ETV Bharat / bharat

ಪೊಲೀಸ್ ಠಾಣೆಯಲ್ಲೇ ನಿಗೂಢ ಸ್ಫೋಟ: ಗೋಡೆ, ಛಾವಣಿಗೆ ಹಾನಿ

ಒಡಿಶಾದ ಪುರಿ ಜಿಲ್ಲೆಯ ಬಾಲಂಗ ಪೊಲೀಸ್ ಠಾಣೆಯಲ್ಲಿ ಸ್ಫೋಟ ಸಂಭವಿಸಿ ಪೊಲೀಸ್​ ಠಾಣೆಯ ಗೋಡೆಗಳು ಮತ್ತು ಛಾವಣಿಗೆ ಹಾನಿಯಾಗಿದೆ.

Massive explosion rips through Balanga Police Station in Puri
ಪೊಲೀಸ್ ಠಾಣೆಯಲ್ಲಿ ಸ್ಫೋಟ: ಗೋಡೆ, ಛಾವಣಿಗೆ ಹಾನಿ
author img

By

Published : Sep 28, 2021, 12:12 PM IST

ಪುರಿ(ಒಡಿಶಾ): ಸ್ಫೋಟ ಸಂಭವಿಸಿ, ಪೊಲೀಸ್​ ಠಾಣೆಯ ಗೋಡೆಗಳು ಮತ್ತು ಛಾವಣಿಗೆ ಹಾನಿಯಾಗಿರುವ ಘಟನೆ ಒಡಿಶಾದ ಪುರಿ ಜಿಲ್ಲೆಯ ಬಾಲಂಗ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಇದೇ ಠಾಣೆಯ ಪಿಪಿಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೆಪ್ಟೆಂಬರ್ 30ಕ್ಕೆ ನಡೆಯಲಿದೆ.

ಸ್ಫೋಟದ ಹಿಂದಿನ ನಿಖರವಾದ ಕಾರಣವನ್ನು ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಪೊಲೀಸ್ ಠಾಣೆಯಲ್ಲಿಯೇ ಇದ್ದ ಸ್ಫೋಟಕಗಳು ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮಾಹಿತಿ ಪಡೆದ ಪುರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ವರ್ ವಿಶಾಲ್ ಸಿಂಗ್ ಮತ್ತು ಇತರ ಹಿರಿಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸ್​ ಠಾಣೆಯಲ್ಲಿ ಸಾಕಷ್ಟು ಮಂದಿ ಇರದ ಕಾರಣದಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಸೆಪ್ಟೆಂಬರ್ 30ರಂದು ಪಿಪಿಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ನಿಯೋಜನೆಯಾಗಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸಿಂದಗಿ, ಹಾನಗಲ್ ಸೇರಿ ದೇಶದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.