ಮಥುರಾ(ಉತ್ತರ ಪ್ರದೇಶ): ಶೇರ್ಗಢ ಮತ್ತು ಹೈವೇ ಪೊಲೀಸ್ ಠಾಣೆಗಳ ಗೋದಾಮುಗಳಲ್ಲಿ ಜಪ್ತಿ ಮಾಡಿ ಸಂಗ್ರಹಿಸಿಡಲಾಗಿದ್ದ ಸುಮಾರು 581 ಕೆಜಿಯಷ್ಟು ಗಾಂಜಾವನ್ನು ಇಲಿಗಳು ತಿಂದು ಹಾಕಿವೆ ಎಂದು ಮಥುರಾ ಪೊಲೀಸರು ವಿಶೇಷ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೊಪಿಕ್ ಸಬ್ಸ್ಟೆನ್ಸ್ ಆಕ್ಟ್(1985) ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಪ್ರಕರಣವೊಂದರಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ನ್ಯಾಯಾಲಯದ ಆದೇಶಕ್ಕೆ ಪ್ರತಿಯಾಗಿ ವರದಿಯನ್ನು ಸಲ್ಲಿಸಲಾಗಿದೆ. ವರದಿಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ನವೆಂಬರ್ 26 ರೊಳಗೆ ಸಾಕ್ಷ್ಯಗಳನ್ನು ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗಾಂಜಾವು ಸುಮಾರು 60 ಲಕ್ಷ ರೂಪಾಯಿ ಮೌಲ್ಯದ್ದಾಗಿದ್ದು, ಪೊಲೀಸರಿಗಿರುವ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯವನ್ನು ಈ ಪ್ರಕರಣವು ಎತ್ತಿ ತೋರಿಸುತ್ತಿದೆ ಎಂದು ಕೋರ್ಟ್ ಸಿಡಿಮಿಡಿಗೊಂಡಿದೆ.
ಇದನ್ನೂ ಓದಿ: ಚು.ಆಯುಕ್ತರ ನೇಮಕಾತಿ: ನ್ಯಾಯಾಂಗ ಉಪಸ್ಥಿತಿಯಿಂದ ಪಾರದರ್ಶಕತೆ ಅನ್ನೋದು ಊಹೆ- ಕೇಂದ್ರ ಸರ್ಕಾರ