ETV Bharat / bharat

ನಕ್ಸಲ್​ ಪೀಡಿತ ಪ್ರದೇಶಕ್ಕೆ ತೆರಳಿ ಗ್ರಾಮಸ್ಥರಿಗೆ ಲಸಿಕೆ ನೀಡುತ್ತಿರುವ ವೈದ್ಯರ ತಂಡ

ಛತ್ತೀಸ್​ಗಢದ ಬಿಜಾಪುರ ಜಿಲ್ಲೆಯ ನಕ್ಸಲ್​ ಪೀಡಿತ ಅಬುಜ್ಮಾದ್​ ಪ್ರದೇಶಕ್ಕೆ ಬಂದಿರುವ ಆರೋಗ್ಯ ಇಲಾಖೆಯ ತಂಡ, ಅಲ್ಲಿನ ಜನರಿಗೆ ಕೊರೊನಾ ಲಸಿಕೆ ಹಾಕುತ್ತಿದೆ.

Vaccination in Naxalite area
ನಕ್ಸಲ್​ ಪೀಡಿತ ಪ್ರದೇಶ ತಲುಪಿ ಗ್ರಾಮಸ್ಥರಿಗೆ ಲಸಿಕೆ ನೀಡುತ್ತಿರುವ ವೈದ್ಯರ ತಂಡ
author img

By

Published : Apr 23, 2021, 12:41 PM IST

ಬಿಜಾಪುರ (ಛತ್ತೀಸ್​ಗಢ): ದೇಶದ ಯಾರೊಬ್ಬರೂ ಕೋವಿಡ್​ ಲಸಿಕೆಯಿಂದ ವಂಚಿತರಾಗದಿರಲೆಂದು ಆರೋಗ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿಯೇ ಛತ್ತೀಸ್​ಗಢದ ನಕ್ಸಲ್​ ಪೀಡಿತ ಪ್ರದೇಶದ ಗ್ರಾಮಗಳಿಗೆ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದೆ.

ಇಂದ್ರಾವತಿ ನದಿಯನ್ನು ದೋಣಿ ಮೂಲಕ ದಾಟಿ ಛತ್ತೀಸ್​ಗಢದ ಬಿಜಾಪುರ ಜಿಲ್ಲೆಯ ನಕ್ಸಲ್​ ಪೀಡಿತ ಅಬುಜ್ಮಾದ್​ ಪ್ರದೇಶವನ್ನು ಆರೋಗ್ಯ ಇಲಾಖೆಯ ತಂಡ ತಲುಪಿದೆ. ಗ್ರಾಮಸ್ಥರ ತಪಾಸಣೆ ನಡೆಸಿ, ಕೋವಿಡ್​ ಲಸಿಕೆ ನೀಡಲಾಗುತ್ತಿದೆ. ಗರ್ಭಿಣಿಯರಿಗೆ ಅಗತ್ಯ ಸಲಹೆಗಳನ್ನು ನೀಡಲಾಗುತ್ತಿದೆ.

Vaccination in Naxalite area
ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡುತ್ತಿರುವ ವೈದ್ಯರ ತಂಡ

ಇದೀಗ ಅಬುಜ್ಮಾದ್​ನ ಗ್ರಾಮದ ಸುಮಾರು 200 ಜನರಿಗೆ ವ್ಯಾಕ್ಸಿನ್​ ನೀಡಲಾಗಿದ್ದು, ಜ್ವರ, ರಕ್ತಹೀನತೆ, ಅತಿಸಾರದಿಂದ ಬಳಲುತ್ತಿರುವ 60 ಮಂದಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಮಾಸ್ಕ್​​, ಆಗಾಗ ಕೈ ತೊಳೆಯುವುದು ಸೇರಿದಂತೆ ಕೋವಿಡ್​ ಜಾಗೃತಿಯನ್ನು ಗ್ರಾಮಸ್ಥರಲ್ಲಿ ವೈದ್ಯಕೀಯ ಸಿಬ್ಬಂದಿ ಮೂಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.