಮೊಹಮ್ಮದ್ ಐಮಾನ್ ಕೋಲಿ ಕೆಲವೇ ಸೆಕೆಂಡುಗಳಲ್ಲಿ ರೂಬಿಕ್ಸ್​ ಸಮಸ್ಯೆ ಪರಿಹರಿಸಬಲ್ಲ. ಇದರಲ್ಲಿ ವಿಶೇಷವೆಂದರೆ ಈತ ಕಣ್ಣಿಗೆ ಬಟ್ಟೆ ಕಟ್ಟಿ ರೂಬಿಕ್ಸ್​ ಸಮಸ್ಯೆ ಬಗೆಹರಿಸುತ್ತಾನೆ.

Rubik cube
ರೂಬಿಕ್​ ಸಮಸ್ಯೆ ಬಗೆಹರಿಸಬಲ್ಲ ಗಿನ್ನಿಸ್​ ರೆಕಾರ್ಡ್​ ಬ್ರೇಕರ್
author img

By

Published : Jun 22, 2021, 10:23 PM IST

ಮುಂಬೈ: ಮೊಹಮ್ಮದ್ ಐಮಾನ್ ಕೋಲಿ ಅದ್ಭುತ ಸ್ಪೀಡ್‌ಕ್ಯೂಬಿಂಗ್ ಕೌಶಲ್ಯ ಹೊಂದಿರುವ ಪ್ರತಿಭಾವಂತ ಬಾಲಕ. ಇನ್ನು ಈತ ಕೈಯಲ್ಲಿ ಮಾತ್ರವಲ್ಲದೇ ಪಾದದ ಸಹಾಯದಿಂದಲೂ ಕೆಲವೇ ಸೆಕೆಂಡುಗಳಲ್ಲಿ ರೂಬಿಕ್ಸ್​ ಸಮಸ್ಯೆಯನ್ನು ಪರಿಹರಿಸಬಲ್ಲ. ಇದರಲ್ಲಿ ವಿಶೇಷವೆಂದರೆ ಈತ ಕಣ್ಣಿಗೆ ಬಟ್ಟೆ ಕಟ್ಟಿ ರೂಬಿಕ್ಸ್​ ಸಮಸ್ಯೆ ಬಗೆಹರಿಸುತ್ತಾನೆ.

ಮುಂಬೈನ ಕಫ್ ಪೆರೇಡ್ ಪ್ರದೇಶದ 16 ವರ್ಷದ ಬಾಲಕ ಐಮಾನ್​ ಕೇವಲ ಸಾಮಾನ್ಯ ಜನರನ್ನು ಮಾತ್ರವಲ್ಲದೇ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್​ ಅವರನ್ನೂ ಸಹ ಮೆಚ್ಚಿಸಿದ್ದಾನೆ. ಈ ಹುಡುಗನ ವಿಡಿಯೋವನ್ನು ಸಚಿನ್​ ಶೇರ್​ ಸಹ ಮಾಡಿದ್ದಾರೆ.

ರೂಬಿಕ್​ ಸಮಸ್ಯೆ ಬಗೆಹರಿಸಬಲ್ಲ ಗಿನ್ನಿಸ್​ ರೆಕಾರ್ಡ್​ ಬ್ರೇಕರ್

ಈ ಬಗ್ಗೆ ಸಚಿನ್​ ಹೇಳಿಕೆ ನೀಡಿದ್ದು "ಈ ಯುವಕನನ್ನು ಸ್ವಲ್ಪ ಸಮಯದ ಹಿಂದೆ ಭೇಟಿ ಮಾಡಿದ್ದೆ. ಅವನು ಕಣ್ಣುಮುಚ್ಚಿ ರೂಬಿಕ್ಸ್​ ಸಮಸ್ಯೆ ಬಗೆಹರಿಸುವುದನ್ನು ಕಂಡು ನಾನು ಇನ್ನೂ ಆಶ್ಚರ್ಯಚಕಿತನಾಗಿದ್ದೇನೆ" ಎಂದು ಬರೆದಿದ್ದಾರೆ.

ಐಮನ್ 2019 ರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾನೆ. ಈಗಾಗಲೇ ಇದ್ದ 16.56 ಸೆಕೆಂಡುಗಳ ರೆಕಾರ್ಡ್​ ಅನ್ನು 15.56 ಸೆಕೆಂಡುಗಳಲ್ಲಿ ರೂಬಿಕ್ಸ್​ ಬಗೆಹರಿಸುವ ಮೂಲಕ ದಾಖಲೆ ಮುರಿದಿದ್ದಾನೆ. ಐಮಾನ್ ಪ್ರಕಾರ, ರೂಬಿಕ್ಸ್ ಕ್ಯೂಬ್ ಬಗ್ಗೆ 9 ವರ್ಷವಿದ್ದಾಗಲೇ ಆಸಕ್ತಿ ಹುಟ್ಟಿತ್ತು. ನನ್ನ ಹವ್ಯಾಸವನ್ನು ಕಲೆಯನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ನನ್ನ ತಾಯಿ ತೆಹ್ಜೀಬ್ ಕೋಲಿ ಎಂದು ಹೇಳುತ್ತಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.