ಪುಣೆ (ಮಹಾರಾಷ್ಟ್ರ): ಶುಕ್ರವಾರ ಮಧ್ಯಾಹ್ನ ಹಿಂಜೇವಾಡಿಯ ಶಾಲೆಯೊಂದರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ (maharashtra police recruitment 2021) ಹಾಜರಾಗಲು ಆಗಮಿಸಿದ್ದ ಅಭ್ಯರ್ಥಿಯೊಬ್ಬರಿಂದ ಸಿಮ್ ಕಾರ್ಡ್, ಮೈಕ್ ಮತ್ತು ಬ್ಯಾಟರಿ ಹೊಂದಿದ್ದ ಎಲೆಕ್ಟ್ರಾನಿಕ್ ಸಾಧನ ಅಳವಡಿಸಿದ್ದ ಮಾಸ್ಕ್ ಅನ್ನು ಪಿಂಪ್ರಿ ಚಿಂಚ್‌ವಾಡ್ ಪೊಲೀಸರು (pimpri chinchwad police) ವಶಪಡಿಸಿಕೊಂಡಿದ್ದಾರೆ. ಅಭ್ಯರ್ಥಿ ಪರೀಕ್ಷಾ ಕೇಂದ್ರದಿಂದ ಪರಾರಿಯಾಗಿದ್ದಾನೆ.
ಅಭ್ಯರ್ಥಿಯ ವಿರುದ್ಧ ಹಿಂಜೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಿಂಜೆವಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ನಾಯಕ ಶಶಿಕಾಂತ್ ದೇವಕಾಂತ್ (34) ಅವರು ಶುಕ್ರವಾರ ಕಾನ್‌ಸ್ಟೇಬಲ್‌ಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಕೇಂದ್ರವಾಗಿದ್ದ ಬ್ಲೂ ರಿಡ್ಜ್ ಪಬ್ಲಿಕ್ ಸ್ಕೂಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಘಟನೆ ಜರುಗಿದ್ದು ಅವರು ದೂರು ದಾಖಲಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಿದ ಅಭ್ಯರ್ಥಿಗಳನ್ನು ಪರಿಶೀಲಿಸುವಾಗ, ಆರೋಪಿ ಧರಿಸಿದ್ದ ಮಾಸ್ಕ್‌ಗೆ ಎಲೆಕ್ಟ್ರಾನಿಕ್ ಸಾಧನ (electronic devices in mask) ಜೋಡಿಸಿರುವುದು ಪತ್ತೆಯಾಗಿದೆ. ಪೊಲೀಸರು ಆತನನ್ನು ಹಿಡಿಯುವ ಮುನ್ನವೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಫೇಸ್ ಮಾಸ್ಕ್‌ನಲ್ಲಿರುವ ಸಾಧನವು ಜೆಬಿಎಸ್ ಬ್ಯಾಟರಿ, ಚಾರ್ಜಿಂಗ್ ಪಾಯಿಂಟ್, ಏರ್‌ಟೆಲ್ ಸಿಮ್ ಕಾರ್ಡ್, ಸ್ವಿಚ್ ಮತ್ತು ಮೈಕ್ ಅನ್ನು ಹೊಂದಿದೆ. ಎಲ್ಲವೂ ವೈರ್‌ಗಳೊಂದಿಗೆ ಸಂಪರ್ಕ ಹೊಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.
ಓದಿ; ಎಲ್ಇಟಿಯ ಸ್ಲೀಪರ್ ಸೆಲ್ ಭೇದಿಸಿದ ಪುಲ್ವಾಮಾ ಪೊಲೀಸರು, ಐವರ ಬಂಧನ