ETV Bharat / bharat

ಲೈಂಗಿಕ ದೌರ್ಜನ್ಯ, ಕೊಲೆ ಅಪರಾಧಿಗೆ 15 ದಿನಗಳಲ್ಲೇ ಮರಣದಂಡನೆ ವಿಧಿಸಿದ ಮಥುರಾ ಕೋರ್ಟ್...!

ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣದ ಅಪರಾಧಿಗೆ ಮಥುರಾದ ಪೋಕ್ಸೊ ಕಾಯಿದೆ ನ್ಯಾಯಾಲಯವು ಕೇವಲ 15 ದಿನಗಳಲ್ಲಿ ಮರಣದಂಡನೆ ವಿಧಿಸಿದೆ. ವಿಚಾರಣೆ ವೇಳೆ ಅಪರಾಧಿಯೇ ಅಪರಾಧ ಕೃತ್ಯವನ್ನು ಒಪ್ಪಿಕೊಂಡಿದ್ದ.

mathura pocso court
ಲೈಂಗಿಕ ದೌರ್ಜನ್ಯ, ಕೊಲೆ ಅಪರಾಧಿಗೆ 15 ದಿನಗಳಲ್ಲೇ ಮರಣದಂಡನೆ ವಿಧಿಸಿದ ಮಥುರಾ ಕೋರ್ಟ್
author img

By

Published : May 29, 2023, 7:02 PM IST

ಮಥುರಾ (ಉತ್ತರ ಪ್ರದೇಶ): ಜಿಲ್ಲೆಯ ವಿಶೇಷ ಪೋಕ್ಸೊ ಕಾಯಿದೆ ನ್ಯಾಯಾಲಯವು ಕೇವಲ 15 ದಿನಗಳಲ್ಲಿ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸುವ ಮೂಲಕ ಸೋಮವಾರ ಇತಿಹಾಸ ಸೃಷ್ಟಿಸಿದೆ. ಪೊಲೀಸರ ಚುರುಕುತನ ಮತ್ತು ಎಲ್ಲ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಪರಾಧಿಗೆ 15 ದಿನಗಳಲ್ಲಿಯೇ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಹೌದು, ನ್ಯಾಯಾಲಯವು ಅಪರಾಧಿಗೆ ಮರಣದಂಡನೆ ವಿಧಿಸಿದೆ.

ಏಪ್ರಿಲ್ 8ಕ್ಕೆ ಕಾಣೆಯಾಗಿದ್ದ ಬಾಲಕ: ಸದರ್ ಬಜಾರ್ ಪೊಲೀಸ್ ಠಾಣೆಯ ಔರಂಗಾಬಾದ್ ಪ್ರದೇಶದ 9 ವರ್ಷದ ಬಾಲಕ ಏಪ್ರಿಲ್ 8 ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದನು. ಬಾಲಕನ ತಂದೆ ಏಪ್ರಿಲ್ 9 ರಂದು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಸೈಫ್ ಎಂಬ ವ್ಯಕ್ತಿ ಕಿಡ್ನಾಪ್ ಮಾಡಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

ಬಳಿಕ ಪೊಲೀಸರು ಬಾಲಕನ ಪತ್ತೆಗಾಗಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಇದರೊಂದಿಗೆ ತಂಡ ರಚಿಸಿ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು. ಈ ನಡುವೆ ಪೊಲೀಸರು ಔರಂಗಾಬಾದ್ ಪ್ರದೇಶದಲ್ಲಿ ಸೈಫ್‌ನನ್ನು ಬಂಧಿಸಿ, ವಿಚಾರಿಸಿದರು. ಪೊಲೀಸರು ಆರೋಪಿಯನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ, ಸೈಫ್ ಇಡೀ ಘಟನೆ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾನೆ. ಆರೋಪಿ ನೀಡಿರುವ ಸುಳಿವಿನ ಆಧರಿಸಿ, ಔರಂಗಾಬಾದ್ ಪ್ರದೇಶದಲ್ಲಿ ಬಾಲಕನ ಮೃತ ದೇಹವನ್ನು ಪತ್ತೆ ಹಚ್ಚಲಾಯಿತು.

ಕತ್ತು ಹಿಸುಕಿ ಕೊಲೆ: ಬಂಧಿತ ಸೈಫ್, ಅಪರಾಧ ಮಾಡಿದ ನಂತರ, ತನ್ನ ಗುರುತು ಬಹಿರಂಗಗೊಳ್ಳುವ ಭಯದಲ್ಲಿದ್ದ. ಇದರಿಂದಾಗಿ ಬಾಲಕನ ಕತ್ತು ಹಿಸುಕಿ ಕೊಂದಿದ್ದಾನೆ. ಹಂತಕ ಸೈಫ್ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯ ಸೆಕ್ಷನ್ 363, 302, 201, 377 ಹಾಗೂ ಸೆಕ್ಷನ್-6ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ಸೈಫ್ ಮೂಲತಃ ಕೆಡಿಎ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯ ಜಜ್ಮೌ ಕಾನ್ಪುರ ನಿವಾಸಿಯಾಗಿದ್ದು, ಔರಂಗಾಬಾದ್‌ನಲ್ಲಿ ವಾಸಿಸುತ್ತಿದ್ದ.

15 ದಿನಗಳಲ್ಲಿ ಸಾಬೀತಾಗಿದ ಅಪರಾಧ: ಸರ್ಕಾರಿ ವಕೀಲ ಅಲ್ಕಾ ಉಪಮನ್ಯು ಮಾತನಾಡಿ, 2023ರ ಏಪ್ರಿಲ್ 8ರಂದು ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ 30 ವರ್ಷದ ಸೈಫ್ 9 ವರ್ಷದ ಬಾಲಕನೊಂದಿಗೆ ಅನುಚಿತವಾಗಿ ವರ್ತಿಸಿದರು. ಇದಾದ ಬಳಿಕ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವ ಎಸೆದಿದ್ದಾರೆ. ಏಪ್ರಿಲ್ 28ರಂದು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2 ಮೇ 2023 ರಂದು ನ್ಯಾಯಾಲಯದಲ್ಲಿ ಆರೋಪಿಯ ಮೇಲೆ ಎಲ್ಲಾ ಆರೋಪಗಳು ಸಾಬೀತಾಗಿವೆ.

ಇದರಲ್ಲಿ ಒಟ್ಟು 14 ಸಾಕ್ಷಿಗಳನ್ನು ಹಾಜರುಪಡಿಸಲಾಗಿತ್ತು. ಮೊದಲ ಸಾಕ್ಷ್ಯವನ್ನು ಮೇ 8 ರಂದು ನಡೆಸಲಾಯಿತು. ಇನ್ನುಳಿದವರ ಸಾಕ್ಷ್ಯವು ಮೇ 18 ರಂದು ಕೊನೆಗೊಂಡಿತು. ಇದರ ನಂತರ, ಮೇ 22 ರಂದು ಅಂತಿಮ ಚರ್ಚೆ ನಡೆಯಿತು. ಮೇ 26 ರಂದು ವಿಶೇಷ ನ್ಯಾಯಾಧೀಶ ಪೋಕ್ಸೊ ಕಾಯ್ದೆಯ ನ್ಯಾಯಾಧೀಶ ರಾಮಕಿಶೋರ್ ಯಾದವ್ ಆರೋಪಿ ಸೈಫ್‌ಗೆ ವಿವಿಧ ಸೆಕ್ಷನ್‌ಗಳ ಅಡಿ ಕೋರ್ಟ್​ ಶಿಕ್ಷೆ ವಿಧಿಸಿದೆ. ನಂತರ ಸೋಮವಾರ, ನ್ಯಾಯಾಧೀಶರು ಅಪರಾಧಿಗೆ ಮರಣದಂಡನೆ ವಿಧಿಸಿದರು. ಇದರೊಂದಿಗೆ ಒಂದು ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ ಎಂದು ಸರ್ಕಾರಿ ವಕೀಲರು ಮಾಹಿತಿ ನೀಡಿದರು.

ಅತ್ಯಾಚಾರ ಆರೋಪಿಗೆ 26 ದಿನಗಳಲ್ಲಿ ಮರಣದಂಡನೆ: ಇದಕ್ಕೂ ಮೊದಲು, ಮಥುರಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಶೇಷ ನ್ಯಾಯಾಧೀಶ ಪೋಕ್ಸೊ ಕಾಯ್ದೆ ವಿಪಿನ್ ಕುಮಾರ್ ಅವರು 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ನಂತರ ಕೊಲೆ ಮಾಡಿದ್ದ ಅಪರಾಧಿಗೆ 26 ದಿನಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ್ದರು. ತಿಂಡಿ ನೀಡುವ ನೆಪದಲ್ಲಿ ಬಾಲಕಿಯನ್ನು ತನ್ನೊಂದಿಗೆ ಕರೆದೊಯ್ದಿದ್ದ. ನ್ಯಾಯಾಲಯ ಮತ್ತು ಪೊಲೀಸರ ಮುಂದೆ ಅಪರಾಧಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದನು.

ಪ್ರತಾಪಗಢದಲ್ಲಿ ಅತ್ಯಾಚಾರಿಗೆ 10 ದಿನಗಳಲ್ಲಿ ಶಿಕ್ಷೆ: ಇದಕ್ಕೂ ಮೊದಲು, ಪ್ರತಾಪ್‌ಗಢದ ಪೋಕ್ಸೊ ನ್ಯಾಯಾಲಯವು ಅತ್ಯಾಚಾರಿಗೆ 10 ದಿನಗಳಲ್ಲಿ ತನ್ನ ಕೊನೆಯ ಉಸಿರು ಇರುವವರೆಗೂ ಜೈಲಿನಲ್ಲೇ ಇರುವಂತೆ ಶಿಕ್ಷೆ ವಿಧಿಸಿತ್ತು. ತನ್ನ ಅಜ್ಜಿಯ ಬಳಿಗೆ ಬಂದ 6 ವರ್ಷದ ಬಾಲಕಿಯನ್ನು ಮಲಗಿದ್ದಾಗ ಗದ್ದೆಗೆ ಕರೆದೊಯ್ದು ಆರೋಪಿ ಅತ್ಯಾಚಾರ ಎಸಗಿದ್ದ. ಸಂಬಂಧಿಕರು ಹೊಲದಲ್ಲಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.

14 ದಿನದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ಅಮ್ರೋಹಾ ಕೋರ್ಟ್​: ಅದೇ ರೀತಿ ಅಮ್ರೋಹಾ ಜಿಲ್ಲೆಯಲ್ಲಿ 14 ದಿನಗಳಲ್ಲಿ ಅತ್ಯಾಚಾರ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 53 ಸಾವಿರ ರೂ. ದಂಡ ವಿಧಿಸಿತ್ತು. ಅಷ್ಟೇ ಅಲ್ಲ, ಚಾರ್ಜ್ ಶೀಟ್ ಸಲ್ಲಿಕೆಯಾದ 6 ದಿನಗಳಲ್ಲೇ ಕೋರ್ಟ್ ತೀರ್ಪು ನೀಡಿತ್ತು. ಈ ವೇಳೆ ಡಿಡೋಲಿ ಕೊತ್ವಾಲಿ ಪ್ರದೇಶದ ಯುವಕನೊಬ್ಬ ಅಪ್ರಾಪ್ತೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದನು. ಆರೋಪಿ 7 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಮಗಳ ಆರೋಗ್ಯ ಹದಗೆಟ್ಟಾಗ ಸಂಬಂಧಿಕರು ಮಗಳ ಅಲ್ಟ್ರಾಸೌಂಡ್ ಮಾಡಿಸಿದಾಗ ಗರ್ಭಿಣಿಯಾಗಿರುವ ಮಾಹಿತಿ ಲಭಿಸಿತ್ತು. ಇದಾದ ಬಳಿಕವಷ್ಟೇ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಭೀಕರ ಅಪಘಾತ: 10 ಮಂದಿ ಸಾವು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.