ಹಮೀರ್‌ಪುರ (ಹಿಮಾಚಲ ಪ್ರದೇಶ): ದೇಶದಲ್ಲಿ ನಿರುದ್ಯೋಗ ನಿಜಕ್ಕೂ ಕಾಡುತ್ತಿದೆ ಎಂಬುದಕ್ಕೆ ಇಲ್ಲಿಯ ವಿದ್ಯಮಾನವೇ ಸಾಕ್ಷಿ. ಹಿಮಾಚಲಪ್ರದೇಶ ಸರ್ಕಾರ ಆಶಾ ಕಾರ್ಯಕರ್ತೆಯರ ನೇಮಕಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಎಸ್ಎಸ್ಎಲ್ಸಿ ಅರ್ಹತೆ ಇರುವ ಈ ಹುದ್ದೆಗೆ ಎಂಎ, ಎಂಎಸ್ಸಿ, ಬಿ.ಇಡಿ ಓದಿದವರು ಅರ್ಜಿ ಹಾಕಿದ್ದಾರೆ.
ಉನ್ನತ ಶಿಕ್ಷಣ ಪಡೆದವರು ಕಡಿಮೆ ಸಂಬಳದ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಿರುವುದು ಹೊಸದೇನಲ್ಲ. ಇಂತಹ ಸುದ್ದಿ ದೇಶದ ಹಲವೆಡೆಗಳಿಂದ ಬಂದಿದೆ. ಈಗ ಹಿಮಾಚಲದ ಹಮೀರ್‌ಪುರ ಜಿಲ್ಲೆಯಲ್ಲಿ ಇದು ಮತ್ತೆ ಮುನ್ನೆಲೆಗೆ ಬಂದಿದೆ. ಜಿಲ್ಲೆಯಲ್ಲಿ 71 ಆಶಾ ಕಾರ್ಯಕರ್ತೆಯರ ಹುದ್ದೆಗಳಿಗೆ ಬ್ಲಾಕ್‌ವಾರು ನೇಮಕಾತಿ ನಡೆಸಲಾಗುತ್ತಿದೆ. ಈ ನೇಮಕಾತಿಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅರ್ಜಿದಾರರು ಉನ್ನರ ಶಿಕ್ಷಣ ಪಡೆದವರೇ ಇದ್ದಾರೆ.
ಈ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆಯನ್ನು ಗ್ರಾಮೀಣ ಪ್ರದೇಶದಲ್ಲಿ 8ನೇ ತರಗತಿ ಉತ್ತೀರ್ಣ ಮತ್ತು ನಗರ ಪ್ರದೇಶದಲ್ಲಿ ಹತ್ತನೇ ತರಗತಿ ತೇರ್ಗಡೆ ಎಂದು ನಿಗದಿಪಡಿಸಲಾಗಿದೆ. 71 ಆಶಾ ಕಾರ್ಯಕರ್ತೆಯರ ಹುದ್ದೆಗೆ 350ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಎಂಎ, ಬಿ.ಇಡಿ ಮತ್ತು ಎಂಬಿಎ ವರೆಗೆ ಓದಿರುವ ಮಹಿಳೆಯರು ಆಶಾ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಓದಿ: 108 ಆಂಬ್ಯುಲೆನ್ಸ್ ನಂಬರ್ ಕನೆಕ್ಟ್ ಆಗ್ತಿಲ್ವಾ? ಹಾಗಿದ್ರೆ ಈ ನಂಬರ್ಗೆ ಕರೆ ಮಾಡಿ