ETV Bharat / bharat

ಕೃಷ್ಣ ಜನ್ಮಭೂಮಿ ವಿವಾದ.. ಮಥುರಾ ಶಾಹಿ ಸಂಬಂಧಿತ ಸಮಗ್ರ ವರದಿ ತಯಾರಿಕೆ ಪ್ರಕ್ರಿಯೆ ಇಂದಿನಿಂದ ಆರಂಭ - ಕೃಷ್ಣ ಜನ್ಮಭೂಮಿ ವಿವಾದ

ಇಂದಿನಿಂದ ಮಥುರಾ ಶಾಹಿ ಸಮಗ್ರ ವರದಿ ಪ್ರಕ್ರಿಯೆ ಆರಂಭ - ಹಿರಿಯ ವಿಭಾಗೀಯ ನ್ಯಾಯಾಧೀಶರ ಆದೇಶದ ನಂತರ ಪ್ರಕ್ರಿಯೆ ಆರಂಭ - ಜನವರಿ 2 ರಿಂದ ಜನವರಿ 20 ರ ಒಳಗೆ ಕೋರ್ಟ್​​ಗೆ ವರದಿ ಸಲ್ಲಿಸಲು ಅಮೀನ್​ಗೆ ಅವಕಾಶ

Krishna Janmabhoomi and Shahi Idga Controversy
ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ವಿವಾದ
author img

By

Published : Jan 2, 2023, 12:13 PM IST

ಮಥುರಾ( ಉತ್ತರಪ್ರದೇಶ): ಶ್ರೀಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಮಥುರಾದ ಹಿರಿಯ ವಿಭಾಗೀಯ ನ್ಯಾಯಾಧೀಶರ ಆದೇಶದ ಬಳಿಕ ಇಂದಿನಿಂದ ಈದ್ಗಾ ಸಮಗ್ರ ವರದಿ ಪ್ರಕ್ರಿಯೆ ಆರಂಭವಾಗುತ್ತಿದೆ. ಶಾಹಿ ಈದ್ಗಾದ ಅಮೀನ್ ನೀಡಿರುವ ವರದಿಯಲ್ಲಿ ಎಲ್ಲ 13.37 ಎಕರೆ ಜಮೀನು ಮತ್ತು ನಕ್ಷೆಯ ಸಮೀಕ್ಷೆ (ಶಾಹಿ ಮಸೀದಿ ಸಮೀಕ್ಷೆ) ಒಳಗೊಂಡಿದೆ ಎಂದಿದೆ. ಇದೀಗ ಅಮೀನ್ ಅವರು ಜನವರಿ 20ರ ಮೊದಲು ನ್ಯಾಯಾಲಯಕ್ಕೆ ತಮ್ಮ ವರದಿ ಸಲ್ಲಿಸಬೇಕು ಮತ್ತು ಜನವರಿ 20 ರಂದು ಹಿರಿಯ ಸಿವಿಲ್ ನ್ಯಾಯಾಧೀಶರ ವಿಭಾಗೀಯ ನ್ಯಾಯಾಧೀಶರಾದ ಸೋನಿಕಾ ವರ್ಮಾ ಅವರು ಈ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

ಮಥುರಾದಲ್ಲಿ ಕೃಷ್ಣನ ಜನ್ಮಸ್ಥಳದ ಬಳಿ ನಿರ್ಮಿಸಲಾದ ಶಾಹಿ ಈದ್ಗಾ ಮಸೀದಿಯ ವಿವಾದದ ಕುರಿತು ಇಂದಿನಿಂದ ಶಾಹಿ ಈದ್ಗಾ ಸಮೀಕ್ಷೆ ಆರಂಭವಾಗಲಿದೆ. ಮಥುರಾದ ಹಿರಿಯ ವಿಭಾಗೀಯ ನ್ಯಾಯಾಧೀಶರ ಆದೇಶದ ಬಳಿಕ ಈದ್ಗಾ ಸಮಗ್ರ ವರದಿ ಪ್ರಕ್ರಿಯೆ ಶುರುವಾಗಿದೆ. ಶಾಹಿ ಈದ್ಗಾದ ಅಮೀನ್ ಅವರ ವರದಿಯು ಎಲ್ಲಾ 13.37 ಎಕರೆ ಜಮೀನಿನ ಸರ್ವೆ ಮತ್ತು ಅಲ್ಲಿನ ನಕ್ಷೆಯ ಸಮೀಕ್ಷೆಯನ್ನು ಒಳಗೊಂಡಿದೆ ಎನ್ನಲಾಗಿದೆ.

ಜನವರಿ 20 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ: ಜನವರಿ 20ರೊಳಗೆ ಅಮೀನ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದ್ದು, ಜನವರಿ 20ರಂದು ಹಿರಿಯ ಸಿವಿಲ್ ನ್ಯಾಯಾಧೀಶರ ವಿಭಾಗದ ನ್ಯಾಯಾಧೀಶೆ ಸೋನಿಕಾ ವರ್ಮಾ ಅವರು ಈ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ. ಹಿಂದೂಗಳ ಮನವಿ ಮೇರೆಗೆ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗದ ನ್ಯಾಯಾಲಯವು ಶಾಹಿ ಈದ್ಗಾದ ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು. ನ್ಯಾಯಾಲಯದ ಈ ಆದೇಶದ ನಂತರ ಹಿಂದೂ ಸಮುದಾಯ ಕೋರ್ಟ್​ ತೀರ್ಪನ್ನು ಸ್ವಾಗತಿಸಿತ್ತು. ಆದರೆ, ಅನ್ಯಧರ್ಮದವರು ಈ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು.

ಇದೀಗ ನ್ಯಾಯಾಲಯದ ಆದೇಶದಂತೆ ಜನವರಿ 2 ರಿಂದ ಶಾಹಿ ಈದ್ಗಾ ಸರ್ವೆ ಆರಂಭವಾಗಲಿದ್ದು, ಜನವರಿ 20ರೊಳಗೆ ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಈ ಸಂಬಂಧ ಎಲ್ಲ ಕಕ್ಷಿದಾರರಿಗೂ ಸಿವಿಲ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ. 13.37 ಎಕರೆ ಜಮೀನನ್ನು ಹಿಂದೂಗಳಿಗೆ ನೀಡುವಂತೆ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಗುಪ್ತಾ ಅವರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್​​, ಅಮೀನ್ ಅವರಿಂದ ಈ ಬಗ್ಗೆ ವರದಿಯನ್ನು ಕೇಳಿದೆ.

ಹಿಂದೂಗಳ ಒತ್ತಾಯವೇನು: ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದಂತೆ ಆ ಸ್ಥಳದಲ್ಲಿ ಸ್ವಸ್ತಿಕ್ ಚಿಹ್ನೆ ಇದ್ದು, ಮಸೀದಿಯೊಳಗೆ ಹಲವು ದೇವಾಲಯಗಳಿರುವ ಬಗ್ಗೆ ಸಂಕೇತಗಳಿವೆ. ಅಲ್ಲದೆ, ಮಸೀದಿಯ ಕೆಳಗೆ ದೇವತೆಯ ಗರ್ಭಗುಡಿ ಮತ್ತು ಹಿಂದೂ ವಾಸ್ತುಶಿಲ್ಪದ ಪುರಾವೆಗಳು ಇಲ್ಲಿ ಇವೆ ಎಂಬ ವಾದವನ್ನು ಮುಂದಿಟ್ಟಿದೆ. ಇದನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದು ಹಿಂದೂ ಸಮುದಾಯದ ಕೆಲವರು ಬಯಸಿದ್ದು, ಇದಕ್ಕಾಗಿ ಒಂದು ವರ್ಷದ ಹಿಂದೆಯೇ ಕೋರ್ಟ್​​ಗೆ ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ಈದ್ಗಾ ಮಸೀದಿಯ ಕುರಿತು ಪರಿಶೀಲನೆ ನಡೆಸಬೇಕು ಎಂದು ಹಿಂದೂ ಸೇನೆ ಒತ್ತಾಯಿಸಿತ್ತು.

ಶಾಹಿ ಈದ್ಗಾ ನಿರ್ಮಾಣವಾಗಿದ್ದು, ಯಾವಾಗ?: ಶಾಹಿ ಈದ್ಗಾ ಮಸೀದಿಯು ಮಥುರಾ ನಗರದ ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯದ ಸಂಕೀರ್ಣದ ಪಕ್ಕದಲ್ಲಿದೆ. ಈ ಸ್ಥಳವನ್ನು ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಔರಂಗಜೇಬನು ಶ್ರೀ ಕೃಷ್ಣನ ಜನ್ಮಸ್ಥಳದ ಮೇಲೆ ನಿರ್ಮಿಸಲಾದ ಪ್ರಾಚೀನ ಕೇಶವನಾಥ ದೇವಾಲಯವನ್ನು ನಾಶಪಡಿಸಿದನು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.1669-70 ರಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

13.37 ಎಕರೆ ಜಮೀನು ಯಾರದ್ದು: 1935ರಲ್ಲಿ ಅಲಹಾಬಾದ್ ಹೈಕೋರ್ಟ್ ವಿವಾದಿತ 13.37 ಎಕರೆ ಭೂಮಿಯನ್ನು ಬನಾರಸ್‌ನ ರಾಜಾ ಕೃಷ್ಣ ದಾಸ್‌ಗೆ ಮಂಜೂರು ಮಾಡಿತ್ತು. 1951 ರಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ಈ ಟ್ರಸ್ಟ್ ಅನ್ನು 1958 ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು 1977 ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನದ ಹೆಸರಿನಲ್ಲಿ ನೋಂದಾಯಿಸಲಾಗಿದೆ.

1968 ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು ಶಾಹಿ ಈದ್ಗಾ ಸಮಿತಿಯ ನಡುವಿನ ಒಪ್ಪಂದದಲ್ಲಿ ಟ್ರಸ್ಟ್ ಈ 13.37 ರ ಮಾಲೀಕತ್ವವನ್ನು ಪಡೆಯಿತು. ಎಕರೆಗಟ್ಟಲೆ ಜಮೀನು ಮತ್ತು ಈದ್ಗಾ ಮಸೀದಿಯ ನಿರ್ವಹಣೆಯನ್ನು ಈದ್ಗಾ ಸಮಿತಿಗೆ ನೀಡಲಾಯಿತು. ಇದರ ನಂತರ, ಈ ವಿಷಯದ ಕುರಿತಾಗಿ ನಿರಂತರವಾಗಿ ವಾದ- ಪ್ರತಿವಾದಗಳು ನಡೆಯುತ್ತಲೇ ಇವೆ. ಇದೀಗ ಪುನಃ ಆ ಜಾಗದ ಕುರಿತು ಪ್ರಶ್ನೆ ಎದ್ದಿದ್ದು ಕೋರ್ಟ್​ನಲ್ಲಿ ವಾದ - ಪ್ರತಿವಾದಗಳು ನಡೆಯುತ್ತಿದ್ದು, ಕೋರ್ಟ್​ ನಿರ್ದೇಶನದ ಮೇರೆಗೆ ಅಮೀನ್​ ಅವರು ಸರ್ವೇ ನಡೆಸಿದ ಕೋರ್ಟ್​ಗೆ ವರದಿ ನೀಡಬೇಕಾಗಿದೆ. ಆ ಪ್ರಕ್ರಿಯೆಗಳು ಇಂದಿನಿಂದ ಶುರುವಾಗಲಿದೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಹೇಳುವುದೇನು?: ಈದ್ಗಾ ಸಮೀಕ್ಷೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ನಂತರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ. ಬಾಬರಿ ಮಸೀದಿಯ ನಿರ್ಧಾರದ ನಂತರ, ಇಂತಹ ಬೇಡಿಕೆಗಳು ಹೆಚ್ಚುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೀಗ ಮಥುರಾ ನ್ಯಾಯಾಲಯವು ಶಾಹಿ ಈದ್ಗಾ ಸಂಕೀರ್ಣದಲ್ಲಿರುವ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲು ಆಯುಕ್ತರನ್ನು ನೇಮಿಸಿದೆ. ಮಸೀದಿ ಮತ್ತು ಪಕ್ಕದ ದೇವಸ್ಥಾನದ ವಿವಾದದ ಬಗ್ಗೆ ಈಗಾಗಲೇ ಲಿಖಿತ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಿದ್ದರೂ ಮತ್ತೆ ವಿಚಾರಣೆ ನಡೆಯುತ್ತಿರುವುದು ಬೇಸರ ತರಿಸಿದೆ ಎಂದು ಓವೈಸಿ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಕೇಂದ್ರ ಸರ್ಕಾರದ ನೋಟು ಬ್ಯಾನ್‌ ನಿರ್ಧಾರ ಸರಿ ಎಂದ ಸುಪ್ರೀಂ ಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.