ರಾಜಮಹೇಂದ್ರವರಂ(ಆಂಧ್ರಪ್ರದೇಶ): ಕೆಲವೊಮ್ಮೆ ಜೀವನದ ಅನುಭವವು ತುಂಬಾ ಸ್ಪರ್ಶವನ್ನುಂಟು ಮಾಡುತ್ತದೆ. ಕೆಲವೊಮ್ಮೆ ನಾವೂ ಅವರಿಂದ ಪ್ರೇರಣೆಯನ್ನು ಪಡೆಯುತ್ತೇವೆ. ಕೊರೊನಾ ಸಂದರ್ಭದಲ್ಲಿ ಈ ಯುವಕ ತನ್ನ ಕಾರ್ಯದಿಂದ ಎಲ್ಲರಿಗೂ ಸ್ಪೂರ್ತಿಯಾಗಿದ್ದಾನೆ
ರಾಜಮಂಡ್ರಿಯ ಹೊರವಲಯದಲ್ಲಿರುವ ಬೊಮ್ಮುರು ಗ್ರಾಮದವರಾದ ಭರತ್ ಭಾರ್ಗವನಿಗೆ 27 ವರ್ಷ. ಮೇಲಾಗಿ ಎಂಬಿಎ ಪದವೀಧರ. ಕೋವಿಡ್ ಸಂಕಷ್ಟದ ಸಮಯದಲ್ಲಿ ತಮ್ಮ ಕೈಲಾದ ಕಾರ್ಯವನ್ನು ಮಾಡಿ ಸಹಾಯ ಮಾಡುತ್ತಿದ್ದಾರೆ. ಕೊರೊನಾ ಭಯದಿಂದ ಮೃತರಾದ ಕುಟುಂಬದವರೂ ಸಹಾ ಶವ ಸಂಸ್ಕಾರಕ್ಕೆ ಹಿಂದು - ಮುಂದು ನೋಡುವಂತ ಸ್ಥಿತಿ ಇದೆ. ಅಂತಹ ಸಂದರ್ಭದಲ್ಲಿ ಮೃತರ ಶವಗಳಿಗೆ ಸ್ವತಃ ತಾವೇ ಅಂತಿಮ ವಿಧಿ ವಿಧಾನವನ್ನು ನೆರವೇರಿಸುತ್ತಿದ್ದಾರೆ ಭರತ್.
ಭರತ್ ಅವರ ತಂದೆ ದೀರ್ಘಕಾಲದ ಅನಾರೋಗ್ಯದಿಂದಾಗಿ ವಿಶಾಖಪಟ್ಟಣಂನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಾರೆ. ಈ ಸಂದರ್ಭ ಅವರ ಅಂತ್ಯಕ್ರಿಯೆಗೆ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಜೀವನದ ಈ ಕಹಿ ಅನುಭವ ಇಂತಹ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಪ್ರೇರೇಪಿಸಿದವು.
ತಮ್ಮ ತಂದೆ ಸಾವಿನ ಬಳಿಕ ಭಾರ್ಗವ ನಿರ್ಗತಿಕರು, ಅನಾರೋಗ್ಯ ಮತ್ತು ಬಡ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ವ್ಯಾನ್ ಖರೀದಿಸಿದರು. ಕಳೆದ ವರ್ಷ ಮಾರ್ಚ್‌ನಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಕೋವಿಡ್ನಿಂದ ಸಾವನ್ನಪ್ಪಿದ 100 ಕ್ಕೂ ಹೆಚ್ಚು ಜನರನ್ನು ಸಾಗಿಸಲು, ಸಂಸ್ಕಾರ ಮಾಡಲು ಭಾರ್ಗವ ಸಹಾಯ ಮಾಡಿದರು.
ನಾನು ಈ ಸೇವೆಯನ್ನು ಹೆಮ್ಮೆಯಿಂದ ಮಾಡುತ್ತೇನೆ. ನಾವು ಮಾಡುವ ಸೇವೆಗಾಗಿ ಕೆಲವರು ಹಣವನ್ನು ನೀಡುತ್ತಾರೆ. ಆದರೆ, ಕೋವಿಡ್ ರೋಗಿಗಳಿಗೆ ಸಹಾಯ ಮಾಡಲು ನಾವು ಅದನ್ನು ಖರ್ಚು ಮಾಡುತ್ತಿದ್ದೇವೆ, ಎಂದು ಹೇಳುತ್ತಾರೆ ಭರತ್.