ಜೆಮ್ಶೆಡ್ಪುರ್ (ಜಾರ್ಖಂಡ್): ಇಲ್ಲಿಂದ ಬೆಂಗಳೂರು, ದೆಹಲಿ, ಕಾನ್ಪುರ ಮತ್ತು ಡೆಹ್ರಾಡೂನ್ ನಗರಗಳಿಗೆ ರೈಲಿನ ಮೂಲಕ ಮೆಡಿಕಲ್ ಆಕ್ಸಿಜನ್ ಕಳುಹಿಸಲಾಗಿದೆ.
ಕೋವಿಡ್ ಸೋಂಕು ಉಲ್ಬಣಗೊಂಡು ವಿವಿಧ ನಗರಗಳಲ್ಲಿ ಉಂಟಾಗಿರುವ ಆಕ್ಸಿಜನ್ ಕೊರತೆ ನೀಗಿಸಲು ವಿಶೇಷ ರೈಲಿನ ಮೂಲಕ ಆಕ್ಸಿಜನ್ ಪೂರೈಕೆ ಮಾಡಲಾಗ್ತಿದೆ. ಭಾನುವಾರ ರಾತ್ರಿ ಜೆಮ್ಶೆಡ್ಪುರದ ಬಾರ್ಮಮೈನ್ಸ್ನ ಲಿಂಡೆ ಆಕ್ಸಿಜನ್ ಪ್ಲಾಂಟ್ನಿಂದ ಟಾಟಾನಗರದ ಗೂಡ್ಸ್ ಯಾರ್ಡ್ ರೈಲ್ವೆ ನಿಲ್ದಾಣದ ಮೂಲಕ ಬೆಂಗಳೂರು, ದೆಹಲಿ, ಕಾನ್ಪುರ ಮತ್ತು ಡೆಹ್ರಾಡೂನ್ಗೆ ಆಕ್ಸಿಜನ್ ರವಾನೆಯಾಗಿದೆ.
ಇದನ್ನೂ ಓದಿ: ಕೇಂದ್ರದ ಕೋವಿಡ್ ನಿರ್ವಹಣೆ ಟೀಕಿಸಿ ಸಲಹಾ ಸಮಿತಿಯಿಂದ ಹೊರಬಂದ ವೈರಾಣು ತಜ್ಞ ಶಾಹಿದ್ ಜಮೀಲ್
ಡೆಹ್ರಾಡೂನ್ ಮತ್ತು ಕಾನ್ಪುರಕ್ಕೆ ಇದು ಮೊದಲನೇ ಹಂತದ ಆಕ್ಸಿಜನ್ ರವಾನೆಯಾಗಿದೆ. ಡೆಹ್ರಾಡೂನ್ಗೆ 120 ಮೆಟ್ರಿಕ್ ಟನ್ ಮತ್ತು ಕಾನ್ಪುರಕ್ಕೆ 40 ಮೆಟ್ರಿಕ್ ಟನ್ ಕಳುಹಿಸಲಾಗಿದೆ. ಇನ್ನುಳಿದಂತೆ ದೆಹಲಿ ಮತ್ತು ಬೆಂಗಳೂರಿಗೆ ತಲಾ 120 ಮೆಟ್ರಿಕ್ ಟನ್ ಕಳುಹಿಸಿಕೊಡಲಾಗಿದೆ. ಇದುವರೆಗೆ ಜೆಮ್ಶೆಡ್ಪುರದಿಂದ ದೇಶದ ವಿವಿಧ ನಗರಗಳಿಗೆ 400 ಮೆಟ್ರಿಕ್ ಟನ್ ಆಕ್ಸಿಜನ್ ಸಾಗಣಿಕೆಯಾಗಿದೆ. ಆಕ್ಸಿಜನ್ ರವಾನೆಯ ನೇತೃತ್ವವನ್ನು ಆರ್ಪಿಎಫ್ ವಹಿಸಿಕೊಂಡಿತ್ತು.