ETV Bharat / bharat

ಮಥುರಾದಲ್ಲಿ ಮಹಿಳೆಗೆ ಥಳಿತ, ಅಂಗಡಿಯಲ್ಲಿ ದಾಂಧಲೆ ಆರೋಪ: ಬಿಜೆಪಿ ಮುಖಂಡ ಸೇರಿ ನಾಲ್ವರು ಅರೆಸ್ಟ್​​

ಮಹಿಳೆ ಮತ್ತು ಆಕೆಯ ಸಹೋದರನಿಗೆ ಬಿಜೆಪಿ ಮುಖಂಡ ರಣವೀರ್ ಸಿಂಗ್ ಮತ್ತು ಆತನ ಕಡೆಯವರು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಹೀಗಾಗಿ ಎಚ್ಚೆತ್ತುಕೊಂಡ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 10 ಜನರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು.

author img

By

Published : Jun 12, 2022, 9:47 PM IST

Mathura: Local BJP leader arrested for thrashing woman, ransacking shop
ಮಥುರಾದಲ್ಲಿ ಮಹಿಳೆಗೆ ಥಳಿತ, ಅಂಗಡಿಯಲ್ಲಿ ದಾಂಧಲೆ: ಬಿಜೆಪಿ ಮುಖಂಡ ಸೇರಿ ನಾಲ್ವರು ಅರೆಸ್ಟ್​​

ಮಥುರಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಥುರಾದಲ್ಲಿ ಮಹಿಳೆ ಮತ್ತು ಆಕೆಯ ಸಹೋದರನಿಗೆ ಥಳಿಸಿದ ಆರೋಪದಡಿ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಯಾದ ಬಿಜೆಪಿ ಮುಖಂಡ ರಣವೀರ್ ಸಿಂಗ್ ಅಲಿಯಾಸ್ ರನ್ನೋ ಹಾಗೂ ಆತನ ಸಹಚರರಾದ ದೀನು, ವೀರೇಂದ್ರ ಮತ್ತು ಹರಿಶಂಕರ್ ಎಂಬುವವರೇ ಬಂಧಿತರು.

ಇಲ್ಲಿನ ಬರ್ಸಾನಾ ಪ್ರದೇಶದ ಜನ್ ಸುವಿಧಾ ಕೇಂದ್ರದಲ್ಲಿ ಮಹಿಳೆಯ ಅಂಗಡಿಗೆ ಬಿಜೆಪಿ ಮುಖಂಡ ರಣವೀರ್ ಸಿಂಗ್ ಹಾಗೂ ಇತರ ಆರೋಪಿಗಳು ನುಗ್ಗಿ ಗಲಾಟೆ ಮಾಡಿದ್ದರು. ಅಂಗಡಿಯನ್ನು ಖಾಲಿ ಮಾಡಿಸಿ, ತಾವು ಅತಿಕ್ರಮಣ ಮಾಡುವ ಉದ್ದೇಶದಿಂದ ದಾಂಧಲೆ ನಡೆಸಿದ್ದರು. ಈ ವೇಳೆ ಮಹಿಳೆ ಮತ್ತು ಆಕೆಯ ಸಹೋದರ ವಿರೋಧಿಸಿದಾಗ ಆರೋಪಿಗಳು ದೊಣ್ಣೆಗಳಿಂದ ದಾಳಿ ಮಾಡಿದ್ದರು ಎನ್ನಲಾಗ್ತಿದೆ. ಇದರಿಂದಾಗಿ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು.

ಮಹಿಳೆ ಮತ್ತು ಸಹೋದರನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಹೀಗಾಗಿ ಎಚ್ಚೆತ್ತುಕೊಂಡ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 10 ಜನರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ರಣವೀರ್ ಸಿಂಗ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಇತ್ತ, ಆರೋಪಿ ರಣವೀರ್ ಸಿಂಗ್ ಬಿಜೆಪಿಯ ನಂದಗಾಂವ್ ಮಂಡಲದ ಮುಖ್ಯಸ್ಥರಾಗಿದ್ದು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ಈ ಘಟನೆ ಕುರಿತಂತೆ ಬಿಜೆಪಿ ಕೂಡ ಆಂತರಿಕ ತನಿಖೆಗೆ ಆದೇಶಿಸಿದೆ. ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದ್ದು, 15 ದಿನಗಳಲ್ಲಿ ವರದಿ ಸಲ್ಲಿಸಲಿದೆ. ವರದಿ ಸಲ್ಲಿಕೆಯಾದ ನಂತರ ರಣವೀರ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಧು ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್​​ನಲ್ಲಿ ಅರ್ಧಕ್ಕೆ ಓದು ನಿಲ್ಲಿಸಿದ ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾದಲ್ಲಿ ಅಡ್ಮಿಷನ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.