ETV Bharat / bharat

ವಿವಾಹಿತ ಮಹಿಳೆ ಸಲಿಂಗಕಾಮಿ ಸಂಗಾತಿಯೊಂದಿಗೆ ವಿವಾಹವಾಗುವುದಾಗಿ ಹಠ: ಆತ್ಮಹತ್ಯೆಗೆ ಯತ್ನಿಸಿದ ಕುಟುಂಬಸ್ಥರು - ಈಟಿವಿ ಭಾರತ ಕನ್ನಡ

ಮಥುರಾದ ವಿವಾಹಿತ ಮಹಿಳೆಗೆ ಇನ್​ಸ್ಟಾಗ್ರಾಮ್​ ಮೂಲಕ ಗೋರಖ್‌ಪುರದ ಹುಡುಗಿ ಪರಿಚಯವಾಗಿ ಈಗ ಇಬ್ಬರೂ ಮದುವೆ ಆಗುವುದಾಗಿ ಹೇಳಿದ್ದಾರೆ. ಆದರೆ ಮಥುರಾದ ವಿವಾಹಿತ ಮಹಿಳೆಯ ಮನೆಯವರು ಇದಕ್ಕೆ ಒಪ್ಪದೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

mathura girl forced family to marry gorakhpur girl brother mother treid to commit suicide
ವಿವಾಹಿತ ಮಹಿಳೆ ಸಲಿಂಗಕಾಮಿ ಸಂಗಾತಿಯೊಂದಿಗೆ ವಿವಾಹವಾಗುದಾಗಿ ಹಟ
author img

By

Published : Sep 28, 2022, 9:25 PM IST

ಮಥುರಾ(ಉತ್ತರ ಪ್ರದೇಶ) : ವಿವಾಹಿತೆ ಒಬ್ಬಳು ತಾನು ಸಲಿಂಗಕಾಮಿಯೊಡನೆ ಇನ್ನೊಂದು ಮದುವೆ ಆಗುವುದಾಗಿ ಹೇಳಿದ್ದಕ್ಕೆ ಮನೆಯವರು ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಪೊಲೀಸರು ನಡುವೆ ಪ್ರವೇಶಿಸಿ ಮನೆಯವರ ಮನವೊಲಿಸಿದ್ದಾರೆ. ಈ ಪ್ರಕರಣ ಮಥುರಾ ಜಿಲ್ಲೆಯ ಕೋಸಿಕಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಏನಿದು ಪ್ರಕರಣ? : ಕೋಸಿಕಲಾದ ವಿವಾಹಿತೆ ಒಬ್ಬಳಿಗೆ ಇನ್‌ಸ್ಟಾಗ್ರಾಮ್ ಮೂಲಕ ಗೋರಖ್‌ಪುರದ ಹುಡುಗಿಯೊಂದಿಗೆ ಸ್ನೇಹ ಆಗಿದೆ. ಮೂರು ತಿಂಗಳ ಹಿಂದೆ ಮಥುರಾದ ಮಹಿಳೆ ಗೋರಖ್‌ಪುರಕ್ಕೆ ಓಡಿ ಹೋಗಿದ್ದರು. ಓಡಿ ಹೋಗಿದ್ದವರು ನಾಲ್ಕು ದಿನಗಳ ಹಿಂದೆ ಮರಳಿ ವಕೀಲರೊಂದಿಗೆ ಮಥುರಾಕ್ಕೆ ಬಂದಿದ್ದಾರೆ. ವಕೀಲರ ಮೂಲಕ ಕುಟುಂಬದಿಂದ ಬಿಡುಗಡೆ ಕೊಡುವಂತೆ ಕೇಳಿಕೊಂಡಿದ್ದಾರೆ ಮತ್ತು ಗೋರಖ್‌ಪುರದ ಹುಡುಗಿಯನ್ನು ಮದುವೆಯಾಗುವುದಾಗಿ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ.

ಆದರೆ ಇದಕ್ಕೆ ಮನೆಯವರು ಒಪ್ಪಿರಲಿಲ್ಲ. ಆದರೂ ಪಟ್ಟು ಬಿಡದೇ ವಿವಾಹಿತೆ ಲಾಯರ್​ ಮುಖೇನ ಪೊಲೀಸರ ಬಳಿಗೆ ಕುಟುಂಬಸ್ಥರನ್ನು ಕರೆದುಕೊಂಡು ಹೋಗಿದ್ದಾರೆ. ಕುಟುಂಬಸ್ಥರನ್ನು ಸಲಿಂಗ ಮದುವೆಗೆ ಒತ್ತಾಯಿಸಿದ್ದಾರೆ.

ಇದರಿಂದ ನೊಂದ ಮಹಿಳೆಯ ತಾಯಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ತಾಯಿಯನ್ನು ರಕ್ಷಿಸಿ ಮನವೊಲಿಕೆ ಮಾಡಿದ್ದಾರೆ. ನಂತರ ಸಂಲಿಗಕಾಮ ವಿವಾಹಕ್ಕೆ ಮನೆಯವರು ಒಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಮುರುಘಾ ಮಠ, ಶಿಕ್ಷಣ ಸಂಸ್ಥೆಯಲ್ಲಿ ಹೇಗೆ ಸಂಬಳ ನೀಡಲಾಗುತ್ತಿತ್ತು?: ಮಾಹಿತಿ ನೀಡಲು ಹೈಕೋರ್ಟ್ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.