ಪುದುಚೇರಿ : ತೆಲಂಗಾಣದ ಹೈದರಾಬಾದ್‌ನ ಗುಡಿ ಮೆಡ್ಲಾ ಚಿರಂಜೀವಿ ಅವರ ಪುತ್ರ ಗುಡಿ ಮೆಡ್ಲ ಸಂಕಲ್ಪ ಅವರು ಕೊರೊನಾ ಲಸಿಕೆ ತೆಗೆದುಕೊಂಡ ಒಂದು ದಿನದ ನಂತರ ಸಾವಿಗೀಡಾಗಿದ್ದಾನೆ. ಗುಡಿ ಮೆಡ್ಲ ಸಂಕಲ್ಪ ಪಾಂಡಿಚೇರಿಯ ಲಕ್ಷ್ಮಿನಾರಾಯಣನ್ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಯುಜಿ ಎರಡನೇ ವರ್ಷ ಓದುತ್ತಿದ್ದಾರೆ.
ಆತ ಕಾಲೇಜಿನ ಹಾಸ್ಟೆಲ್‌ನಲ್ಲಿ ಉಳಿದು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ಈ ನಡುವೆ ಅಕ್ಟೋಬರ್ 1ರಂದು ಪುದುಚೇರಿ ಕೂಡಪಕ್ಕಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾನೆ. ಮರುದಿನ ಅಕ್ಟೋಬರ್ 2ರಂದು ಆತನನ್ನು ಆತನ ರೂಂಮೇಟ್ಸ್ಗಳು ತಿಂಡಿ ತಿನ್ನಲು ಆಹ್ವಾನಿಸಿದ್ದಾರೆ. ಆದರೆ, ಸಂಕಲ್ಪಗೆ ಅನಾರೋಗ್ಯ ಉಂಟಾದ ಹಿನ್ನೆಲೆ ಉಪಾಹಾರ ಸೇವಿಸಿಲ್ಲ.
ತಕ್ಷಣವೇ ಸಹ ವಿದ್ಯಾರ್ಥಿಗಳು ಆತನನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಸಂಕಲ್ಪವನ್ನು ಪರೀಕ್ಷಿಸಿದ ವೈದ್ಯರು, ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.