ETV Bharat / bharat

ವಿಶೇಷ ಲೇಖನ: ಲಸಿಕೆಗಾಗಿ ಮೀಸಲಿಟ್ಟ ಹಣ 35 ಸಾವಿರ ಕೋಟಿ.. ಖರ್ಚಾಗಿದ್ದು ಕೇವಲ 4.7 ಸಾವಿರ ಕೋಟಿ ಮಾತ್ರ - ಈಟಿವಿ ಭಾರತ,

ದೇಶದ ಎರಡು ಲಸಿಕೆ ತಯಾರಿಕಾ ಕಂಪನಿಗಳಿಗೆ ಈ ವರ್ಷದ ಮಾರ್ಚ್ ನಂತರ ಯಾವುದೇ ಹೊಸ ಆರ್ಡರ್‌ ನೀಡಿಲ್ಲ ಎಂಬ ಸುದ್ದಿಗಳನ್ನು ಕೇಂದ್ರ ಸರ್ಕಾರ ಅಲ್ಲಗಳೆಯಿತು. ಏ.28 ರಂದು ಕೇಂದ್ರ ಸರ್ಕಾರ ಒಟ್ಟು 16 ಕೋಟಿ ಡೋಸ್‌ ಲಸಿಕೆ ಪೂರೈಕೆಗಾಗಿ (ಎಸ್​​ಐಐಗೆ 11 ಕೋಟಿ ಮತ್ತು ಭಾರತ್ ಬಯೋಟೆಕ್‌ಗೆ 5 ಕೋಟಿ) ಕೇಂದ್ರ ಸರ್ಕಾರ ಆರ್ಡರ್‌ ನೀಡಿದ್ದು, ಅದೇ ದಿನ ರೂ 2,520 ಕೋಟಿ ಮೊತ್ತವನ್ನು ಮುಂಗಡ ಹಣವಾಗಿ ಪಾವತಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Meagre utilisation of Covid vaccination budget
ಕೋವಿಡ್‌ ಲಸಿಕೆಗಾಗಿ ಅತಿ ಕಡಿಮೆ ಬಜೆಟ್‌ ಹಣ ಮೀಸಲು
author img

By

Published : May 8, 2021, 11:56 AM IST

Updated : May 8, 2021, 4:05 PM IST

ಕೋವಿಡ್ ಲಸಿಕೆ ಕಾರ್ಯಕ್ರಮಕ್ಕಾಗಿ ಕೇಂದ್ರ ಸರ್ಕಾರ ಇದುವರೆಗೆ 4,744 ಕೋಟಿ ರೂ. ಖರ್ಚು ಮಾಡಿದ್ದು, ಇದು ಪ್ರಸಕ್ತ ಹಣಕಾಸು ವರ್ಷದ ಒಟ್ಟು ಲಸಿಕೆ ಬಜೆಟ್‌ನ ಶೇ. 14 % ಕ್ಕಿಂತ ಕಡಿಮೆಯಿದೆ. ಪರಿಣಾಮ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನ ನಿಧಾನಗತಿಯ ವೇಗ ಸೇರಿದಂತೆ ಹಲವು ಹಿನ್ನಡೆಗಳನ್ನು ಅನುಭವಿಸಿದೆ.

ಕೆಲವು ರಾಜ್ಯಗಳಲ್ಲಿ ಲಸಿಕೆಗಳ ಕೊರತೆ, ಹೊಸ ಕೋವಿಡ್ ಸೋಂಕಿನ ಪ್ರಕರಣಗಳಲ್ಲಿ ಹಿಂದೆಂದೂ ಕಾಣದಂತಹ ಏರಿಕೆಯನ್ನು ನಿಯಂತ್ರಿಸಲು ಲಸಿಕೆ ಅಭಿಯಾನದಲ್ಲಿ ವೇಗ ಕಾಯ್ದುಕೊಳ್ಳುವುದು ಅತ್ಯಂತ ನಿರ್ಣಾಯಕ ಆಗಿತ್ತು. ಇಂತಹ ಸಮಯದಲ್ಲಿ ಮಂಜೂರಾದ 35,000 ಕೋಟಿ ರೂ. ಗಳಷ್ಟು ಬಜೆಟ್​​ನ್ನು ನಿಧಾನಗತಿಯಲ್ಲಿ ಬಳಕೆ ಮಾಡುತ್ತಿರುವುದರಿಂದ, ಉಲ್ಬಣಗೊಳ್ಳುತ್ತಿರುವ ಕೋವಿಡ್‌ ಸೋಂಕಿನ ಪ್ರಕರಣಗಳನ್ನು ಹತೋಟಿಗೆ ತರಲು ಆಗುತ್ತಿಲ್ಲ. ಕಳೆದ ಒಂದು ವಾರದಲ್ಲಿ ಪ್ರತಿದಿನ ಸರಾಸರಿ 3.86 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 3,600 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಎನಿಸಿಕೊಂಡಿರುವ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್​ಐಐ) ಗೆ 3639. 67 ಕೋಟಿ ರೂ ಹಾಗೂ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ಗೆ 1,104.78 ಕೋಟಿ ರೂ. ಪಾವತಿ ಮಾಡಲಾಗಿದೆ. ಸರ್ಕಾರ ಲಸಿಕೆ ಅಭಿಯಾನಕ್ಕಾಗಿ ಒಟ್ಟು 4,744. 45 ಕೋಟಿ ರೂ ಖರ್ಚು ಮಾಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ತಮ್ಮ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಎಸ್​​ಐಐಗೆ ಪಾವತಿ ಮಾಡಿರುವುದರಲ್ಲಿ ಮೇ, ಜೂನ್ ಹಾಗೂ ಜುಲೈನಲ್ಲಿ 11 ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡುವ ಫಾಲೋ ಅಪ್‌ ಆರ್ಡರ್‌ಗಾಗಿ 1732 . 50 ಕೋಟಿ ರೂ.ಗಳ ಮುಂಗಡ ಪಾವತಿ ಸೇರಿದೆ. ಜೊತೆಗೆ ಆರಂಭಿಕ ಆರ್ಡರ್‌ನ 2353.09 ಕೋಟಿ ರೂ.ಗಳ ಬಿಲ್ ಮೊತ್ತದಲ್ಲಿ 15 ಕೋಟಿಗಿಂತ ಹೆಚ್ಚಿನ ಪ್ರಮಾಣದ ಡೋಸ್‌ಗಳನ್ನು ಪೂರೈಕೆ ಮಾಡಲು 1907.17 ಕೋಟಿ ರೂಗಳನ್ನು ಪಾವತಿಸಲಾಗಿದೆ.

ಅನುರಾಗ್ ಠಾಕೂರ್ ಅವರ ಪ್ರಕಾರ, ಸರ್ಕಾರ ಒಟ್ಟು 26. 60 ಕೋಟಿ ಡೋಸ್‌ಗಳಿಗೆ ಆರ್ಡರ್‌ ನೀಡಿದ್ದು ಎಸ್​​ಐಐ ಒಟ್ಟು 14, 344 ಕೋಟಿ ಡೋಸ್ ಕೋವಿಶೀಲ್ಡ್​​ನ್ನು ಸರಬರಾಜು ಮಾಡಿದೆ. ಅಂತೆಯೇ ಕೊವ್ಯಾಕ್ಸಿನ್ ತಯಾರಿಕೆ ಮಾಡುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ಗೆ ಸರ್ಕಾರ ಇದುವರೆಗೆ 8 ಕೋಟಿ ಡೋಸ್ ಲಸಿಕೆ ಪೂರೈಕೆ ಮಾಡಲು ಒಟ್ಟು 1104.78 ಕೋಟಿ ರೂ.ಪಾವತಿಸಿದೆ. ಎರಡನೇ ಹಂತದಲ್ಲಿ ಮೇ, ಜೂನ್ ಮತ್ತು ಜುಲೈನಲ್ಲಿ 5 ಕೋಟಿ ಡೋಸ್‌ ಲಸಿಕೆ ಸರಬರಾಜು ಮಾಡಲೆಂದು 787.5 ಕೋಟಿ ರೂಪಾಯಿಗಳ ಮುಂಗಡ ಪಾವತಿಸಲಾಗಿದೆ.

ಆದರೂ, ಕಳೆದ ಹಣಕಾಸು ವರ್ಷದಲ್ಲಿ ಈ ಎರಡೂ ಲಸಿಕೆ ತಯಾರಿಕಾ ಕಂಪನಿಗಳಿಗೆ ಎಷ್ಟು ಹಣ ಪಾವತಿಸಲಾಗಿದೆ ಮತ್ತು ಈ ವರ್ಷದ 35, 000 ಕೋಟಿ ರೂ ಲಸಿಕೆ ಬಜೆಟ್‌ನಿಂದ ಎಷ್ಟು ಮೊತ್ತದ ಹಣ ಪಾವತಿಸಲಾಗಿದೆ ಎಂಬುದು ಸಚಿವರ ಟ್ವೀಟ್‌ಗಳಿಂದ ಸ್ಪಷ್ಟ ಆಗಿಲ್ಲ .

ಸ್ಥಳೀಯ ತಯಾರಕರಿಗೆ ಆರ್ಡರ್‌ ನೀಡಲು ಕೇಂದ್ರವು ವಿಳಂಬ ಮಾಡಿದ್ದರಿಂದ ಲಸಿಕೆ ಕಾರ್ಯಕ್ರಮದ ವೇಗ ಮಂದಗತಿಯಲ್ಲಿ ಸಾಗಿ ದೇಶ ಹಿಂದೆಂದೂ ಕಾಣದಷ್ಟು ಕೋವಿಡ್ ಪ್ರಕರಣಗಳ ಏರಿಕೆ ಮತ್ತು ಸಾವುಗಳು ಸಂಭವಿಸಿದವು ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಸಚಿವರು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ ಲಸಿಕೆ ಅಭಿಯಾನಕ್ಕೆ ವೇಗ ದೊರಕಿಸಿಕೊಡಲು ವಿದೇಶಗಳಲ್ಲಿ ಬಳಕೆ ಮಾಡುತ್ತಿರುವ ಲಸಿಕೆಗಳನ್ನು ದೇಶದಲ್ಲಿ ಬಳಸಲು ಕೂಡ ಕೇಂದ್ರ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ದೇಶದ ಎರಡು ಲಸಿಕೆ ತಯಾರಿಕಾ ಕಂಪೆನಿಗಳಿಗೆ ಈ ವರ್ಷದ ಮಾರ್ಚ್ ನಂತರ ಯಾವುದೇ ಹೊಸ ಆರ್ಡರ್‌ ನೀಡಿಲ್ಲ ಎಂಬ ಸುದ್ದಿಗಳನ್ನು ಕೇಂದ್ರ ಸರ್ಕಾರ ಅಲ್ಲಗಳೆಯಿತು. ಏ.28 ರಂದು ಕೇಂದ್ರ ಸರ್ಕಾರ ಒಟ್ಟು 16 ಕೋಟಿ ಡೋಸ್‌ ಲಸಿಕೆ ಪೂರೈಕೆಗಾಗಿ (ಎಸ್​​ಐಐಗೆ 11 ಕೋಟಿ ಮತ್ತು ಭಾರತ್ ಬಯೋಟೆಕ್‌ಗೆ 5 ಕೋಟಿ) ಕೇಂದ್ರ ಸರ್ಕಾರ ಆರ್ಡರ್‌ ನೀಡಿದ್ದು, ಅದೇ ದಿನ ರೂ 2,520 ಕೋಟಿ ಮೊತ್ತವನ್ನು ಮುಂಗಡ ಹಣವಾಗಿ ಪಾವತಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಲಸಿಕೆಗೆಂದು ಮೀಸಲಿಟ್ಟ ಒಟ್ಟು 35, 000 ಕೋಟಿ ರೂಪಾಯಿಗಳಲ್ಲಿ ಈಗ ಮಾಡಿರುವ ಪಾವತಿ ಕೇವಲ ಶೇ 7.2 % ರಷ್ಟಿದೆ.

ಒಟ್ಟು ಹಣ:

ಪ್ರಸಕ್ತ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡನೆ ವೇಳೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ಲಸಿಕೆ ಅಭಿಯಾನಕ್ಕೆ 35, 000 ಕೋಟಿ ರೂ ಮೀಸಲಿಟ್ಟಿರುವುದಾಗಿ ಘೋಷಿಸಿದ್ದರು.

"ನಾನು 2021-22ರ ಹಣಕಾಸು ವರ್ಷದಲ್ಲಿ ಕೋವಿಡ್ -19 ಲಸಿಕೆಗಾಗಿ 35,000 ಕೋಟಿ ರೂ. ಒದಗಿಸಿದ್ದೇನೆ. ಅಗತ್ಯವಿದ್ದರೆ ಹೆಚ್ಚಿನ ಹಣವನ್ನು ನೀಡಲು ಬದ್ಧಳಾಗಿರುತ್ತೇನೆ" ಎಂದು ವಿತ್ತ ಸಚಿವರು ಹೇಳಿದ್ದರು. ಅಲ್ಲದೆ ಸರ್ಕಾರ ಆರೋಗ್ಯ ಕ್ಷೇತ್ರಕ್ಕಾಗಿ 2020-21ರ ಹಣಕಾಸು ವರ್ಷದಲ್ಲಿ 94,452 ಕೋಟಿ ರೂ.ಗಳನ್ನು ಮೀಸಲು ಇರಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ 2, 23, 846 ಕೋಟಿ ರೂ. ಗೆ ಹೆಚ್ಚಿಸಲಾಗಿದ್ದು ಶೇ 137 % ಹೆಚ್ಚಳ ಆಗಿದೆ ಎಂದು ಅವರು ತಿಳಿಸಿದ್ದರು.

ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಗುರುವಾರ ನೀಡಿದ ಹೊಸ ಮಾಹಿತಿಯ ಪ್ರಕಾರ, ಕೇಂದ್ರ ಹಿಂದಿನ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಕೇವಲ 4744.45 ಕೋಟಿ ರೂ.ಗಳನ್ನು ಪಾವತಿ ಮಾಡಿದ್ದು, ಇದು ಈ ವರ್ಷದ ಲಸಿಕೆ ಬಜೆಟ್‌ನ ಶೇ 13.55 % ಗೆ ಸಮವಾಗಿದೆ.

ರಾಜ್ಯಗಳಿಗೆ 17.15 ಕೋಟಿ ಡೋಸ್‌:

ಇತ್ತೀಚಿನ ಮಾಹಿತಿ ಪ್ರಕಾರ, ಕೇಂದ್ರ ಸರ್ಕಾರ ಈವರೆಗೆ (ಮೇ 6 ರಂದು ನೀಡಿರುವ ಮಾಹಿತಿ) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 17. 15 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಉಚಿತವಾಗಿ ನೀಡಿದೆ. ಆರೋಗ್ಯ ಕಾರ್ಯಕರ್ತರು ಈವರೆಗೆ 16. 24 ಕೋಟಿಗೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಿದ್ದರೆ, 13.09 ಕೋಟಿಗೂ ಹೆಚ್ಚು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. 3.14 ಕೋಟಿಗೂ ಹೆಚ್ಚು ಫಲಾನುಭವಿಗಳು ಎರಡನೇ ಬಾರಿಗೆ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.

ಹಿನ್ನೆಡೆ ಅನುಭವಿಸುತ್ತಿರುವ ಲಸಿಕೆ ಅಭಿಯಾನ:

ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಜನವರಿ ತಿಂಗಳಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಮೊದಲ ಸುತ್ತಿನಲ್ಲಿ, ದೇಶದ ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು, ಭದ್ರತಾ ಪಡೆಗಳ ಸದಸ್ಯರು, ಅಗ್ನಿಶಾಮಕ ದಳ ಸೇರಿದಂತೆ ಮೂರು ಕೋಟಿ ಮುಂಚೂಣಿ ಹೋರಾಟಗಾರರಿಗೆ ಲಸಿಕೆ ನೀಡುವ ಉದ್ದೇಶ ದೇಶದ್ದಾಗಿತ್ತು.

ಎರಡನೇ ಹಂತದ ಲಸಿಕೆ ಅಭಿಯಾನ ಈ ವರ್ಷದ ಮಾರ್ಚ್‌ನಲ್ಲಿ ಆರಂಭವಾಗಿದ್ದು , 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ನೀಡುವ ಗುರಿ ಇದರದ್ದಾಗಿತ್ತು . ಆದರೆ, ಏಪ್ರಿಲ್‌ ತಿಂಗಳಿನಲ್ಲಿ ಸರ್ಕಾರ 45 ವರ್ಷ ಮೇಲ್ಪಟ್ಟ ವಯೋಮಾನದವರಿಗೂ ಲಸಿಕೆ ನೀಡಲು ಆ ಮಾನದಂಡಗಳನ್ನು ಸಡಿಲಗೊಳಿಸಿತು. ಏಕೆಂದರೆ 45 ವರ್ಷ ಮೀರಿದ ಶೇ 90% ರಷ್ಟು ಮಂದಿಯಲ್ಲಿ ಕೋವಿಡ್ ಸಾವು- ನೋವುಗಳು ವರದಿಯಾದವು.

ಆದರೆ 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆಯನ್ನು ಸೀಮಿತಗೊಳಿಸುವ ನಿರ್ಧಾರ ಪ್ರತಿಪಕ್ಷಗಳ ಭಾರೀ ಟೀಕೆಗೆ ಗುರಿಯಾಯಿತು. ಅವು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವಂತೆ ಒತ್ತಾಯಿಸಿದವು. ಮಾರ್ಚ್‌ನಲ್ಲಿ 11, 500ರಷ್ಟಿದ್ದ ಕೋವಿಡ್‌ ಪ್ರಕರಣಗಳು, ಮೇ ಹೊತ್ತಿಗೆ 3.9 ಲಕ್ಷಕ್ಕೆ ಹೆಚ್ಚಳವಾಯಿತು . ಹಿಂದೆಂದೂ ಕಂಡಿರದಷ್ಟು ಪ್ರಮಾಣದಲ್ಲಿ ಹೆಚ್ಚಿದ ಸೋಂಕು ದೇಶ ಮಾತ್ರವಲ್ಲದೇ ಜಗತ್ತನೇ ಆಘಾತಕ್ಕೀಡು ಮಾಡಿದ್ದು ಲಸಿಕೆ ನೀಡಿಕೆ ವೇಗ ಹೆಚ್ಚಿಸುವ ಅಗತ್ಯವನ್ನು ಇದು ಎತ್ತಿ ತೋರಿಸಿದೆ.

ಸೋಂಕಿನ ಭಾರೀ ಹೆಚ್ಚಳ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಿವಾಸಿಗಳಿಗೆ ಲಸಿಕೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದೆ. ಅಲ್ಲದೆ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ಲಸಿಕೆ ತಯಾರಕರಿಂದ ನೇರವಾಗಿ ಲಸಿಕೆ ಪಡೆಯಲು ಅನುಮತಿ ನೀಡಿತು. ಆದರೆ ಲಸಿಕೆ ಕೇಂದ್ರಗಳಿಗೆ ಅಪಾರ ಸಂಖ್ಯೆಯ ಜನರ ಹರಿದುಬರುತ್ತಿರುವುದರಿಂದ ಹಲವು ಕಡೆಗಳಲ್ಲಿ ಲಸಿಕೆ ಕೊರತೆ ಉಂಟಾಯಿತು.

- ಕೃಷ್ಣಾನಂದ ತ್ರಿಪಾಠಿ, ಈಟಿವಿ ಭಾರತ

Last Updated : May 8, 2021, 4:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.