ಲುಧಿಯಾನ (ಪಂಜಾಬ್): ಪಂಜಾಬ್ನ ಲುಧಿಯಾನ ಜಿಲ್ಲಾ ನ್ಯಾಯಾಲಯದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಮಹಿಳೆ ಸೇರಿದಂತೆ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೋರ್ಟ್ನ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಇತರ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಕಿಡಿಗೇಡಿಗಳಿಂದ ಸಂತ ಆಂಟೋನಿ ವಿಗ್ರಹಕ್ಕೆ ಹಾನಿ
ಸ್ಥಳಕ್ಕೆ ಚಂಡೀಗಢದಿಂದ ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿವಿಜ್ಞಾನ ತಂಡ ಕೂಡ ಬಂದಿದ್ದು, ಚಂಡೀಗಢದ ಎನ್‌ಐಎ ಶಾಖೆಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯ ಇಬ್ಬರು ಸದಸ್ಯರ ತಂಡ ಲುಧಿಯಾನಕ್ಕೆ ಧಾವಿಸುತ್ತಿದೆ.