ನವದೆಹಲಿ: ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ ತರುವ ಕುರಿತು ಕೇಂದ್ರದ ಮೋದಿ ಸರ್ಕಾರ ಮಹತ್ಚದ ಹೇಳಿಕೆ ನೀಡಿದೆ. ಈ ಸಂಬಂಧ ಸರ್ಕಾರದ ವಿದೇಶಾಂಗ ಸಚಿವಾಲಯ ಶುಕ್ರವಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಭಾರತದಲ್ಲಿ ಆಳ್ವಿಕೆ ಸಂದರ್ಭದಲ್ಲಿ ಬ್ರಿಟಿಷರು ಕೊಹಿನೂರ್ ವಜ್ರ ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗಿದ್ದರು. ಅದರಲ್ಲೂ ಬ್ರಿಟಿಷ್ ರಾಣಿಯ ಕಿರೀಟವನ್ನು ಅಲಂಕರಿಸಿದ್ದ ಬೆಲೆಬಾಳುವ ಕೊಹಿನೂರ್ ವಜ್ರವನ್ನು ದೇಶಕ್ಕೆ ತರಬೇಕೆಂಬ ಮರಳಿ ಬೇಡಿಕೆ ಕಾಲಕಾಲಕ್ಕೆ ಇದ್ದೇ ಇದೆ. ಅದನ್ನು ವಾಪಸ್ ತರಬೇಕೆಂಬ ಅಭಿಯಾನವೂ ನಡೆಯುತ್ತಿದೆ. ಇದೀಗ ರಾಣಿ ಎಲಿಜಬೆತ್-II ನಿಧನದ ನಂತರ ಈ ಬೇಡಿಕೆ ಮತ್ತಷ್ಟು ಹೆಚ್ಚಾಗ ತೊಡಗಿದೆ.
ಇದನ್ನೂ ಓದಿ: 'ಕೊಹಿನೂರ್ ವಜ್ರ' ಜಗನ್ನಾಥ್ನಿಗೆ ಸೇರಿದ್ದು; ಬ್ರಿಟನ್ನಿಂದ ವಾಪಸ್ ತರಲು ರಾಷ್ಟ್ರಪತಿಗೆ ಮನವಿ
ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ ತರಬೇಕೆಂಬ ಬೇಡಿಕೆ ಮತ್ತು ಇತರ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಶ್ವದ ಅತಿದೊಡ್ಡ ವಜ್ರಗಳಲ್ಲಿ ಒಂದಾದ ಕೊಹಿನೂರ್ಅನ್ನು ಮರಳಿ ತರುವ ಕ್ರಮಗಳನ್ನು ಮುಂದುವರಿಸುವುದಾಗಿ ಸ್ಪಷ್ಟವಾಗಿ ಹೇಳಿದೆ.
ಇದನ್ನೂ ಓದಿ: ಭಾರತದ ಕೊಹಿನೂರ್ ಸೇರಿ ಬ್ರಿಟನ್ ದೋಚಿದ ಅಮೂಲ್ಯ ವಸ್ತುಗಳ್ಯಾವುವು ಗೊತ್ತೇ?
ಸುದ್ದಿ ಸಂಸ್ಥೆಯೊಂದರ ವರದಿ ಪ್ರಕಾರ, ಕೊಹಿನೂರ್ ವಜ್ರ ಮರಳಿ ತರಬೇಕೆಂಬ ಬೇಡಿಕೆ ಕುರಿತಾದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿ, ಕೊಹಿನೂರ್ ವಜ್ರಕ್ಕೆ ಸಂಬಂಧಿಸಿದಂತೆ ಸರ್ಕಾರವು ಕೆಲ ವರ್ಷಗಳ ಹಿಂದೆಯೇ ಸಂಸತ್ತಿನಲ್ಲಿ ಉತ್ತರ ನೀಡಿದೆ. ಈ ವಿಷಯದಲ್ಲಿ ತೃಪ್ತಿಕರ ಪರಿಹಾರವನ್ನು ಕಂಡುಕೊಳ್ಳುವ ಮಾರ್ಗಗಳನ್ನು ಮುಂದುವರಿಸುತ್ತೇವೆ ಎಂಬುವುದಾಗಿ ನಾವು ಹೇಳಿದ್ದೆವು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕ್ವೀನ್ ಎಲಿಜಬೆತ್ ನಿಧನ: ಯಾರಿಗೆ ಸಿಗಲಿದೆ ಕೊಹಿನೂರ್ ವಜ್ರದ ಕಿರೀಟ?
1849ರಲ್ಲಿ ಮಹಾರಾಜ ದುಲೀಪ್ ಸಿಂಗ್ ಅವರು 108 ಕ್ಯಾರೆಟ್ನ ಕೊಹಿನೂರ್ ವಜ್ರವನ್ನು ವಿಕ್ಟೋರಿಯಾ ರಾಣಿಗೆ ನೀಡಿದ್ದರು. ಇದನ್ನು ಬ್ರಿಟನ್ ರಾಣಿ 1937ರಲ್ಲಿ ತಮ್ಮ ಕಿರೀಟದ ಮೇಲೆ ಅಳವಡಿಸಿ, ಧರಿಸಲು ಆರಂಭಿಸಿದ್ದರು.
ಇದನ್ನೂ ಓದಿ: ಒಂದೇ ಮದುವೆಯಾದ್ರೂ ಮೂವರು ಪ್ರೇಯಸಿಯರನ್ನು ಹೊಂದಿರುತ್ತೀರಿ: ಉತ್ತರ ಪ್ರದೇಶದ ಎಐಎಂಐಎಂ ಮುಖ್ಯಸ್ಥನ ವಿವಾದ