ವಾರಣಾಸಿ(ಉ.ಪ್ರದೇಶ): ಕೊರೊನಾ ಸಾಂಕ್ರಾಮಿಕ ರೋಗವು ದೇಶದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಇಂಥ ಪರಿಸ್ಥಿತಿ ನಡುವೆ ಕಾಶಿಯ ವಿಶ್ವನಾಥ ದೇವಾಲಯದ ಆಡಳಿತವು ಸೋಂಕಿನ ವಿರುದ್ಧ ಹೋರಾಡುವ ರೋಗಿಗಳಿಗೆ ಸಹಾಯ ನೀಡಲು ನಿರ್ಧರಿಸಿದೆ.
ಕೊರೊನಾ ಸೋಂಕಿತ ಜನರಿಗೆ ದೇವಾಲಯದ ಆಡಳಿತದಿಂದ ಔಷಧ ಕಿಟ್ಗಳನ್ನು ವಿತರಿಸಲಾಗುವುದು. ಸದ್ಯಕ್ಕೆ 5 ಸಾವಿರ ಪ್ಯಾಕೆಟ್‌ಗಳನ್ನು ತಯಾರಿಸಲಾಗಿದ್ದು, ಬಡ ಜನರಿಗೆ ಸಹಾಯ ಮಾಡಲು ನಿರ್ಧರಿಸಲಾಗಿದೆ. ವಾರಣಾಸಿಯ ಮಂಡಲ ಆಯುಕ್ತ ದೀಪಕ್ ಅಗರ್ವಾಲ್ ಅವರ ಉಪಸ್ಥಿತಿಯಲ್ಲಿ ರೋಗಿಗಳ ಚಿಕಿತ್ಸೆಯನ್ನು ಪ್ರಾರಂಭಿಸಲಾಗುವುದು.
ಪ್ರಸ್ತುತ 5000 ಕಿಟ್ ದೇವಾಲಯದ ಆಡಳಿತವು ಮೊದಲ ಹಂತದಲ್ಲಿ ಸಿದ್ಧಪಡಿಸಿದೆ. ಔಷಧಿಯನ್ನು ಮತ್ತು ಅದನ್ನು ಹೇಗೆ ಬಳಸುವುದು ಎಂಬುದನ್ನು ಕಿಟ್ ಒಳಗೊಂಡಿದೆ. ಇದಕ್ಕಾಗಿ ದೇವಾಲಯ ಆಡಳಿತವು ಬಜೆಟ್ ಸಿದ್ಧಪಡಿಸಿದೆ ಎಂದು ದೀಪಕ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.