ETV Bharat / bharat

ಬೀದಿನಾಯಿಗಳ ರಕ್ಷಕಿ ವೃದ್ಧೆಯ ಗುಡಿಸಲು ನೆಲಸಮ; ರಸ್ತೆಬದಿ ಮೈಕೊರೆವ ಚಳಿಯಲ್ಲೇ ಜೀವನ

author img

By

Published : Jan 3, 2023, 8:38 AM IST

ದೆಹಲಿಯಲ್ಲಿ ವಿಪರೀತ ಚಳಿಗಾಳಿ ಬೀಸುತ್ತಿದೆ. ಇದರ ಮಧ್ಯೆಯೂ 80 ವರ್ಷದ ವೃದ್ಧೆಯೊಬ್ಬರ ಗುಡಿಸಲು ಮತ್ತು ಗೂಡಂಗಡಿಯನ್ನು ಪಾಲಿಕೆ ಒಡೆದು ಹಾಕಿದೆ. ವೃದ್ಧೆಯ ರಕ್ಷಣೆಯಲ್ಲಿದ್ದ 300 ನಾಯಿಗಳು ಬೀದಿಪಾಲಾಗಿವೆ.

mcd-demolished-the-house
ಬೀದಿನಾಯಿಗಳ ರಕ್ಷಕಿ ವೃದ್ಧೆಯ ಗುಡಿಸಲು ನೆಲಸಮ

ನವದೆಹಲಿ: ದೆಹಲಿಯಲ್ಲಿ ದೇಹ ಕೊರೆಯುವಷ್ಟು ಚಳಿ ಇದೆ. ಮುಂದಿನ 5 ದಿನ ಶೀತ ಅಲೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಾನಗರ ಪಾಲಿಕೆ ಅಮಾನವೀಯವಾಗಿ ನಡೆದುಕೊಂಡಿದೆ. 80 ವರ್ಷದ ವೃದ್ಧೆ ವಾಸವಿದ್ದ ಮನೆಯನ್ನು ಅಕ್ರಮ ಎಂದು ಹೇಳಿ ನಾಶಪಡಿಸಿದೆ. ಹಿರಿಜೀವ ಈಗ ಬೀದಿಗೆ ಬಿದ್ದಿದ್ದು, ಚಳಿಗೆ ಮೈಯೊಡ್ಡಿ ಬದುಕಬೇಕಿದೆ.

ದೆಹಲಿ ಮಹಾಪಾಲಿಕೆಯ ಸಿಬ್ಬಂದಿ, ಶ್ವಾನಪ್ರೇಮಿ ಪ್ರತಿಮಾದೇವಿ ಎಂಬ ಹಿರಿಜೀವದ ಮನೆಯನ್ನು ಒಡೆದು ಹಾಕಿ, ಸಾಮಾನು ಸರಂಜಾಮುಗಳನ್ನು ಅಲ್ಲಿಂದ ತೆಗೆದುಹಾಕಿದ್ದಾರೆ. ಇದರಿಂದ ವೃದ್ಧೆ ಈಗ ನಿರಾಶ್ರಿತರಾಗಿದ್ದಾರೆ. ಮರದ ಕೆಳಗೆ ಆಕೆ ಬದುಕು ಸವೆಯುವಂತಾಗಿದೆ.

ಬೀದಿನಾಯಿಗಳ ರಕ್ಷಕಿಯಾಗಿದ್ದ ವೃದ್ಧೆ: ನಾಯಿಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ವೃದ್ಧೆ 38 ವರ್ಷಗಳಿಂದ ಅವುಗಳ ಆರೈಕೆ ಮಾಡುತ್ತಿದ್ದಾರೆ. 300 ಬೀದಿನಾಯಿಗಳನ್ನು ತಾನು ನಿರ್ಮಿಸಿದ ಚಿಕ್ಕ ಗುಡಿಸಲಿನಲ್ಲಿ ಸಾಕುತ್ತಿದ್ದರು. ಪಾಲಿಕೆ ಸಿಬ್ಬಂದಿ ಆ ಶೆಲ್ಟರ್​ ನೆಲಸಮ ಮಾಡಿದ್ದಾರೆ. ಇದರಿಂದ ನಾಯಿಗಳು ಕೂಡ ಚಳಿಗೆ ನಡುಗುತ್ತಿವೆ.

'ಪಾಲಿಕೆಯವರು ನನ್ನ ಚಿಕ್ಕ ಗುಡಿಸಲನ್ನು ಅಕ್ರಮ ಎಂದು ಆರೋಪಿಸಿ ನೆಲಕ್ಕುರುಳಿಸಿದ್ದಾರೆ. ಇದರಿಂದ ನಾನು ರಸ್ತೆ ಪಕ್ಕದ ಮರದಡಿ ಜೀವನ ನಡೆಸುವಂತಾಗಿದೆ. 300 ಬೀದಿನಾಯಿಗಳನ್ನು ಸಾಕಿದ್ದೇನೆ. ಈಗ ಅವುಗಳೂ ಕೂಡ ಆಶ್ರಯ ಕಳೆದುಕೊಂಡಿವೆ. ಪ್ರಾಣಿಗಳ ಬಗ್ಗೆ ನಾನು ಚಿಂತಿತನಾಗಿದ್ದೇನೆ' ಎಂದು ವೃದ್ಧ ಜೀವ ಹೇಳಿಕೊಂಡಿದೆ.

'ಗುಡಿಸಲನ್ನು ಕೆಡವಿದ್ದಲ್ಲದೇ ನಾಯಿಗಳ ಮೇಲೂ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಗೂಡಂಗಡಿಯನ್ನೂ ತೆರವು ಮಾಡಲಾಗಿದೆ. ಹೀಗಾಗಿ ನಾನು ಜೀವನ ನಡೆಸುವುದು ಕಷ್ಟವಾಗಲಿದೆ. ನಾಯಿಗಳಿಗೂ ಊಟ ಹಾಕಲು ಸಾಧ್ಯವಾಗುತ್ತಿಲ್ಲ. ವೃದ್ಧೆಯಾದ ನಾನು ಬೇರೆಡೆ ಕೆಲಸ ಮಾಡಲೂ ಶಕ್ತಿಯಿಲ್ಲ' ಎಂದು ಅಳಲು ತೋಡಿಕೊಂಡರು.

ದೆಹಲಿಯಲ್ಲಿ ಹೆಚ್ಚಿದ ಚಳಿ: ದೆಹಲಿಯಲ್ಲಿ ಈ ತಿಂಗಳು ಚಳಿ ವಿಪರೀತವಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಕನಿಷ್ಠ ತಾಪಮಾನ 7.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಒಂದು ವಾರ ಇದು ಅಧಿಕವಾಗಲಿದ್ದು, ಕನಿಷ್ಠ 5 ಡಿಗ್ರಿ ಗರಿಷ್ಠ 20 ಡಿಗ್ರಿ ಉಷ್ಣಾಂಶ ಇರಲಿದೆ ಎಂದಿದೆ. ಉತ್ತರ ಭಾರತದ ಹಲವು ರಾಜ್ಯಗಳಿಗೆ ಶೀತಗಾಳಿ ಬೀಸಲಿದ್ದು, ಎಚ್ಚರಿಕೆ ವಹಿಸಲು ಸೂಚಿಸಿದೆ.

ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಮುಂದಿನ 5 ದಿನ ಶೀತಗಾಳಿ ಸ್ಥಿತಿ ಇರಲಿದೆ. ದಟ್ಟ ಮಂಜು ಕವಿಯಲಿದೆ. ಇದರಿಂದ ಗೋಚರತೆ ಕಡಿಮೆಯಾಗಲಿದೆ. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.